ನವದೆಹಲಿ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಅವರು ಭಾನುವಾರದಂದು ಬೆಲಾರಸ್ನಲ್ಲಿ ರಷ್ಯಾದ ಶಾಂತಿ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.


COMMERCIAL BREAK
SCROLL TO CONTINUE READING

ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ವಾರ್ಸಾ, ಬ್ರಾಟಿಸ್ಲಾವಾ, ಇಸ್ತಾನ್‌ಬುಲ್, ಬುಡಾಪೆಸ್ಟ್ ಅಥವಾ ಬಾಕುವನ್ನು ರಷ್ಯಾದೊಂದಿಗೆ ಮಾತುಕತೆ ನಡೆಸಲಿರುವ ಸ್ಥಳಗಳಾಗಿ ಹೆಸರಿಸಿದ್ದಾರೆ, ಬೆಲಾರಸ್ ಹೊರತುಪಡಿಸಿ ಇನ್ಯ್ಯಾವುದೇ ಸ್ಥಳಗಳಾದರೆ ಚರ್ಚೆಗೆ ಸಿದ್ಧ ಅವರು ಹೇಳಿದ್ದಾರೆ ಎಂದು ಎಪಿ ವರದಿ ಮಾಡಿದೆ.


ಇದನ್ನೂ ಓದಿ: ಮಾರ್ಚ್‌ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೊಂದು ಸಂಕಷ್ಟ!


'ಈ ಸಮಯದಲ್ಲಿ, ನಾವು ಮಿನ್ಸ್ಕ್‌ಗೆ ಬೇಡವೆಂದು ಹೇಳುತ್ತಿದ್ದೇವೆ.ಇತರ ನಗರಗಳಲ್ಲಿ ಭೇಟಿ ಮಾಡಬಹುದು.ಸಹಜವಾಗಿ, ನಾವು ಶಾಂತಿಯನ್ನು ಬಯಸುತ್ತೇವೆ, ಭೇಟಿಯಾಗಲೂ ಬಯಸುತ್ತೇವೆ, ನಾವು ಇಚ್ಚಿಸುತ್ತಿರುವುದು ಯುದ್ಧ ಕೊನೆಗೊಳ್ಳಬೇಕು ಎನ್ನುವುದು, ಹಾಗಾಗಿ ನಾವು ಈಗ ವಾರ್ಸಾ, ಬ್ರಾಟಿಸ್ಲಾವಾ, ಬುಡಾಪೆಸ್ಟ್, ಇಸ್ತಾನ್ಬುಲ್, ಬಾಕು, ನಗರಗಳ ಹೆಸರುಗಳನ್ನೂ ರಷ್ಯಾಕ್ಕೆ ಸೂಚಿಸಿದ್ದೇವೆ ಮತ್ತು ಬೇರೆ ಯಾವುದೇ ನಗರವಾದರೂ ಸರಿ, ಯಾವ ಪ್ರದೇಶದಲ್ಲಿ ರಾಕೆಟ್ ಗಳು ಹಾರುವುದಿಲ್ಲ ಅದು ನಿಜವಾಗಿಯೂ ಯುದ್ಧವನ್ನು ಕೊನೆಗೊಳಿಸಲು ಇರುವ ಏಕೈಕ ಮಾರ್ಗವಾಗಿದೆ' ಎಂದು ಝೆಲೆನ್ಸ್ಕಿ(Volodymyr Zelenskyy)ವೀಡಿಯೊದಲ್ಲಿ ಹೇಳಿದರು.


ಮಿಲಿಟರಿ ಅಧಿಕಾರಿಗಳು ಮತ್ತು ರಾಜತಾಂತ್ರಿಕರು ಸೇರಿದಂತೆ ರಷ್ಯಾದ ನಿಯೋಗವು ಉಕ್ರೇನಿಯನ್ ಅಧಿಕಾರಿಗಳೊಂದಿಗೆ  ಮಾತುಕತೆಗಾಗಿ ಬೆಲರೂಸಿಯನ್ ನಗರವಾದ ಹೋಮೆಲ್‌ಗೆ ಆಗಮಿಸಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಈ ಹಿಂದೆ ಮಾಹಿತಿ ನೀಡಿದರು."ರಷ್ಯಾದ ನಿಯೋಗವು ಮಾತುಕತೆಗೆ ಸಿದ್ಧವಾಗಿದೆ, ಮತ್ತು ನಾವು ಈಗ ಉಕ್ರೇನಿಯನ್ನರಿಗಾಗಿ ಕಾಯುತ್ತಿದ್ದೇವೆ" ಎಂದು ಪೆಸ್ಕೋವ್ ಹೇಳಿದರು


ಇದನ್ನೂ ಓದಿ: 'ಉತ್ತರ ಪ್ರದೇಶದ ಜನರ ಅಭಿವೃದ್ಧಿಯು ಭಾರತದ ಅಭಿವೃದ್ಧಿಗೆ ವೇಗವನ್ನು ನೀಡುತ್ತದೆ -ಪ್ರಧಾನಿ ಮೋದಿ


ಶನಿವಾರದಂದು ಬೆಲರೂಸಿಯನ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರು ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಲು ಸ್ಥಳವನ್ನು ಒದಗಿಸಲು ಮಿನ್ಸ್ಕ್ ಸಿದ್ಧವಾಗಿದೆ ಎಂದು ಹೇಳಿದ್ದಾರೆ.ರಷ್ಯಾದ ಆಕ್ರಮಣವು ಗುರುವಾರ ಪ್ರಾರಂಭವಾದಾಗ ಉಕ್ರೇನ್ ಈ ಸ್ಥಳವನ್ನು ತಿರಸ್ಕರಿಸಿತು, ಪಡೆಗಳು ಉತ್ತರದಲ್ಲಿ ಮಾಸ್ಕೋದ ಮಿತ್ರ ಬೆಲಾರಸ್‌ನಿಂದ ಮತ್ತು ಪೂರ್ವ ಮತ್ತು ದಕ್ಷಿಣದಿಂದ ಚಲಿಸುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.