ನವದೆಹಲಿ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮುಂದಿನ ವಾರ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಚಾರವನ್ನು ಎತ್ತುವ ಸಾಧ್ಯತೆ ಇದೆ ಎಂದು ವಕ್ತಾರರು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುಎನ್ ಪ್ರಧಾನ ಕಾರ್ಯದರ್ಶಿ ವಕ್ತಾರ ಸ್ಟೀಫನ್ ಡುಜಾರಿಕ್ 'ಯುಎನ್ ಮುಖ್ಯಸ್ಥರು ಮಾತುಕತೆಯೊಂದೇ ಕಾಶ್ಮೀರದಲ್ಲಿನ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಂಡುಕೊಳ್ಳುವ ಮಾರ್ಗ ಎಂದು ತಿಳಿಸಿದ್ದಾರೆ, ಅಲ್ಲದೆ ಇದೇ ವೇಳೆ ಮಾನವ ಹಕ್ಕುಗಳ ವಿಚಾರವಾಗಿ ಖಚಿತ ಪಡಿಸಿಕೊಳ್ಳಲು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಸಾಮಾನ್ಯ ಸಭೆಯನ್ನು ಬಳಸಿಕೊಳ್ಳಲಿದ್ದಾರೆ ಎಂದು ಹೇಳಿದರು.


ಬುಧವಾರದಂದು ಗುಟೆರೆಸ್ ಅವರು ಭಾರತ ಮತ್ತು ಪಾಕಿಸ್ತಾನ ಕಾಶ್ಮೀರ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವುದು ಅಗತ್ಯವೆಂದು ಹೇಳಿದರು. ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಗೌರವಿಸಬೇಕು ಎಂಬ ಸ್ಪಷ್ಟ ಅಭಿಪ್ರಾಯದೊಂದಿಗೆ ನಾನು ಮುಂದುವರಿಯುತ್ತೇನೆ, ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂವಾದವು ಸಮಸ್ಯೆಯ ಪರಿಹಾರಕ್ಕೆ ಸಂಪೂರ್ಣ ಅಗತ್ಯ ಅಂಶವಾಗಿದೆ ಎಂಬ ಸ್ಪಷ್ಟ ಅಭಿಪ್ರಾಯದೊಂದಿಗೆ ನಾನು ಮುಂದುವರಿಯುತ್ತೇನೆ' ಎಂದು ಗುಟೆರೆಸ್ ಹೇಳಿದರು.


ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಭಾರತ ಯಾವಾಗಲೂ ಕಾಪಾಡಿಕೊಂಡಿದೆ ಮತ್ತು ಯುಎನ್ ಅಥವಾ ಯುಎಸ್ ಸೇರಿದಂತೆ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ತಳ್ಳಿಹಾಕಿದೆ, ಇದು ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ವಿಷಯವಾಗಿದೆ ಎಂದು ಹೇಳಿದೆ. ಇನ್ನೊಂದೆಡೆಗೆ ವಿಶ್ವಸಂಸ್ಥೆ ಉಭಯದೇಶಗಳ ಪಕ್ಷಗಳು ಒಪ್ಪಿದಲ್ಲಿ ಮಾತ್ರ ಮಧ್ಯಸ್ಥಿಕೆ ವಹಿಸುವುದಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.


ಆಗಸ್ಟ್ 5 ರಂದು ಭಾರತ  ಜಮ್ಮು ಮತ್ತು ಕಾಶ್ಮೀರದ 'ತಾತ್ಕಾಲಿಕ ವಿಶೇಷ ಸ್ಥಾನಮಾನ'ವನ್ನು ರದ್ದುಪಡಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಯಿತು. ಪಾಕಿಸ್ತಾನವು ನವದೆಹಲಿಯೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿ ಭಾರತೀಯ ಹೈಕಮಿಷನರ್ ಅವರನ್ನು ವಾಪಸ್ ಕಳುಹಿಸಿದೆ. ಪಾಕಿಸ್ತಾನವು ಕಾಶ್ಮೀರ ಸಮಸ್ಯೆಯನ್ನು ಅಂತರಾಷ್ಟ್ರೀಕರಿಸಲು ಪ್ರಯತ್ನಿಸುತ್ತಿದೆ ಆದರೆ 370 ನೇ ವಿಧಿಯನ್ನು ರದ್ದುಪಡಿಸುವುದು ಭಾರತದ ಆಂತರಿಕ ವಿಷಯ ಎಂದು ಈಗಾಗಲೇ ಭಾರತ ಸ್ಪಷ್ಟಪಡಿಸಿದೆ.


ಸೆಪ್ಟೆಂಬರ್ 27 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಯುಎನ್ ಜನರಲ್ ಅಸೆಂಬ್ಲಿ (ಯುಎನ್‌ಜಿಎ) ಅಧಿವೇಶನದಲ್ಲಿ ಕಾಶ್ಮೀರ ಸಮಸ್ಯೆಯನ್ನು ಎತ್ತುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರತಿಜ್ಞೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಅದೇ ದಿನ ಮಾತನಾಡಲಿದ್ದಾರೆ.