Paracetamol Use: ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಪ್ಯಾರಸಿಟಮಾಲ್ ಬಳಕೆ ವೇಗವಾಗಿ ಹೆಚ್ಚಾಗಿದೆ. ಇದರ ಅತಿಯಾದ ಬಳಕೆಯು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಇದರ ದೈನಂದಿನ ಬಳಕೆಯು ರಕ್ತದೊತ್ತಡ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಪ್ಯಾರೆಸಿಟಮಾಲ್ (Paracetamol 500mg) ತೆಗೆದುಕೊಳ್ಳುವಾಗ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ
ಪ್ಯಾರಸಿಟಮಾಲ್ ತೆಗೆದುಕೊಳ್ಳುವಾಗ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯದಲ್ಲಿರುವ ಜನರು ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಂಶೋಧನೆಯಲ್ಲಿ ತೊಡಗಿರುವ ತಜ್ಞರು ಸಲಹೆ ನೀಡಿದ್ದಾರೆ.


110 ರೋಗಿಗಳ ಮೇಲೆ ಸಂಶೋಧನೆ ನಡೆಸಲಾಗಿದೆ
ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ತಜ್ಞರು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳ ಮೇಲೆ ಈ ಸಂಶೋಧನೆಯನ್ನು ನಡೆಸಿದ್ದಾರೆ. ಅಧಿಕ ರಕ್ತದೊತ್ತಡದ ಇತಿಹಾಸ ಹೊಂದಿರುವ 110 ರೋಗಿಗಳನ್ನು ಸಂಶೋಧನೆಯಲ್ಲಿ ಸೇರಿಸಲಾಗಿತ್ತು.


ರೋಗಿಗಳಿಗೆ ಎರಡು ವಾರಗಳವರೆಗೆ ಪ್ಯಾರೆಸಿಟಮಾಲ್ ನೀಡಲಾಗಿತ್ತು
ರೋಗಿಗಳಿಗೆ ಎರಡು ವಾರಗಳವರೆಗೆ ದಿನಕ್ಕೆ ನಾಲ್ಕು ಬಾರಿ ಪ್ಯಾರಸಿಟಮಾಲ್ ಮಾತ್ರೆಗಳನ್ನು ನೀಡಲಾಗಿತ್ತು. ನಾಲ್ಕು ದಿನಗಳ ನಂತರ ಪರೀಕ್ಷಿಸಿದಾಗ, ಈ ರೋಗಿಗಳ ರಕ್ತದೊತ್ತಡ ಗಮನಾರ್ಹವಾಗಿ ಹೆಚ್ಚಾಗಿದೆ. ಅಧಿಕ ರಕ್ತದೊತ್ತಡದಿಂದಾಗಿ, ಈ ರೋಗಿಗಳಲ್ಲಿ ಹೃದಯಾಘಾತದ ಸಾಧ್ಯತೆಗಳು ಶೇ.20ರಷ್ಟು ಹೆಚ್ಚಾಗಿದ್ದನ್ನು ಗಮನಿಸಲಾಗಿದೆ.


ಯುಕೆಯಲ್ಲಿ ಅತಿ ಹೆಚ್ಚು ಪ್ಯಾರಸಿಟಮಾಲ್‌ನ ಬಳಕೆ
ಈ ಸಂಶೋಧನೆಯನ್ನು ಬ್ರಿಟನ್ ಜನರ ಮೇಲೆ ಮಾಡಲಾಗಿದೆ. UK ಯಲ್ಲಿ ಸುಮಾರು 10 ಜನರಲ್ಲಿ ಒಬ್ಬರು ದೀರ್ಘಕಾಲದ ನೋವಿಗೆ ದೈನಂದಿನ ಪ್ಯಾರೆಸಿಟಮಾಲ್ ಪೂರಕಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದು ಇಲ್ಲಿ ಉಲ್ಲೇಖನೀಯ. UK ಯಲ್ಲಿ ಸುಮಾರು ಮೂರು ವಯಸ್ಕರಲ್ಲಿ ಒಬ್ಬರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.


ಈ ರೋಗಿಗಳು ಪ್ಯಾರಸಿಟಮಾಲ್ ನಿಂದ ದೂರವಿರಬೇಕು
ಈ ಕುರಿತು ಮಾತನಾಡಿರುವ ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡೇವಿಡ್ ವೆಬ್, ಇದುವರೆಗೆ  ಪ್ಯಾರಸಿಟಮಾಲ್ ಅನ್ನು ಸುರಕ್ಷಿತ ಔಷಧವಾಗಿ ನೋಡಲಾಗುತ್ತಿತ್ತು. ಆದರೆ ಈ ಸಂಶೋಧನೆಯ ನಂತರ, ಹೃದಯಾಘಾತದ ಅಪಾಯದಲ್ಲಿರುವ ರೋಗಿಗಳು ಪ್ಯಾರೆಸಿಟಮಾಲ್ನಿಂದ ದೂರವಿರಬೇಕು ಎಂದು ನಾವು ಸಲಹೆ ನೀಡುತ್ತೇವೆ. ಅಗತ್ಯವಿರುವಷ್ಟು ಮಾತ್ರ ಪ್ಯಾರೆಸಿಟಮಾಲ್ ಅನ್ನು ನೀಡುವಂತೆ ಅವರು ವೈದ್ಯರನ್ನು ಅವರು ಒತ್ತಾಯಿಸಿದ್ದಾರೆ.


ಪ್ಯಾರಸಿಟಮಾಲ್ನ ಸಾಂದರ್ಭಿಕ ಬಳಕೆ
ಎನ್‌ಎಚ್‌ಎಸ್ ಲೋಥಿಯನ್‌ನಲ್ಲಿ ಕ್ಲಿನಿಕಲ್ ಫಾರ್ಮಾಕಾಲಜಿ ಮತ್ತು ನೆಫ್ರಾಲಜಿಯ ಕನ್ಸಲ್ಟೆಂಟ್ ಲೀಡ್ ಇನ್ವೆಸ್ಟಿಗೇಟರ್ ಡಾ ಇಯಾನ್ ಮ್ಯಾಕ್‌ಇಂಟೈರ್ ಹೇಳುವ ಪ್ರಕಾರ, 'ತಲೆನೋವು ಅಥವಾ ಜ್ವರಕ್ಕೆ ಸಾಂದರ್ಭಿಕವಾಗಿ ಪ್ಯಾರೆಸಿಟಮಾಲ್ ಅನ್ನು ಬಳಸುವುದು ಉತ್ತಮ. ಆದರೆ ದೀರ್ಘಕಾಲದ ನೋವಿಗಾಗಿ ಸಾಮಾನ್ಯವಾಗಿ ದೀರ್ಘಕಾಲದವರೆಗೆ ನಿಯಮಿತವಾಗಿ ಪ್ಯಾರೆಸಿಟಮಾಲ್ ಬಳಕೆ ಅಪಾಯ ಹೆಚ್ಚಿಸುತ್ತದೆ ಎಂದಿದ್ದಾರೆ.


ವೈದ್ಯರೂ ಜಾಗೃತರಾಗಬೇಕು
ಜನರು ಪ್ಯಾರಸಿಟಮಾಲ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ ಅವರ ರಕ್ತದೊತ್ತಡವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ ಎಂದು ತಜ್ಞರು ಹೇಳಿದ್ದಾರೆ. ಆದ್ದರಿಂದ ವೈದ್ಯರು ಪ್ಯಾರೆಸಿಟಮಾಲ್ ತೆಗೆದುಕೊಳ್ಳುವ ರೋಗಿಗಳಿಗೆ ಅದರ ಅಪಾಯಗಳ ಬಗ್ಗೆ ನಿಯಮಿತವಾಗಿ ತಿಳಿಸುವುದು ಬಹಳ ಮುಖ್ಯ ಎಂದು ಸಂಶೋಧಕರು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.