ಅಮೆರಿಕ : ಇದು ಕರೋನಾ ಕಾಲ. ಈ ಹೊತ್ತಿನಲ್ಲಿ ಕೆಲಸ ಕಳೆದುಕೊಂಡು (Job Loss) ಮನೆಗೆ ಬರುವವರ ಸಂಖ್ಯೆಯೇ ಅಧಿಕ.  ಈ ಹೊತ್ತಿನಲ್ಲಿಅಚ್ಚರಿ ಸುದ್ದಿಯೊಂದು ಅಮೇರಿಕದಿಂದ ಹೊರ ಬಿದ್ದಿದೆ. ಈ ಸುದ್ದಿ ಸಾಕಷ್ಟು ವೈರಲ್ (Viral) ಕೂಡಾ ಆಗುತ್ತಿದೆ.


COMMERCIAL BREAK
SCROLL TO CONTINUE READING

ಶ್ವಾನರಾಯರಿಗೆ ಜಾಬ್ offer:
ಇದು ಜೋಕ್ ಅಲ್ಲ. ಸತ್ಯ ಸುದ್ದಿ. ಇಲ್ಲಿ ಜಾಬ್ ಆಫರ್  (Job Offer) ಇರುವುದು  ಶ್ವಾನರಾಯರಿಗೆ. ಅಂದರೆ ನಾಯಿಗೆ.  ಅಮೆರಿಕದ ಬೀಯರ್ ಕಂಪನಿಯೊಂದು ನಾಯಿಗಳಿಗೆ ವೇಕೆನ್ಸಿ (Dog Vaccancy) ಇದೆ ಎಂದು ಟ್ವೀಟ್ ಮಾಡಿದೆ. ಜೊತೆಗೆ ಭರ್ಜರಿ ಸ್ಯಾಲರಿ (Salary), ಇನ್ಸೂರೆನ್ಸ್ ಕೂಡಾ ಆಫರ್ ಮಾಡಿದೆ. 


ಇದನ್ನೂ ಓದಿ : Latest Viral News: ನಗರದ ಹೆಸರು ಕೇಳಿ ಕನ್ಫ್ಯೂಸ್ ಆದ ಫೇಸ್ ಬುಕ್, ಬೈಗುಳ ಎಂದು ಪುಟ ತೆಗೆದುಹಾಕಿ ಬಳಿಕ ಕ್ಷಮೆಯಾಚನೆ


ಶ್ವಾನರಾಯರು ಆಗಲಿದ್ದಾರೆ ಚೀಫ್ ಟೆಸ್ಟಿಂಗ್ ಆಫಿಸರ್.!
ಅಮೆರಿಕದ ಬುಶ್ ಬೀಯರ್  ಎಂಬ ಕಂಪನಿ ಚೀಫ್ ಟೆಸ್ಟಿಂಗ್ ಆಫಿಸರ್ ಹುದ್ದೆಗೆ ಯೋಗ್ಯ ನಾಯಿಯ (Dog) ಹುಡುಕಾಟದಲ್ಲಿದೆ. ತನ್ನ ಟ್ವಿಟರ್ (Twitter) ಹ್ಯಾಂಡಲಿನಲ್ಲಿ ಜಾಹೀರಾತು ಕೂಡಾ ಪ್ರಕಟಿಸಿದೆ. ಈ ಪ್ರಕಟಣೆ ಸಾಕಷ್ಟು ವೈರಲ್ ಕೂಡಾ ಆಗಿದೆ. ಕೈತುಂಬಾ ಸ್ಯಾಲರಿ ಕೂಡಾ ಸಿಗಲಿದೆ.


Insurance) ಸಿಗಲಿದೆ. ಜೊತೆಗೆ ಇತರ ಹಲವು ಪ್ರಯೋಜನಗಳನ್ನು ಕಂಪನಿ ನೀಡಲಿದೆ. 


 


ಇದನ್ನೂ ಓದಿ : ಈ ದೇಶದಲ್ಲಿ ಎಲ್ಲಾ ಸೋಶಿಯಲ್ ಮೀಡಿಯಾಗಳು ಬಂದ್!


ಆಫಿಸರ್ ಶ್ವಾನರಾಯರ ಜವಾಬ್ದಾರಿ ಏನು.?
ಅದ್ವಿತೀಯ ಸ್ವಾದ ಮತ್ತು ಫ್ಲೇವರ್ಸ್ ಸಂಶೋಧನೆ ಮತ್ತು ಪೆಟ್ ಪ್ರಾಜೆಕ್ಟ್ಸ್ ಈ ಹುದ್ದೆಗೆ ನೇಮಕಗೊಳ್ಳುವ ನಾಯಿಯ ಜವಾಬ್ದಾರಿಯಾಗಲಿದೆ.  ಕ್ವಾಲಿಟಿ ಕಂಟ್ರೋಲ್ ಮತ್ತು ಕಂಪನಿಯ ಬ್ರಾಂಡ್ ಅಂಬಾಸಡರ್ ಜವಾಬ್ದಾರಿಯನ್ನೂ ಶ್ವಾನರಾಯರು ನಿಭಾಯಿಸಬೇಕಾಗಿದೆ. 


ಏಪ್ರಿಲ್ 28 ಅಂತಿಮ ದಿನಾಂಕ:
ಈ ನೇಮಕಾತಿ ಹಿನ್ನೆಲೆಯಲ್ಲಿ ಬುಶ್ ಬೀಯರ್ ಕಂಪನಿಯು ಒಂದು ಸ್ಪರ್ಧೆ ಏರ್ಪಡಿಸಿದೆ. ನಾಯಿಯ ಮಾಲೀಕರು (Owner of Dog) ತಮ್ಮ ನಾಯಿಯ ಉತ್ತಮ ಫೋಟೋ ಕಳುಹಿಸಬೇಕು.  ಅವರ ನಾಯಿ ಈ ಹುದ್ದೆಗೆ ಯಾಕೆ ಬೆಸ್ಟ್ ಕ್ಯಾಂಡಿಡೇಟ್ ಅನ್ನೋದನ್ನು ತಿಳಿಸಬೇಕು.  ಅರ್ಜಿ ಸಲ್ಲಿಸಲು ಏಪ್ರಿಲ್ 28 ಕೊನೆಯ ದಿನಾಂಕವಾಗಿದೆ. ನೀವೂ ಒಂದು ಟ್ರೈ ಮಾಡಬಹುದೇನೋ.!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.