`China ಒಂದು ದಿನ ಆಕಸ್ಮಿಕ ಪರಮಾಣು ದಾಳಿ ನಡೆಸಬಹುದು`, ಹೀಗಂತ US ಮಿಲಿಟರಿ ಉನ್ನತಾಧಿಕಾರಿ ಹೇಳಿದ್ಯಾಕೆ?
US On China Nuclear Attack - ಈ ಕುರಿತು ಎಚ್ಚರಿಕೆ ನೀಡಿರುವ ಅಮೆರಿಕದ ಮಿಲಿಟರಿಯ ಎರಡನೇ ಅತ್ಯುನ್ನತ ಅಧಿಕಾರಿ, ಚೀನಾ ಒಂದು ದಿನ ಇದ್ದಕ್ಕಿದ್ದಂತೆ ಅಮೆರಿಕದ ಮೇಲೆ ಪರಮಾಣು ದಾಳಿ ನಡೆಸಬಹುದು ಎಂದು ಹೇಳಿದ್ದಾರೆ.
ವಾಷಿಂಗ್‌ಟನ್: US On China Nuclear Attack - ಅಮೆರಿಕದ (US) ಮೇಲೆ ಚೀನಾ ಏಕಾಏಕಿ ಅಣ್ವಸ್ತ್ರ ದಾಳಿ ನಡೆಸಬಹುದು ಎಂದು ಅಮೆರಿಕ ಸೇನೆಯ ಎರಡನೇ ಅತ್ಯುನ್ನತ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಜುಲೈನಲ್ಲಿ ಬೀಜಿಂಗ್‌ನಿಂದ ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳ ತನಿಖೆಯ ಹೊಸ ವಿವರಗಳ ಮೇಲೆ ಯುಎಸ್ ಬೆಳಕು ಚೆಲ್ಲಿದೆ. ಆ ಸಮಯದಲ್ಲಿ ಬೀಜಿಂಗ್ ಶಬ್ದದ ವೇಗಕ್ಕಿಂತ 5 ಪಟ್ಟು ವೇಗದ ಹೈಪರ್ ಸಾನಿಕ್ ಮಿಸೈಲ್ ಲಾಂಚ್ ಮಾಡಿದೆ.
ಚೀನಾದ ಕ್ಷಿಪಣಿ ಇಡೀ ಭೂಮಿಯನ್ನು ಸುತ್ತಿದೆ
ಜುಲೈ 27 ರಂದು ಚೀನಾದ ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳ (Hypersonic Missile)ಪರೀಕ್ಷೆಯ ಕುರಿತು ಪ್ರತಿಕ್ರಿಯಿಸಿದ ಜಂಟಿ ಮುಖ್ಯಸ್ಥರ ಉಪಾಧ್ಯಕ್ಷ ಜನರಲ್ ಜಾನ್ ಹೈಟೆನ್ (US On China Nuclear Attack) ಅವರು 'ಚೀನಾ ಅತ್ಯಂತ ಸುದೀರ್ಘ ರೇಂಜ್ ಹೊಂದಿರುವ ಕ್ಷಿಪಣಿಯನ್ನು ಪರೀಕ್ಷಿಸಿದ್ದಾರೆ. ಅದು ಜಗತ್ತನ್ನು ಸುತ್ತಿ, ಚೀನಾಕ್ಕೆ ಹಿಂದಿರುಗಿದೆ. ಅಂದರೆ ಉಡಾವಣೆಗೊಂಡ ಹೈಪರ್‌ಸಾನಿಕ್ ಗ್ಲೈಡ್ ವಾಹನ ತನ್ನ ನಿರ್ಧಿಷ್ಟ ಕ್ಷಿಪಣಿ ಚೀನಾಗೆ ಹಿಂದಿರುಗಿದೆ ಎಂದು ಸಿಬಿಎಸ್ ನ್ಯೂಸ್ ಗೆ ಅವರು ಮಾಹಿತಿ ನೀಡಿದ್ದಾರೆ. ಕ್ಷಿಪಣಿ ನಿರ್ಧಿಷ್ಟ ಗುರಿ ತಲುಪಿದೆಯೇ ಎಂದು ಅವರನ್ನು ಮರುಪ್ರಶ್ನಿಸಲಾಗಿ, 'ತುಂಬಾ ಹತ್ತಿರ' ಎಂದು ಅವರು ಹೇಳಿದ್ದಾರೆ.
ಕ್ಷಿಪಣಿ ಪರೀಕ್ಷೆ ನಿರಾಕರಿಸಿದ ಚೀನಾ
ಆದರೆ, ಚೀನಾ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆಯನ್ನು ನಿರಾಕರಿಸಿದೆ ಮತ್ತು ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆಯನ್ನು ಪರೀಕ್ಷಿಸುತ್ತಿದೆ ಎಂದು ಹೇಳಿದೆ. ಚೀನಾದ ಆಯುಧವು ಹಲವಾರು ಕಿಲೋಮೀಟರ್‌ಗಳಷ್ಟು ಗುರಿಯನ್ನು ತಪ್ಪಿಸಿಕೊಂಡಿದೆ, ಆದರೆ 'ಫೈನಾನ್ಷಿಯಲ್ ಟೈಮ್ಸ್' ಪ್ರಕಾರ, ಒಂದು ದೇಶದ ಹೈಪರ್‌ಸಾನಿಕ್ ಅಸ್ತ್ರವು ಮೊದಲ ಬಾರಿಗೆ ಭೂಮಿಯನ್ನು ಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ-OMG: ಈ ಕುರ್ಚಿ ಮೇಲೆ ಕುಳಿತ ತಕ್ಷಣ ಸಾವು ಸಂಭವಿಸುತ್ತದೆ, ಅದಕ್ಕೆ ಗೋಡೆಗೆ ನೇತುಹಾಕಲಾಗಿದೆ!
'ಚೀನಾ ನೂರಾರು ಪರೀಕ್ಷೆಗಳನ್ನು ಮಾಡಿದೆ'
'ಒಂದು ದಿನ ಇದ್ದಕ್ಕಿದ್ದಂತೆ ಅಮೆರಿಕದ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಚೀನಾ ಹೊಂದಿದೆ ಎಂದು ಹೈಟನ್ ನಂಬುತ್ತಾರೆ. ಕಳೆದ 5 ವರ್ಷಗಳಲ್ಲಿ ಚೀನಾ ನೂರಾರು ಹೈಪರ್‌ಸಾನಿಕ್ ಪರೀಕ್ಷೆಗಳನ್ನು ನಡೆಸಿದ್ದರೆ, ಯುಎಸ್ ಕೇವಲ 9 ಪರೀಕ್ಷೆಗಳನ್ನು ನಡೆಸಿದೆ' ಎಂದು ಹೈಟನ್ ಹೇಳಿದ್ದಾರೆ. 'ಚೀನಾ ಮಧ್ಯಮ-ಶ್ರೇಣಿಯ ಹೈಪರ್‌ಸಾನಿಕ್ ಅಸ್ತ್ರವನ್ನು ಈಗಾಗಲೇ ನಿಯೋಜಿಸಿದೆ ಆದರೆ ಯುಎಸ್ ಗೆ ಇದನ್ನು ಮಾಡಲು ಇನ್ನೂ ಕೆಲ ವರ್ಷಗಳು ಬೇಕಾಗಲಿವೆ' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Taliban: ಅಫ್ಘಾನ್ ಹುಡುಗಿಯರಿಗೆ ಸಿಹಿ ಸುದ್ದಿ, ಭೀಕರ ದೌರ್ಜನ್ಯದ ನಡುವೆ ಉತ್ತಮ ಕೆಲಸ ಮಾಡಿದ ತಾಲಿಬಾನ್
ಇದೊಂದು ನಿಯಮಿತ ಪರೀಕ್ಷೆ ಎಂದ ಚೀನಾ
ಚೀನಾ ಅಕ್ಟೋಬರ್ 18 ರಂದು ಪರೀಕ್ಷೆಯನ್ನು ದೃಢಪಡಿಸಿದೆ ಮತ್ತು ಅದನ್ನು ನಿರ್ಲಕ್ಷಿಸಲು ಪ್ರಯತ್ನಿಸಿದೆ. ಇದು "ಸಾಮಾನ್ಯ ಪರೀಕ್ಷೆ" ಎಂದು ಚೀನಾ ಹೇಳಿದೆ ಮತ್ತು "ಇದು ಕ್ಷಿಪಣಿ ಅಲ್ಲ ಆದರೆ ಬಾಹ್ಯಾಕಾಶ ನೌಕೆ" ಎಂದು ಅದು ಜಗತ್ತನ್ನು ನಂಬಿಸಲು ಪ್ರಯತ್ನಿಸಿದೆ.
ಇದನ್ನೂ ಓದಿ- Corona ವಿರುದ್ಧದ ಹೋರಾಟದಲ್ಲಿ ಮಹತ್ವದ ಹೆಜ್ಜೆ ಇಟ್ಟ US, Covid-19 Vaccine Booster Dose ನೀಡಲು ಅನುಮೋದನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.