White House: ಭಾರತ ಮೂಲದ ವೇದಾಂತ್ ಪಟೇಲ್ `ಸೂಪರ್ ಟ್ಯಾಲೆಂಟೆಡ್` ಎಂದ ಶ್ವೇತಭವನ
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯಾದ ಜೆನ್ ಸಾಕಿ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ವೇದಾಂತ್ ಪಟೇಲ್ ಅವರ ಎದುರೇ ಅವರನ್ನು ಸೂಪರ್ ಟ್ಯಾಲೆಂಟೆಡ್ ಎಂದು ಪ್ರಶಂಸಿಸಿದ್ದಾರೆ.
ವಾಷಿಂಗ್ಟನ್: ಅಮೆರಿಕದ ಶ್ವೇತಭವನದ ಪತ್ರಿಕಾ ಸಹಾಯಕ ಕಾರ್ಯದರ್ಶಿಯಾದ ಭಾರತೀಯ ಮೂಲದ ವೇದಾಂತ್ ಪಟೇಲ್ರನ್ನು ವೈಟ್ಹೌಸ್ ಮೀಡಿಯಾ ಡೆಸ್ಕ್ 'ಸೂಪರ್ ಟ್ಯಾಲೆಂಟೆಡ್' ಎಂದು ಹೊಗಳಿದೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯಾದ ಜೆನ್ ಸಾಕಿ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ವೇದಾಂತ್ ಪಟೇಲ್ ಅವರ ಎದುರೇ ಅವರನ್ನು ಸೂಪರ್ ಟ್ಯಾಲೆಂಟೆಡ್ ಎಂದು ಪ್ರಶಂಸಿಸಿದ್ದಾರೆ.
ಇದನ್ನು ಓದಿ: Plane Accident Video: :ವಿಮಾನ ಭೀಕರ ಅಪಘಾತ, ತುರ್ತು ಲ್ಯಾಂಡಿಂಗ್ ಸಮಯದಲ್ಲಿ ಇಬ್ಭಾಗವಾದ ಪ್ಲೇನ್
'ಶ್ವೇತಭವನ ಒಪ್ಪಿಸುವ ಯಾವುದೇ ಕೆಲಸವನ್ನಾದರೂ ವೇದಾಂತ್ ಅಚ್ಚುಕಟ್ಟಾಗಿ ಮಾಡುತ್ತಾರೆ. ಆಗಾಗ್ಗೆ ನಾನು ವೇದಾಂತ್ರಿಗೆ ನಾವು ನಿಮಗೆ ನೀಡುವ ಕೆಲಸ ಸುಲಭವಾಗಿವೆಯಲ್ಲವೇ ಎಂದು ಕೆಲಸದ ವಿಚಾರವಾಗಿ ತಮಾಷೆ ಮಾಡುತ್ತಿರುತ್ತೇನೆ' ಎಂದು ಹೇಳಿದ್ದಾರೆ.
ಇದನ್ನು ಓದಿ: America Green Card:ಗ್ರೀನ್ ಕಾರ್ಡ್ ಸಂಬಂಧಿತ ದೇಶವಾರು ಮಿತಿ ರದ್ದು: ಮಸೂದೆಗೆ ಅಂಗೀಕಾರ
ಅಮೆರಿಕದಲ್ಲಿ ಬೈಡನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವೇದಾಂತ್ ಪಟೇಲ್ ವೈಟ್ ಹೌಸ್‌ನಲ್ಲಿ ಸಹಾಯಕ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅವರು ಫ್ಲೋರಿಡಾ ವಿಶ್ವವಿದ್ಯಾಲಯದ ವಾರಿಂಗ್‌ಟನ್ ಕಾಲೇಜ್ ಆಫ್ ಬ್ಯುಸಿನೆಸ್‌ನಿಂದ ಎಂಬಿಎ ಪದವಿ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.