ಬೆಂಗಳೂರು : Plane Accident Video: ನೀವು ಅಂತರ್ಜಾಲದಲ್ಲಿ ವಿಮಾನ ಅಪಘಾತದ ಅನೇಕ ವೀಡಿಯೊಗಳನ್ನು ನೋಡಿರಬಹುದು. ಆದರೆ ವಿಮಾನವು ಎರಡು ಭಾಗಗಳಾಗಿ ವಿಭಜನೆಯಾದ ಘಟನೆಯನ್ನು ನೋಡಿರಲಿಕ್ಕಿಲ್ಲ. ದುರ್ಘಟನೆಯಲ್ಲಿ ವಿಮಾನ ಎರಡು ಭಾಗಗಳಾಗಿ ವಿಂಗಡಣೆಯಾಗಿದೆ ಎಂದರೆ ಅಪಘಾತದ ಭೀಕರತೆಯನ್ನು ತಿಳಿದುಕೊಳ್ಳಬಹುದು. ಮಧ್ಯ ಅಮೆರಿಕ, ಕೋಸ್ಟರಿಕಾ ದೇಶದಲ್ಲಿ ನಡೆದ ಅವಘಡವೊಂದು ಬೆಳಕಿಗೆ ಬಂದಿದೆ. ತುರ್ತು ಲ್ಯಾಂಡಿಂಗ್ ಸಮಯದಲ್ಲಿ, ವಿಮಾನ ಎರಡು ಭಾಗಗಳಾಗಿ ವಿಭಜನೆಯಾಗಿದೆ.
ತುರ್ತು ಭೂಸ್ಪರ್ಶದ ವೇಳೆ ಭೀಕರ ಅಪಘಾತ :
ಕೋಸ್ಟರಿಕಾದ ಜುವಾನ್ ಸಾಂತಾಮಾರಿಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. . DHL ಕಂಪನಿಯ ಬೋಯಿಂಗ್ 757-200 ಕಾರ್ಗೋ ವಿಮಾನವು ಕಾರಣಾಂತರಗಳಿಂದ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಇದನ್ನೂ ಓದಿ : America Green Card:ಗ್ರೀನ್ ಕಾರ್ಡ್ ಸಂಬಂಧಿತ ದೇಶವಾರು ಮಿತಿ ರದ್ದು: ಮಸೂದೆಗೆ ಅಂಗೀಕಾರ
ವಿಮಾನವು ರನ್ ವೇ ಮೇಲೆ ಇಳಿದ ತಕ್ಷಣ ಸ್ವಲ್ಪ ದೂರ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಶತರಲ್ಲಿಯೇ ಅದರ ಬ್ಯಾಲೆನ್ಸ್ ತಪ್ಪುವುದನ್ನು ಕೂಡಾ ಗಮನಿಸಬಹುದು. ಇದಾದ ನಂತರ ಹಿಂದಿನ ಭಾಗದಲ್ಲಿ ಸ್ಪೋಟ ಸಂಭವಿಸುತ್ತದೆ. ಈ ಸ್ಪೋಟದೊಂದಿಗೆ ವಿಮಾನ ಎರಡು ಭಾಗವಾಗಿ ಬಿಡುತ್ತದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಇಬ್ಬರೂ ಪೈಲೆಟ್ ಗಳು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
A DHL plane slid out of control and crashed on the runway of Juan Santa Maria Airport in Costa Rica on Thursday. pic.twitter.com/2DTl8pUaST
— CBS News (@CBSNews) April 8, 2022
ಗೌಂಟ್ಮಾಲಾಗೆ ತೆರಳುತ್ತಿದ್ದ ವಿಮಾನ :
ವರದಿಯ ಪ್ರಕಾರ, ಈ ವಿಮಾನವು ಗೌಂಟ್ಮಾಲಾಗೆ ತೆರಳುತ್ತಿತ್ತು. ನಂತರ ಅದರಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿತ್ತು. ಈ ಅವಘಡದ ಬಗ್ಗೆ ಡಿಎಚ್ಎಲ್ ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ : ರಷ್ಯಾದ ಸದಸ್ಯತ್ವ ಅಮಾನತುಗೊಳಿಸುವ ನಿರ್ಣಯ ಮಂಡಿಸಿದ ವಿಶ್ವಸಂಸ್ಥೆ, ಮತದಾನದಿಂದ ದೂರ ಉಳಿದ ಭಾರತ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.