ಸೋಶಿಯಲ್ ಮೀಡಿಯಾದ ಅತಿಯಾದ ಬಳಕೆಯಿಂದ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳಲಿದೆ ಈ ಕಾಯಿಲೆ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮವು ಜನರನ್ನು ಪರಸ್ಪರ ಸಂಪರ್ಕಿಸುವ ಪ್ರಮುಖ ಸಾಧನವಾಗಿದೆ. ಆದಾಗ್ಯೂ, ಅದರ ಅತಿಯಾದ ಬಳಕೆಯು ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಿಶೇಷವಾಗಿ ಹುಡುಗರಿಗಿಂತ ಹುಡುಗಿಯರು ಇದರಿಂದ ಹೆಚ್ಚು ಪ್ರಭಾವಿತರಾಗುತ್ತಾರೆ.
ಲಂಡನ್ : ಯುವಕರಲ್ಲಿ ಸಾಮಾಜಿಕ ಜಾಲತಾಣಗಳ (Social media) ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ಇದರ ಅತಿಯಾದ ಬಳಕೆಯು ಯುವಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ (Social media effects on health). ಯುವಕರ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವದ ಬಗ್ಗೆ ಸಂಶೋಧನೆ ನಡೆಸಲಾಗಿದೆ.
ಚಿಕ್ಕ ವಯಸ್ಸಿನಲ್ಲಿಯೇ ಬೀರುತ್ತದೆ ಹೆಚ್ಚು ಪರಿಣಾಮ :
ವರದಿಯಾ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ (Social media) ಹೆಚ್ಚು ಸಮಯ ಕಳೆಯುವ 11 ರಿಂದ 13 ವರ್ಷದೊಳಗಿನ ಹುಡುಗಿಯರನ್ನು ಮನೋವಿಜ್ಞಾನಿಗಳು ಸಂಶೋಧನೆಯಲ್ಲಿ ಬಳಸಿಕೊಂಡಿದ್ದಾರೆ. ಈ ಹೆಣ್ಣು ಮಕ್ಕಳು ತಮ್ಮ ಜೀವನದಲ್ಲಿ ಕಡಿಮೆ ತೃಪ್ತಿ ಹೊಂದಿದ್ದಾರೆಂದು ಈ ಸಂಶೋಧನೆಯಲ್ಲಿ ಕಂಡುಹಿಡಿಯಲಾಗಿದೆ (Social media effects on girls).
ಇದನ್ನೂ ಓದಿ : Snake Birth Video: ಹಾವಿನ ಜನನದ ವಿಡಿಯೋ..! ಅಬ್ಬಬ್ಬಾ, ಇದನ್ನೊಮ್ಮೆ ನೋಡಿ...
ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳಲಿದೆ ಖಿನ್ನತೆ :
ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಹುಡುಗಿಯರಲ್ಲಿ ಖಿನ್ನತೆಯ ಸಮಸ್ಯೆ ಹೆಚ್ಚಾಗಿದೆ ಎಂದು ಸಂಶೋಧನೆಯ ಫಲಿತಾಂಶಗಳು ತೋರಿಸಿವೆ ಎಂದು ವಿಜ್ಞಾನಿ ಪ್ರೊಫೆಸರ್ ಯವೊನ್ ಕೆಲ್ಲಿ ಹೇಳುತ್ತಾರೆ. ಇದರೊಂದಿಗೆ ನಿದ್ದೆಗೂ ತೊಂದರೆಯಾಗುತ್ತದೆ.
ಪ್ರತಿ ತರಗತಿಯಲ್ಲಿ 5 ಮಕ್ಕಳು ಪ್ರಭಾವಿತ :
ಸಾಮಾಜಿಕ ಮಾಧ್ಯಮಗಳು ಯುವಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಮಟ್ಟವನ್ನು ಹೆಚ್ಚಿಸುತ್ತವೆಯೇ ಎಂಬುದರ ಕುರಿತು ಸಂಶೋಧಕರು ಅಧ್ಯಯನ ಆರಂಭಿಸಿದ್ದಾರೆ (Social Media Affect) . ಯಂಗ್ ಮೈಂಡ್ಸ್ ಚಾರಿಟಿ ಪ್ರಕಾರ, ಮಾನಸಿಕ ಆರೋಗ್ಯ ಸಮಸ್ಯೆಗಳಿರುವ 5 ರಿಂದ 16 ವರ್ಷ ವಯಸ್ಸಿನ ಮಕ್ಕಳ ಸಂಖ್ಯೆ 2017 ಮತ್ತು 2021 ರ ನಡುವೆ 50% ರಷ್ಟು ಹೆಚ್ಚಾಗಿದೆ. ಇದರ ಪ್ರಕಾರ ಪ್ರತಿ ತರಗತಿಯಲ್ಲಿ ಸುಮಾರು 5 ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಇದನ್ನೂ ಓದಿ : ಕೊರೊನಾ ನಾಲ್ಕನೇ ಅಲೆ ಹಾವಳಿ, ಈ ನಗರದಲ್ಲಿ ಕಠಿಣ ಲಾಕ್ ಡೌನ್..!
84 ಸಾವಿರ ಜನರ ಮೇಲೆ ಸಂಶೋಧನೆ
ಡಾ. ಆಮಿ ಓರ್ಬೆನ್ ಮತ್ತು ಅವರ ಸಹೋದ್ಯೋಗಿಗಳು 10 ರಿಂದ 80 ವರ್ಷ ವಯಸ್ಸಿನ 84,000 ಬ್ರಿಟಿಷ್ ಜನರ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಇದು ತೋರಿಸಿದೆ. ನೇಚರ್ ಕಮ್ಯುನಿಕೇಷನ್ಸ್‌ನಲ್ಲಿ ಪ್ರಕಟವಾದ ಸಂಶೋಧನೆಯು ಸಾಮಾಜಿಕ ಮಾಧ್ಯಮವು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ಸಾಬೀತುಪಡಿಸುವುದಿಲ್ಲ, ಆದರೆ ಇದು ವಿಭಿನ್ನ ವಯಸ್ಸಿನ ಹುಡುಗರು ಮತ್ತು ಹುಡುಗಿಯರ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ಚಿಕ್ಕ ವಯಸ್ಸಿನಲ್ಲೇ ಮೂಡಿಸಬೇಕು ಜಾಗೃತಿ :
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧನೆಯ ಸಹ-ಲೇಖಕಿ ಮತ್ತು ಮನೋವಿಜ್ಞಾನದ ಪ್ರಾಧ್ಯಾಪಕರಾದ ಸಾರಾ-ಜೇನ್ ಬ್ಲೇಕ್ಮೋರ್ ಪ್ರಕಾರ, ಸಾಮಾಜಿಕ ಮಾಧ್ಯಮವನ್ನು ಮಕ್ಕಳು ಬಳಸಿದಾಗ, ಅವರ ನಿದ್ರೆಗೆ ತೊಂದರೆಯಾಗದಂತೆ ನಿಯಮಗಳನ್ನು ರೂಪಿಸಿಕೊಳ್ಳುವ ಅಗತ್ಯವಿದೆ. . ಇದಕ್ಕಾಗಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಸಾಮಾಜಿಕ ಜಾಲತಾಣಗಳು ಹುಡುಗರಿಗಿಂತ ಹುಡುಗಿಯರ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ ಎನ್ನುವುದು ಅವರ ಅಭಿಪ್ರಾಯ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.