Chimpanzee Dance on Srivalli Song: ಅಲ್ಲು ಅರ್ಜುನ್ ಸ್ಟೈಲ್ ನಲ್ಲಿ ಕುಣಿದು ಕುಪ್ಪಳಿಸಿದ ಚಿಂಪಾಂಜಿ

Chimpanzee Dance on Srivalli Song: ದೇಶಾದ್ಯಂತ ಹೆಚ್ಚು ಕ್ರೇಜ್ ಸೃಷ್ಟಿಸಿರುವ  'ಪುಷ್ಪ' ಚಿತ್ರದ 'ಶ್ರೀವಲ್ಲಿ' ಹಾಡು ಸಖತ್ ಟ್ರೆಂಡಿಂಗ್ ನಲ್ಲಿದೆ. ಈಗ ಚಿಂಪಾಂಜಿ ಸಹ ಈ ಹಾಡಿಗೆ ಸ್ಟೆಪ್ ಹಾಕಿದೆ.   

Written by - Yashaswini V | Last Updated : Mar 30, 2022, 11:12 AM IST
  • ಚಿಂಪಾಂಜಿಗೆ 'ಪುಷ್ಪ' ಜ್ವರ
  • ಅಲ್ಲು ಅರ್ಜುನ್ ಸ್ಟೈಲ್ ನಲ್ಲಿ ಕುಣಿದು ಕುಪ್ಪಳಿಸಿ ಚಿಂಪಾಂಜಿ
  • ‘ಶ್ರೀವಲ್ಲಿ’ ಹಾಡಿಗೆ ಕುಣಿದು ಕುಪ್ಪಳಿಸಿ ಚಿಂಪಾಂಜಿ
Chimpanzee Dance on Srivalli Song: ಅಲ್ಲು ಅರ್ಜುನ್ ಸ್ಟೈಲ್ ನಲ್ಲಿ ಕುಣಿದು ಕುಪ್ಪಳಿಸಿದ  ಚಿಂಪಾಂಜಿ title=
Chimpanzee Dance on Srivalli Song

Chimpanzee Dance on Srivalli Song: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಸಿನಿಮಾ ಬಂದಾಗಿನಿಂದಲೂ ಬಹಳ ಸುದ್ದಿಯಲ್ಲಿದೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಸಖತ್ ಸದ್ದು ಮಾಡಿದೆ.  'ಪುಷ್ಪ' ಚಿತ್ರದ 'ಶ್ರೀವಲ್ಲಿ' ಹಾಡು ಕೂಡ ಸಖತ್ ಟ್ರೆಂಡಿಂಗ್ ನಲ್ಲಿದೆ. 

'ಶ್ರೀವಲ್ಲಿ' ಹಾಡಿನಲ್ಲಿ ಚಿಂಪಾಂಜಿ ನೃತ್ಯ :
'ಪುಷ್ಪ' ಚಿತ್ರದ 'ಶ್ರೀವಲ್ಲಿ' ಹಾಡು ವಿಭಿನ್ನ ಕ್ರೇಜ್ ಪಡೆದುಕೊಂಡಿದೆ. ಜನರು ಈ ಹಾಡಿಗೆ ಹೆಚ್ಚು ರೀಲ್‌ಗಳನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಶ್ರೀವಲ್ಲಿ ಹಾಡಿಗೆ ವಿಭಿನ್ನವಾದ ವಿಡಿಯೋಗಳನ್ನೂ ಸಹ ಹಂಚಿಕೊಳ್ಳುತ್ತಿದ್ದಾರೆ.  ಈ ವಿಡಿಯೋಗಳಿಗೆ ಅತಿ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್‌ಗಳನ್ನು ಸಹ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ, ಎಲ್ಲಿ ನೋಡಿದರೂ, ಬಹುತೇಕ ಮಂದಿ ಈ ಹಾಡನ್ನು ಗುನುಗುತ್ತಿರುತ್ತಾರೆ. ಇದೀಗ ಈ ಹಾಡಿನ ಜ್ವರ ಚಿಂಪಾಂಜಿಗೆ ಏರುತ್ತಿದೆಯಂತೆ. ‘ಶ್ರೀವಲ್ಲಿ’ ಹಾಡಿಗೆ ಚಿಂಪಾಂಜಿ ಡ್ಯಾನ್ಸ್ (Chimpanzee Dance on Srivalli Song) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚರಿ ಮೂಡಿಸಿದೆ. ಚಿಂಪಾಂಜಿಯ ವಿಡಿಯೋ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗುತ್ತಿದೆ. 

ಇದನ್ನೂ ಓದಿ- #LeopardDogFight : ಚಿರತೆಯೊಂದಿಗೆ ಕಾದಾಡಿ ಪ್ರಾಣ ಉಳಿಸಿಕೊಂಡ ಸಾಕು ನಾಯಿ

'ಶ್ರೀವಲ್ಲಿ' ಹಾಡಿನಲ್ಲಿ ಅಲ್ಲು ಅರ್ಜುನ್ ಅವರ ಸ್ಟೈಲ್‌ಗೆ ಚಿಂಪಾಂಜಿ ಸೆಡ್ಡು ಹೊಡೆಯುವುದನ್ನು ನೀವು ವೈರಲ್ ವೀಡಿಯೊದಲ್ಲಿ (Viral Video) ನೋಡಬಹುದು. ಈ ತಮಾಷೆಯ ವೀಡಿಯೋವನ್ನು Instagram ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೋ ಎಷ್ಟು ಅದ್ಭುತವಾಗಿದೆ ಎಂದರೆ ಇದುವರೆಗೆ 20 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅದೇ ಸಮಯದಲ್ಲಿ, 11 ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ. 

Instagram ನಲ್ಲಿ  dinesh_adhi ಹೆಸರಿನ ಖಾತೆಯಲ್ಲಿ ಈ  ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣದ ಬಳಕೆದಾರರೂ ಈ ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ವೈರಲ್ ವಿಡಿಯೋವನ್ನು ನೀವೂ ಒಮ್ಮೆ ನೋಡಿ...

 
 
 
 

 
 
 
 
 
 
 
 
 
 
 

A post shared by Dinesh Sanu (@dinesh_adhi)

ಇದನ್ನೂ ಓದಿ- Crocodile Attacked Leopard: ನದಿಯಲ್ಲಿ ನೀರು ಕುಡಿಯಲು ಹೋದ ಚಿರತೆಯನ್ನೇ ತಿಂದ ಮೊಸಳೆ- ವಿಡಿಯೋ

ವಾಸ್ತವವಾಗಿ, ಮೃಗಾಲಯದಲ್ಲಿ ಚಿಂಪಾಂಜಿಯೊಂದು ನಡೆದುಕೊಂಡು ಹೋಗುತ್ತಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಇದಕ್ಕೆ ಸರಿಹೊಂದುವಂತೆ ಶ್ರೀವಲ್ಲಿ ಹಾಡು ಪ್ಲೇ ಆಗುತ್ತದೆ. ವೀಡಿಯೊ ಎಷ್ಟು ತಮಾಷೆಯಾಗಿದೆ ಎಂದರೆ ಅದನ್ನು ನೋಡಿದ ನಂತರ ನೀವು ನಗದೇ ಇರಲು ಸಾಧ್ಯವೇ ಇಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News