ನವದೆಹಲಿ: ಹಾಲಿವುಡ್ ನಟಿ ಸುಸಾನ್ ಸರಂಡನ್ ಅವರು ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.ನ್ಯೂಯಾರ್ಕ್ ಟೈಮ್ಸ್ ಸುದ್ದಿಯನ್ನು ತನ್ನ ಕಾಮೆಂಟ್ನೊಂದಿಗೆ ಅವರು ಪೋಸ್ಟ್ ಮಾಡಿದ್ದಾರೆ.ಭಾರತದ ರೈತರಿಗೆ ಬೆಂಬಲ ವ್ಯಕ್ತಪಡಿಸುವೆ,ಅವರು ಯಾಕೆ ಪ್ರತಿಭಟಿಸುತ್ತಿದ್ದಾರೆ ಎನ್ನುವುದನ್ನು ತಿಳಿಯಲು ಈ ಕೆಳಗಿನ ಲಿಂಕ್ ನಲ್ಲಿ ಓದಿ ಎಂದು ಅವರು ಪತ್ರಿಕಾ ವರದಿಯನ್ನು ಲಗತ್ತಿಸಿದ್ದಾರೆ.


COMMERCIAL BREAK
SCROLL TO CONTINUE READING

Farmers Protest: 'ನನ್ನನ್ನು ಮೌನವಾಗಿರಿಸಲು ಸಾಧ್ಯವಿಲ್ಲ'


ಇತ್ತೀಚಿಗಷ್ಟೇ ರಿಹಾನ್ನಾ (Rihanna) ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಈ ಚಳುವಳಿಯನ್ನು ಜಾಗತಿಕ ಸುದ್ದಿಯಾಗಲಿಕ್ಕೆ ಕಾರಣಕರ್ತರಾಗಿದ್ದರು. ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್, ಅಮೆರಿಕದ ವಕೀಲೇ ಮತ್ತು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೋದರ ಸೊಸೆ, ನಟಿ ಅಮಂಡಾ ಸೆರ್ನಿ, ಗಾಯಕರಾದ ಜೇ ಸೀನ್, ಡಾ ಜೀಯಸ್ ಮತ್ತು ಮಾಜಿ ವಯಸ್ಕ ತಾರೆ ಮಿಯಾ ಖಲೀಫಾ ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳು,ರಾಜಕೀಯ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಿದ್ದಾರೆ.


ಗ್ರೇಟಾ ಥನ್ಬರ್ಗ್ ಮೇಲೆ ದೂರು ದಾಖಲಿಸಿದ್ದಕ್ಕೆ ದೆಹಲಿ ಪೋಲಿಸರು ಹೇಳುವುದೇನು ಗೊತ್ತೇ?


ಆದರೆ ಸರ್ಕಾರವು ಈ ಟ್ವೀಟ್‌ಗಳನ್ನು ಟೀಕಿಸಿತ್ತು, ಜನರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಮುಂದಾಗುವ ಮೊದಲು ಸತ್ಯವನ್ನು ಕಂಡುಹಿಡಿಯಬೇಕು, ಇದನ್ನು ನಿಖರ ಅಥವಾ ಜವಾಬ್ದಾರಿಯಲ್ಲ ಎಂದು ಕರೆದಿದ್ದಾರೆ. ಕೇವಲ ಕೆಲವೇ ರೈತರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.ಭಾರತವನ್ನು ಗುರಿಯಾಗಿಸಿಕೊಂಡು ಪ್ರಚೋದಿತ ಅಭಿಯಾನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.


ಯಾರು ಈ ರಿಹಾನ್ನಾ..? ಜಗತ್ತಿನಾದ್ಯಂತ ಈಗ ಆಕೆ ಸುದ್ದಿಯಲ್ಲಿರುವುದೇಕೆ..?


ನಟರಾದ ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಅಜಯ್ ದೇವ್‌ಗನ್, ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್, ಭಾರತೀಯ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯ ರಹಾನೆ, ಓಪನರ್ ರೋಹಿತ್ ಶರ್ಮಾ ಮತ್ತು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ತೀವ್ರ ಪ್ರತಿಕ್ರಿಯೆ ಈ ಪುಷ್‌ಬ್ಯಾಕ್‌ಗೆ ಉತ್ತೇಜನ ನೀಡಿತು.


ದೆಹಲಿಯ ಗಡಿಯಲ್ಲಿ ರೈತರು ಎರಡು ತಿಂಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು, ಅವರು ಮಧ್ಯಾಹ್ನದಿಂದ ಪ್ರಾರಂಭವಾಗುವ ಮೂರು ಗಂಟೆಗಳ ಕಾಲ ರಾಷ್ಟ್ರವ್ಯಾಪಿ '' ಚಕ್ಕಾ ಜಾಮ್ '' ಅನ್ನು ನಡೆಸುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.