ವಿಯೆನ್ನಾ : ಮುಂಬಯಿ ಉಗ್ರರ ದಾಳಿಯನ್ನು ನೆನಪಿಸುವಂತಹ ಘಟನೆ ಆಸ್ಟ್ರಿಯಾ ರಾಜಧಾನಿ ವಿಯೆನ್ನಾ (Vienna)ದಲ್ಲಿ ನಡೆದಿದೆ.  ವಿಯೆನ್ನಾದ  6 ಕಡೆಗಳಲ್ಲಿ ಏಕಕಾಲದಲ್ಲಿ ಉಗ್ರರು ದಾಳಿ (Terror attack) ನಡೆಸಿದ್ದು, ಈ ದಾಳಿಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕನಿಷ್ಠ 14 ಮಂದಿ  ಗಾಯಗೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ವಿಯೆನ್ನಾದ ಸಿನೆಗಾಗ್ ನಲ್ಲಿ ಉಗ್ರವಾದಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಪೈಕಿ ಒಬ್ಬನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿದೆ.  


ನಗರ ಪಬ್ ಮತ್ತು ಬಾರ್ ಗಳಲ್ಲಿ ಸೇರಿದ್ದ ಜನರ ಮೇಲೆ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದು ಸುಮಾರು 100 ಸುತ್ತು ಗುಂಡು ಹಾರಿಸಿರಬಹುದು ಎಂದು  ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಉಗ್ರನೊಬ್ಬ ಕಿರುಚುತ್ತಾ ಅರಚುತ್ತಾ ಗುಂಡಿನ ದಾಳಿ  ನಡೆಸುತ್ತಾ ಓಡಾಡುತ್ತಿದ್ದ ಎಂದವರು ಘಟನೆಯನ್ನು ವಿವರಿಸಿದ್ದಾರೆ. 


ಪಾಕಿಸ್ತಾನದಲ್ಲಿ 2 ಭಯೋತ್ಪಾದಕ ದಾಳಿ, 14 ಭದ್ರತಾ ಸಿಬ್ಬಂದಿ ಸೇರಿದಂತೆ 21 ಜನರ ಸಾವು


ಇನ್ನು ಪ್ರವಾಸಿಗರನ್ನು ಉಗ್ರರು ವಿಯೆನ್ನಾದ ಹೊಟೇಲ್ ನಲ್ಲಿ ಬಂಧಿಯಾಗಿಸಿದ್ದಾರೆ ಎನ್ನಲಾಗಿದೆ. ವಿಯೆನ್ನಾ ನಗರದ ಪ್ರವಾಸಿ ತಾಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಆಸ್ಟ್ರಿಯಾ (Austria) ಸೇನೆ ಉಗ್ರರ ದಮನಕ್ಕೆ ಕಣಕ್ಕಿಳಿದಿದೆ. 


ನಗರದಲ್ಲಿ ಶಾಲೆಗೆ ರಜೆ ನೀಡಿಲಾಗಿದ್ದು, ಜನ ಮನೆ ಬಿಟ್ಟು ಹೊರ ಬರದಂತೆ ಆದೇಶಿಸಿಲಾಗಿದೆ. ಇನ್ನು ಉಗ್ರನು ಕೂಗಾಡುತ್ತಾ ಕಿರುಚುತ್ತಾ ಗುಂಡಿನ ದಾಳಿ ನಡೆಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. 


ಪಾಕಿಸ್ತಾನದ ಕರಾಚಿ ಸ್ಟಾಕ್ ಎಕ್ಸ್ಚೇಂಜ್ ಮೇಲೆ ಭಯೋತ್ಪಾದಕ ದಾಳಿಯಲ್ಲಿ ಐವರು ಮೃತ


ಇನ್ನು ಘಟನೆಯನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು, ಆಸ್ಟ್ರಿಯಾ  ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ವಿಯೆನ್ನಾದಲ್ಲಿ ಆಗಿರುವ ಉಗ್ರರ ದಾಳಿಯನ್ನು ವಿಶ್ವದ ನಾನಾ ರಾಷ್ಟ್ರಗಳು ಕೂಡಾ ಖಂಡಿಸಿವೆ.