ನವದೆಹಲಿ: ಒಬ್ಬ ಒಳ್ಳೆಯ ಸ್ನೇಹಿತ(Best Friend) ಯಾರಿಗಾದರೂ ಜೀವನದ ಪ್ರತಿಯೊಂದು ಸುಖ-ದುಃಖದ ಒಡನಾಡಿಯಾಗಿದ್ದು, ಕಷ್ಟಕಾಲದಲ್ಲಿ ಇವರ ಪ್ರಾಮುಖ್ಯತೆ ಹೆಚ್ಚುತ್ತದೆ. ಆದರೆ ಅಂತಹ ಸ್ನೇಹಿತನಿಗೆ ಮೋಸ ಮಾಡುವುದು ಯಾರಿಗಾದರೂ ಸಮಸ್ಯೆಯಾಗಬಹುದು. ಅದೇ ರೀತಿ ಒಬ್ಬ ಮಹಿಳೆ ಕುಡಿದ ಅಮಲಿನಲ್ಲಿ ತನ್ನ ಸ್ನೇಹಿತೆಯೊಬ್ಬಳಿಗೆ ಮೋಸ ಮಾಡಿದ್ದಾಳೆ. ಇದಕ್ಕಾಗಿ ಆಕೆಗೆ ಈಗ ಪಶ್ಚಾತ್ತಾಪದ ಅನಿವಾರ್ಯತೆ(Emotional Abuse) ಎದುರಾಗಿದೆ. ಯಾರೇ ಆಗಲಿ ಆ ಮಹಿಳೆ ಮಾಡಿರುವ ಮೋಸವನ್ನು ಕ್ಷಮಿಸಲು ಸಾಧ್ಯವಿಲ್ಲ.


COMMERCIAL BREAK
SCROLL TO CONTINUE READING

ಉತ್ತಮ ಸ್ನೇಹಿತೆಯ ಪತಿಯೊಂದಿಗೆ ಸಂಬಂಧ!


ವರದಿಗಳ ಪ್ರಕಾರ ತಾನು ಮಾಡಿರುವ ಅವಾಂತರಕ್ಕೆ ಇದೀಗ ಆ ಮಹಿಳೆಯೇ ದುಃಖ ವ್ಯಕ್ತಪಡಿಸಿದ್ದಾಳೆ. ನನ್ನ ಜೀವನದ ಪ್ರತಿ ಏರಿಳಿತದಲ್ಲೂ ನನ್ನ ಸ್ನೇಹಿತೆ ನನ್ನ ಜೊತೆಗಿದ್ದಳು. ಆದರೆ ನಾನು ಅವಳ ಗಂಡನ ಜೊತೆ ಸಂಬಂಧ(Physical Relation) ಇಟ್ಟುಕೊಂಡು ಅವಳಿಗೆ ಮೋಸ ಮಾಡಿದ್ದೇನೆ ಅಂತಾ ಹೇಳಿದ್ದಾಳೆ. ಇದೆಲ್ಲವೂ ನಶೆಯಲ್ಲಿ ನಡೆದಿದ್ದು, ಇದಕ್ಕಾಗಿ ನನಗೆ ನಾಚಿಕೆಯಾಗುತ್ತಿದೆ ಎಂದಿದ್ದಾಳೆ.


ಇದನ್ನೂ ಓದಿ: Pink Egg: ಮೊಟ್ಟೆಯ ಒಳಭಾಗದಲ್ಲಿ ಗುಲಾಬಿ ಬಣ್ಣದ ಮೊಟ್ಟೆ ಕಂಡು ಬೆಚ್ಚಿಬಿದ್ದ ಮಹಿಳೆ, ಕಾರಣ ಇಲ್ಲಿದೆ


ನಂಬುವುದು ಕಷ್ಟ ಆದರೆ ನನ್ನ ಮೂರ್ಖತನದಿಂದ ಹೀಗಾಯಿತು ಎಂದು ಮಹಿಳೆ ಹೇಳಿದ್ದಾಳೆ. 10 ವರ್ಷಗಳ ಹಿಂದೆ ನಾನು ನನ್ನ ಸಂಗಾತಿ(Partner)ಯನ್ನು ತೊರೆದಿದ್ದೆ. ಏಕೆಂದರೆ ಆತ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ. ಈ ವೇಳೆ ನನ್ನ ಸ್ನೇಹಿತೆ ನನಗೆ ಸಾಕಷ್ಟು ಬೆಂಬಲ ಮತ್ತು ಧೈರ್ಯ ನೀಡಿದಳು. ಆಕೆಯ ಸಹಾಯದಿಂದ ನಾನು ಕಷ್ಟದ ಸಮಯವನ್ನು ಜಯಿಸಲು ಸಾಧ್ಯವಾಯಿತು ಅಂತಾ 37 ವರ್ಷದ ಮಹಿಳೆ ಹೇಳಿದ್ದಾಳೆ.


ಆ ರಾತ್ರಿ ಏನಾಯಿತು ಗೊತ್ತಾ..?


ಆ ಕಹಿ ರಾತ್ರಿಯ ಘಟನೆಯನ್ನು ನೆನಪಿಸಿಕೊಳ್ಳುತ್ತಾ, ಆ ದಿನ ನನ್ನ ಇನ್ನೊಬ್ಬ ಸ್ನೇಹಿತೆ ನಿಶ್ಚಿತಾರ್ಥ(Engagement) ಮಾಡಿಕೊಂಡಿದ್ದರಿಂದ ನಾವೆಲ್ಲರೂ ಪಾರ್ಟಿಗೆ ಹೋಗಿದ್ದೇವು. ರಾತ್ರಿ ತುಂಬಾ ಹೊತ್ತಾಗಿದ್ದರಿಂದ ಎಲ್ಲರೂ ಕುಡಿದು ಸುಸ್ತಾಗಿ ಮಲಗಿದ್ದರು. ಆದರೆ ನಾನು ಮತ್ತು ನನ್ನ ಸ್ನೇಹಿತೆಯ ಪತಿ ಮಾತ್ರ ಆ ವೇಳೆ ಎಚ್ಚರವಾಗಿದ್ದೇವು.


ನನ್ನ ಸ್ನೇಹಿತೆಯ ವಯಸ್ಸು 37 ಮತ್ತು ಆಕೆಯ ಪತಿ ವಯಸ್ಸು 38 ವರ್ಷ. ಆ ರಾತ್ರಿ ಅಲ್ಲಿ ಕುಳಿತಿದ್ದಾಗ ನಾವಿಬ್ಬರೂ ಪರಸ್ಪರ ಮಾತನಾಡುತ್ತಿದ್ದೇವು. ಆದರೆ ಇದ್ದಕ್ಕಿದ್ದಂತೆ ನನ್ನ ಸ್ನೇಹಿತೆಯ ಪತಿ ನನ್ನನ್ನು ಪಕ್ಕದಿಂದ ಹಿಡಿದು ತನ್ನ ಹತ್ತಿರಕ್ಕೆ ಎಳೆದುಕೊಂಡ. ನಂತರ ಅವನು ನನ್ನನ್ನು ಚುಂಬಿಸಿದ. ಇದರಿಂದ ನನಗೆ ಆಶ್ಚರ್ಯವಾಯಿತು, ಆದರೆ ನಾನು ಅದಾಗಲೇ ಅವನ ಪ್ರೀತಿಯ ಬಲೆಯಲ್ಲಿ ಬಿದ್ದಿದೆ. ನಂತರ ನಡೆದ ಘಟನೆ ನೆನಪಿಸಿಕೊಂಡರೆ ನನಗೆ ದುಃಖವಾಗುತ್ತದೆ ಅಂತಾ ಹೇಳಿದ್ದಾಳೆ.  


ಇದನ್ನೂ ಓದಿ: Viral News: Corona ಸೋಂಕಿತನಾಗಲು ಬಯಸುತ್ತಿದ್ದಾನೆ ಓರ್ವ ವ್ಯಕ್ತಿ! ಅದಕ್ಕಾಗಿ ಹಣ ಕೂಡ ಖರ್ಚು ಮಾಡಲು ಸಿದ್ಧ ಅಂತಾನೆ


ನಾವಿಬ್ಬರು ಆ ರಾತ್ರಿ ಮಾಡಿದ ತಪ್ಪಿನಿಂದ ನನಗೆ ಭಾರೀ ಮುಜುಗರವಾಗಿದೆ. ಈ ವಿಷಯ ನನ್ನ ಸ್ನೇಹಿತೆಗೆ ಇನ್ನೂ ಗೊತ್ತಾಗಿಲ್ಲ. ಗೊತ್ತಾದರೆ ಏನಾಗುತ್ತೋ ಅನ್ನೋ ಭಯ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಆದರೆ ನಾನು ಆಕೆಗೆ ಈ ವಿಷಯ ತಿಳಿಸಿಲ್ಲ. ತಿಳಿಸಿದರೆ ಆಕೆ ತುಂಬಾ ನೊಂದುಕೊಳ್ಳುತ್ತಾಳೆ. ಹೀಗಾಗಿಯೇ ನಾನು ಈ ವಿಷಯವನ್ನು ಬಹಿರಂಗಗೊಳಿಸಿಲ್ಲ. ಆದರೆ ನನಗೆ ಕಷ್ಟಕಾಲದಲ್ಲಿ ಸಹಾಯ ಮಾಡಿದ ನನ್ನ ಪ್ರೀತಿಯ ಸ್ನೇಹಿತೆಗೆ ನಾನು ಮೋಸ ಮಾಡಿದ ಅನ್ನೋ ದುಃಖ ಕಾಡುತ್ತಿದೆ ಅಂತಾ ಮಹಿಳೆ ಹೇಳಿಕೊಂಡಿದ್ದಾಳೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.