Pink Egg: ಮೊಟ್ಟೆಯ ಒಳಭಾಗದಲ್ಲಿ ಗುಲಾಬಿ ಬಣ್ಣದ ಮೊಟ್ಟೆ ಕಂಡು ಬೆಚ್ಚಿಬಿದ್ದ ಮಹಿಳೆ, ಕಾರಣ ಇಲ್ಲಿದೆ

Pink Egg: ಬ್ರಿಟನ್‌ನಿಂದ (UK News) ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರು ತಮ್ಮ ಮಕ್ಕಳಿಗೆ ಬೆಳಗ್ಗೆ ಫಾಸ್ಟ್ ಬ್ರೇಕ್ ಮಾಡಲು ಬಾಣಲೆಯಲ್ಲಿ ಮೊಟ್ಟೆ ಒಡೆದು ಹಾಕಿದಾಗ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾಳೆ. ಹೌದು, ಆ ಮೊಟ್ಟೆಯ ಹಳದಿ ಲೋಳೆಯು ಸಂಪೂರ್ಣವಾಗಿ ಗುಲಾಬಿ ಬಣ್ಣದ್ದಾಗಿತ್ತು.

Written by - Nitin Tabib | Last Updated : Jan 16, 2022, 07:12 PM IST
  • ಬೆಳಗ್ಗೆ ಬ್ರೇಕ್ ಫಾಸ್ಟ್ ಮಾಡಲು ಮೊಟ್ಟೆ ಒಡೆದ ಮಹಿಳೆ
  • ಒಳಗಡೆ ಗುಲಾಬಿ ಬಣ್ಣದ ಲೋಳೆ ಕಂಡು ಬೆಚ್ಚಿಬಿದ್ದ ಮಹಿಳೆ.
  • ಬ್ಯಾಕ್ಟೀರಿಯಾ ಕಾರಣ ಮೊಟ್ಟೆಗೆ ಇಂತಹ ಗುಲಾಬಿ ಬಣ್ಣ ಬಂದಿತ್ತು
Pink Egg: ಮೊಟ್ಟೆಯ ಒಳಭಾಗದಲ್ಲಿ ಗುಲಾಬಿ ಬಣ್ಣದ ಮೊಟ್ಟೆ ಕಂಡು ಬೆಚ್ಚಿಬಿದ್ದ ಮಹಿಳೆ, ಕಾರಣ ಇಲ್ಲಿದೆ title=
Pink Egg (File Photo)

ನವದೆಹಲಿ: Pink Egg - ದಿನವೂ ಬೆಳಗಿನ ಉಪಹಾರದಲ್ಲಿ ಅನೇಕರು ಮೊಟ್ಟೆಯನ್ನು (Egg benefits) ತಿನ್ನುತ್ತಾರೆ. ಅದರಲ್ಲೂ ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ಮೊಟ್ಟೆಗಳ ವ್ಯಾಪಾರ ಜೋರಾಗಿರುತ್ತದೆ. ಆದರೆ ಮಹಿಳೆಯೊಬ್ಬಳು ತನ್ನ ಮಕ್ಕಳಿಗೆ ಬೆಳಗ್ಗೆ ಫಾಸ್ಟ್ ಬ್ರೇಕ್ ತಯಾರಿಸಲು ಬಾಣಲೆಯಲ್ಲಿ ಮೊಟ್ಟೆ ಒಡೆದು ಹಾಕಿದ ತಕ್ಷಣ ಅವಳಿಗೆ ಅಚ್ಚರಿ ಮೂಡಿಸಿದ ವಿಚಿತ್ರ ಪ್ರಕರಣ ಬ್ರಿಟನ್ ನಿಂದ ವರದಿಯಾಗಿದೆ. ವಾಸ್ತವದಲ್ಲಿ ಆ ಮೊಟ್ಟೆಯ ಒಳಭಾಗದ ಹಳದಿ ಬಣ್ಣದ ಲೋಳೆ ಸಂಪೂರ್ಣವಾಗಿ ಗುಲಾಬಿ ಬಣ್ಣದ್ದಾಗಿತ್ತು.

ಒಳಭಾಗದಲ್ಲಿ ಗುಲಾಬಿ ಬಣ್ಣದ ಮೊಟ್ಟೆ
ಮಿರರ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಪ್ರಕರಣವು ಯುಕೆಯ ಅಬಾಟ್ಸ್ ಲ್ಯಾಂಗ್ಲಿಯಿಂದ (Abbots Langley) ವರದಿಯಾಗಿದೆ. ಈ ಘಟನೆ ಬಗ್ಗೆ ಬೀನಾ ಸಾರಂಗಧರ್ (Beena Sarangdhar) ಎಂಬ ಮಹಿಳೆ ಮಾಹಿತಿ ನೀಡಿದ್ದಾರೆ. ಗುಲಾಬಿ ಬಣ್ಣದ ಮೊಟ್ಟೆಯನ್ನು (Egg Yolks) ನೋಡಿದಾಗ ತಾವು ಜೋರಾಗಿ ಕಿರುಚಿಕೊಂಡಿರುವುದಾಗಿ ಹೇಳಿದ್ದಾರೆ. ಅವಳ ಕಿರುಚಾಟವನ್ನು ಕೇಳಿ, ಅವಳ ಮಕ್ಕಳು ಕೂಡ ಅಡುಗೆ ಮನೆಗೆ ಧಾವಿಸಿದ್ದಾರೆ. 

ಈ ಕುರಿತಾದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ
ಇದಾದ ಬಳಿಕ ಅಡುಗೆ ಮನೆಯಲ್ಲಿ ಇಟ್ಟಿದ್ದ ಇತರ ಮೊಟ್ಟೆಗಳನ್ನೆಲ್ಲ ಬೀನಾ ಒಡೆದು ನೋಡಿದ್ದಾರೆ. ಆದರೆ ಉಳಿದೆಲ್ಲ ಮೊಟ್ಟೆಗಳು ಸಾಮಾನ್ಯವಾಗಿದ್ದವು. ಈ ಒಂದು ಮೊಟ್ಟೆ ಮಾತ್ರ ಗುಲಾಬಿ ಬಣ್ಣದ್ದಾಗಿತ್ತು. ಬಿನಾ ಈ ಗುಲಾಬಿ ಬಣ್ಣದ ಮೊಟ್ಟೆಯ ಚಿತ್ರಗಳನ್ನು ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ-Viral News: Corona ಸೋಂಕಿತನಾಗಲು ಬಯಸುತ್ತಿದ್ದಾನೆ ಓರ್ವ ವ್ಯಕ್ತಿ! ಅದಕ್ಕಾಗಿ ಹಣ ಕೂಡ ಖರ್ಚು ಮಾಡಲು ಸಿದ್ಧ ಅಂತಾನೆ

ಬ್ಯಾಕ್ಟೀರಿಯಾದ ಕಾರಣ ಗುಲಾಬಿ ಮೊಟ್ಟೆ
ಬೀನಾ ತನ್ನ ಮಕ್ಕಳಿಗೆ ಆ ಮೊಟ್ಟೆಯಿಂದ ದೂರವಿರಲು ಹೇಳಿ ಸ್ವಲ್ಪ ಸಂಶೋಧನೆ ನಡೆಸಿದ್ದಾರೆ. ನಂತರ ಅವರು ಮಾನವರಲ್ಲಿ ಗಂಭೀರ ಕಾಯಿಲೆಗೆ ಕಾರಣವಾಗುವ ಬ್ಯಾಕ್ಟೀರಿಯಾದಿಂದ ಮೊಟ್ಟೆ ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ-VIDEO: ಜ್ವಾಲಾಮುಖಿ ಹೇಗೆ ಸಿಡಿಯುತ್ತದೆ ಗೊತ್ತಾ? ಕ್ಯಾಮೇರಾ ಕಣ್ಣಲ್ಲಿ ಸೆರೆಯಾಗಿದೆ ಈ ಭಯಾನಕ ದೃಶ್ಯ

ಗುಲಾಬಿ ಮೊಟ್ಟೆಯು ಅನೇಕ ರೋಗಗಳಿಗೆ ಕಾರಣವಾಗಬಹುದು
US ಕೃಷಿ ಇಲಾಖೆಯ ಪ್ರಕಾರ, ಮೊಟ್ಟೆಯ ಬಿಳಿಭಾಗವು ಮೊಟ್ಟೆಯು ತುಂಬಾ ತಾಜಾವಾಗಿದೆ ಎಂಬುದರ ಸಂಕೇತವಾಗಿದೆ. ಆದರೆ ಗುಲಾಬಿ ಅಥವಾ ಮುತ್ತಿನ ಬಣ್ಣದ ಮೊಟ್ಟೆಯ ಬಿಳಿಭಾಗವು ಸ್ಯೂಡೋಮೊನಾಸ್ ಬ್ಯಾಕ್ಟೀರಿಯಾದಿಂದ ಹಾಳಾಗುವುದನ್ನು ಸೂಚಿಸುತ್ತದೆ, ಇದು ತಲೆನೋವು, ಊತ ಮತ್ತು ನ್ಯುಮೋನಿಯಾಕ್ಕೆ ಕಾರಣವಾಗಬಹುದು.

ಇದನ್ನೂ ಓದಿ-Viral Video: ಇಡೀ ಮನೆಯೇ ಸುಟ್ಟು ಕರಕಲಾದರೂ ಬೆಕ್ಕಿನ ಪ್ರಾಣ ಉಳಿಯಿತು, ಭಾವುಕ ವೃದ್ಧನ ವಿಡಿಯೋ ವೈರಲ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News