ನವದೆಹಲಿ: ಹಾವು ಕಡಿತ(Snake Bites)ದಿಂದ ಯಾರು ಬೇಕಾದರೂ ಸಾಯಬಹುದು. ಆದರೆ ಒಬ್ಬ ವ್ಯಕ್ತಿಯು ಜೀವಂತ ಹಾವನ್ನು ನುಂಗಿದ್ದಾನೆ. ಸಹಜವಾಗಿಯೇ ಇದು ಕೇಳಲು ವಿಚಿತ್ರವೆನಿಸುತ್ತದೆ, ಆದರೆ ಇದು ನಿಜವಾಗಿಯೂ ನಡೆದಿರುವ ಘಟನೆ. ಈ ರೀತಿ ಸ್ಟಂಟ್ ಮಾಡಲು ಹೋದ ಆ ವ್ಯಕ್ತಿ ಭಾರೀ ಬೆಲೆ ತೆತ್ತಿದ್ದಾನೆ. ತಾನು ಮಾಡಿದ ಹುಚ್ಚಾಟಕ್ಕೆ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.  


COMMERCIAL BREAK
SCROLL TO CONTINUE READING

ಮೊದಲು ನಾಲಿಗೆ ಕಚ್ಚಿತು ನಂತರ ಗಂಟಲು ಕಚ್ಚಿತು


ಈ ಘಟನೆ ನಡೆದಿರುವುದು ರಷ್ಯಾ(Russia)ದಲ್ಲಿ. ಹಾವು ನುಂಗುವ ಸಾಹಸ ಮಾಡಲು ಹೋದ ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಹಾವಿನ ಜೊತೆ ಚೆಲ್ಲಾಟವಾಡಲು ಹೋಗಿ ಪ್ರಾಣಕಳೆದುಕೊಂಡಿರುವ 55 ವರ್ಷದ ಕೃಷಿ ಕಾರ್ಮಿಕನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆತ ಹಾವು ನುಂಗುತ್ತಿರುವುದು ಕಂಡುಬಂದಿದೆ. ವರದಿಗಳ ಪ್ರಕಾರ ಈತ ಹಾವು ನುಂಗಲು ಎರಡು ಬಾರಿ ಪ್ರಯತ್ನಿಸಿ ವಿಫಲನಾಗಿದ್ದ. ಅಷ್ಟಕ್ಕೆ ಸುಮ್ಮನಾಗದೆ ಮತ್ತೆ 3ನೇ ಬಾರಿ ಪ್ರಯತ್ನಿಸಿದಾಗ ಹಾವು ಆತನ ನಾಲಿಗೆಗೆ ಕಚ್ಚಿದೆ. ಇದರ ನಂತರವೂ ಆತ ತನ್ನ ಹುಚ್ಚಾಟವನ್ನು ನಿಲ್ಲಿಸಲಿಲ್ಲ. ಮತ್ತೆ ನುಂಗಲು ಪ್ರಯತ್ನಿಸಿದ ಆತನ ಕುತ್ತಿಗೆಗೆ ಹಾವು ಕಚ್ಚಿಬಿಟ್ಟಿದೆ.   


ಇದನ್ನೂ ಓದಿ: Weird News: ಬೆಡ್ರೂಮಲ್ಲಿ ದೊರೆತ ಸಿಕ್ರೆಟ್ ಲಿಸ್ಟ್ ನೋಡಿ ಬೆಚ್ಚಿಬಿದ್ದಪತ್ನಿ, ಗರ್ಲ್ ಫ್ರೆಂಡ್ ಜೊತೆ...! 


ಉಸಿರಾಡಲು ಕಷ್ಟಪಟ್ಟು ಅಸುನೀಗಿದ ವ್ಯಕ್ತಿ


ಹಾವು ಕಚ್ಚಿದ(Snake Bites) ಕೆಲವು ಗಂಟೆಗಳ ನಂತರ ವ್ಯಕ್ತಿಯ ಆರೋಗ್ಯ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಹಾವು ಕಡಿತದಿಂದ ಆ ವ್ಯಕ್ತಿಗೆ ಅಲರ್ಜಿ ಉಂಟಾಯಿತು ಎಂದು ವೈದ್ಯರು ಹೇಳಿದರು. ನಾಲಿಗೆ ಮತ್ತು ಗಂಟಲಿನಲ್ಲಿ ತೀವ್ರವಾದ ಊತವಿತ್ತು. ವೈದ್ಯರ ಪ್ರಕಾರ, ವ್ಯಕ್ತಿಯು ಅನಾಫಿಲ್ಯಾಕ್ಟಿಕ್ ಆಘಾತವನ್ನು ಅನುಭವಿಸಿದ್ದನು. ಹಾವಿನ ಕಡಿತದಿಂದಾಗಿ ವ್ಯಕ್ತಿಯ ನಾಲಿಗೆ ತುಂಬಾ ಊದಿಕೊಂಡಿತ್ತು. ಇದರಿಂದ ಆ ವ್ಯಕ್ತಿಯು ಉಸಿರಾಡಲು ಕಷ್ಟಪಟ್ಟು ಸಾವನ್ನಪ್ಪಿದನು.


ಇದನ್ನೂ ಓದಿ: World's Luckiest House: ಇದು ವಿಶ್ವದ ಅದೃಷ್ಟಶಾಲಿ ಮನೆಯಂತೆ..! ಕಾರಣ ಏನು ಗೊತ್ತೇ..?


ಹಾವು ನುಂಗುವ ಅಭ್ಯಾಸ


ವರದಿಯ ಪ್ರಕಾರ ರಷ್ಯಾದ ಈ ಪ್ರದೇಶದಲ್ಲಿನ ಸ್ಥಳೀಯ ಜನರಲ್ಲಿ ಹಾವುಗಳನ್ನು ನುಂಗುವ(Man Swallowed Snake) ಅಭ್ಯಾಸವಿದೆಯಂತೆ. ಇಲ್ಲಿ ಕಲ್ಲಂಗಡಿ ಬೆಳೆಯುವ ಪ್ರದೇಶಗಳಲ್ಲಿ Step Viper ಜಾತಿಯ ಹಾವು ಕಂಡುಬರುತ್ತದೆ. ಈ ಹಾವು ತುಂಬಾ ವಿಷಕಾರಿಯಲ್ಲವಂತೆ. ಆದರೆ ಇದು ಅನೇಕ ಬಾರಿ ಕಚ್ಚಿದರೆ ಮನುಷ್ಯರು ಬದುಕುವುದು ಕಷ್ಟವಂತೆ. ಹಾವು ಕಡಿತದಿಂದ ವ್ಯಕ್ತಿ ಸಾವನ್ನಪ್ಪಿದ ಬಳಿಕ ಇಲ್ಲಿನ ಸ್ಥಳೀಯ ಆಡಳಿತವು ಹಾವುಗಳನ್ನು ನುಂಗಬೇಡಿ ಎಂದು ಜನರಿಗೆ ಮನವಿ ಮಾಡಿದೆ. ಹಾವು ನುಂಗುವ ಅಭ್ಯಾಸ ನಿಲ್ಲಿಸಿ ಇಲ್ಲದಿದ್ದರೆ ಅದು ನಿಮ್ಮ ಜೀವಕ್ಕೆ ಮಾರಕವಾಗಬಹುದು ಅಂತಾ ಎಚ್ಚರಿಕೆ ನೀಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.