Cloud Burst Viral Video - ಮೋಡ ಸ್ಫೋಟಗೊಂಡಾಗಲೆಲ್ಲಾ (Cloud Burst) ಆಯಾ ಸ್ಥಳದಲ್ಲಿ ಇದ್ದಕ್ಕಿದ್ದಂತೆ ನೀರು ತುಂಬಿಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಮೇಘಸ್ಫೋಟದ ಘಟನೆಯು ತನ್ನೊಂದಿಗೆ ಭಾರಿ ವಿನಾಶವನ್ನು(Colud Burst Disaster) ಕೂಡ ಹೊತ್ತು ತರುತ್ತದೆ. ಆದರೆ ನೀವು ಎಂದಾದರೂ ಮೋಡ ಸ್ಫೋಟಗೊಳ್ಳುವುದನ್ನು ನೋಡಿದ್ದೀರಾ? ಇತ್ತೀಚೆಗಷ್ಟೇ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತಾದ  ವೀಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಅದರಲ್ಲಿ ಮೋಡ ಸ್ಫೋಟದ ಅಧ್ಬುತ ದೃಶ್ಯವಿದೆ


COMMERCIAL BREAK
SCROLL TO CONTINUE READING

ಈ ವೀಡಿಯೋವನ್ನು Instagram ನಲ್ಲಿ ಹಂಚಿಕೊಳ್ಳಲಾಗಿದೆ.. ಮೋಡಗಳು ಹೇಗೆ ನಿಧಾನವಾಗಿ ಚಲಿಸುತ್ತವೆ ಮತ್ತು ಇದ್ದಕ್ಕಿದ್ದಂತೆ ಅವುಗಳಲ್ಲಿ ಒಂದರಿಂದ ನೀರು ಹೇಗೆ ವೇಗವಾಗಿ ಮತ್ತು ಧಾರಾಕಾರವಾಗಿ ಸುರಿಯಲು ಪ್ರಾರಂಭಿಸುತ್ತದೆ ಎಂಬುದನ್ನು ವೀಡಿಯೊದಲ್ಲಿ ಸ್ಪಷ್ಟವಾಗಿ ನೀವು ಕಾಣಬಹುದು. ಬೆಟ್ಟಗಾಡು ಪ್ರದೇಶಗಳಲ್ಲಿ  ಇಂತಹ ಮೋಡ ಸ್ಫೋಟಗೊಂದು ಹರಿದು ಬರುವ ನೀರು ಕೆಳಗೆ ಹರಿಯುವ ನದಿಯಲ್ಲಿ ಬೆರೆತು ಹೋಗುವುದು ಸಮಾಧಾನದ ಸಂಗತಿಯಾದರೂ, ಒಂದು ವೇಳೆ ಈ ನೀರು ಜನ ನಿಬಿಡ ಪ್ರದೇಶದಲ್ಲಿ ಅಥವಾ ವಸತಿ ಪ್ರದೇಶದಲ್ಲಿ ಬಿದ್ದರೆ ಗತಿ ಏನಾಗುತ್ತದೆ ಎಂಬುದನ್ನು ನಾವು ನಿಮ್ಮ ಊಹೆಗೆ ಬಿಡುತ್ತೇವೆ.


ಇದನ್ನೂ ಓದಿ-Dating Apps ಬಳಸುವಾಗ ಈ 5 ಎಚ್ಚರಿಕೆಗಳನ್ನು ವಹಿಸಲು ಮರೆಯಬೇಡಿ, ಇಲ್ದಿದ್ದ್ರೆ ?


ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋ ಅನ್ನು ಲಕ್ಷಾಂತರ ಜನರು ವಿಕ್ಷೀಸಿದ್ದಾರೆ. ಹಲವು ಬಳಕೆದಾರರು ಈ ವಿಡಿಯೋ ನೋಡಿ ನಿಬ್ಬೇರಗಾಗಿದ್ದಾರೆ.


ಇದನ್ನೂ ಓದಿ-Nora Fatehi ಇನ್ಸ್ಟಾಗ್ರಾಮ್ ಖಾತೆ Delete! ಆಕೆಯ ಕೊನೆಯ ಪೋಸ್ಟ್ ಯಾವ್ದಿತ್ತು ಗೊತ್ತಾ?


ಮೋಡ ಸ್ಫೋಟ ಯಾಕೆ ಸಂಭವಿಸುತ್ತದೆ?
ಸಾಕಷ್ಟು ತೇವಾಂಶವುಳ್ಳ ಮೋಡಗಳು ಒಂದೇ ಜಾಗದಲ್ಲಿ ನಿಂತುಕೊಂಡರೆ, ಆ ಮೋಡಗಳಲ್ಲಿರುವ ನೀರಿನ ಹನಿಗಳು ಪರಸ್ಪರ ಕೂಡಿಬಿಡುತ್ತವೆ. ಇಂತಹ ನೀರು ಹನಿಗಳ ಭಾರದಿಂದ ಮೋಡಗಳ ಘನತ್ವ ಭಾರಿ ಮಟ್ಟದಲ್ಲಿ ಹೆಚ್ಚಾಗುತ್ತದೆ ಮತ್ತು ಆಕಸ್ಮಿಕವಾಗಿ ಭಾರಿ ಮಳೆ ಆರಂಭಗೊಳ್ಳುತ್ತದೆ. ಮೋಡ ಸ್ಫೋಟದ ಸಂದರ್ಭದಲ್ಲಿ 100 ಮಿಮಿ ಪ್ರತಿ ಗಂಟೆಯ ವೇಗದಲ್ಲಿ ಮಳೆ ಕುಸಿಯುತ್ತದೆ. 



ಇದನ್ನೂ ಓದಿ-ಈಗಲೆ ಒಳ್ಳೆಯ ಕೆಲಸ ಕೈಗೆತ್ತಿಕೊಳ್ಳಿ, ಮುಂದಿನ 24 ಗಂಟೆಗಳಲ್ಲಿ ಅದ್ಭುತ ಯಶಸ್ಸು ಒಲಿಯಲಿದೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.