Nora Fatehi ಇನ್ಸ್ಟಾಗ್ರಾಮ್ ಖಾತೆ Delete! ಆಕೆಯ ಕೊನೆಯ ಪೋಸ್ಟ್ ಯಾವ್ದಿತ್ತು ಗೊತ್ತಾ?

Nora Fatehi ಅವರ Instagram ಖಾತೆಯು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದು, ಅಭಿಮಾನಿಗಳು ಭಾರಿ ಆಘಾತಕ್ಕೆ ಒಳಗಾಗಿದ್ದಾರೆ ಮತ್ತು ತೀವ್ರ ಅಸಮಾಧಾನಗೊಂಡಿದ್ದಾರೆ.

Written by - Nitin Tabib | Last Updated : Feb 4, 2022, 09:06 PM IST
  • Nora Fatehi ಇನ್ಸ್ಟಾಗ್ರಾಮ್ ಖಾತೆ ಡಿಲೀಟ್!
  • ಅಭಿಮಾನಿಗಳು ಹೇಳಿದ್ದೇನು?
  • ಆಕೆಯ ಇನ್ಸ್ಟಾಗ್ರಾಮ್ ಕೊನೆಯ ವೈರಲ್ ಪೋಸ್ಟ್ ಯಾವ್ದಿತ್ತು?
Nora Fatehi ಇನ್ಸ್ಟಾಗ್ರಾಮ್ ಖಾತೆ Delete! ಆಕೆಯ ಕೊನೆಯ ಪೋಸ್ಟ್ ಯಾವ್ದಿತ್ತು ಗೊತ್ತಾ? title=
Nora Fatehi Instagram Account Delete (File Photo)

Nora Fatehi Instagram Account Delete - ಖ್ಯಾತ ಬಾಲಿವುಡ್‌ನ ನಟಿ ನೋರಾ ಫತೇಹಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿರುತ್ತಾಳೆ. ಆಕೆ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ನಿತ್ಯ ತನ್ನ ಆಸಕ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾಳೆ. ಆದರೆ ಇತ್ತೀಚೆಗೆ ಆಕೆ Instagram ನಲ್ಲಿ ಕಣ್ಮರೆಯಾದ ಕಾರಣ ಆಕೆಯ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ.  ಮಾಧ್ಯಮ ವರದಿಗಳ ಪ್ರಕಾರ, ನೋರಾ ಫತೇಹಿ ಅವರ Instagram ಖಾತೆಯನ್ನು ಡಿಲೀಟ್ ಆಗಿದೆ ಎನ್ನಲಾಗಿದೆ. ಆದರೆ, ಇದು ಹೇಗೆ ಸಂಭವಿಸಿತು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಬಹಿರಂಗಗೊಂಡಿಲ್ಲ. ಇದರ ಹೊರತಾಗಿ ಈ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ವೇಳೆ, ನೋರಾ Instagram ಖಾತೆಡಿಲೀಟ್ ಆದ ಬಳಿಕ, ಆಕೆಯ ಕೊನೆಯ Insta ಪೋಸ್ಟ್ ಭಾರೀ ಚರ್ಚೆಗೆ ಒಳಗಾಗಿದೆ.

ಇದನ್ನೂ ಓದಿ-MediaOne ಸುದ್ದಿ ವಾಹಿನಿಯ ಪ್ರಸಾರಕ್ಕೆ ತಡೆ ನೀಡಿದ ಕೇಂದ್ರ ಸರ್ಕಾರ ಹೇಳಿದ್ದೇನು?

ಅಸಮಾಧಾನ ಹೊರಹಾಕಿದ ಅಭಿಮಾನಿಗಳು
ನೋರಾ ಫತೇಹಿ ಪ್ರಸ್ತುತ ರಜಾ-ಮಜಾ ಅನುಭವಿಸುತ್ತಿದ್ದಾಳೆ ಮತ್ತು ಆಕೆ ನಿರಂತರವಾಗಿ ತನ್ನ ಅಭಿಮಾನಿಗಳ ಜೊತೆಗೆ Instagram ಖಾತೆಯಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿತ್ತಿದ್ದಾಳೆ. ಇದೆ ವೇಳೆ ಇದ್ದಕ್ಕಿದ್ದಂತೆ ಆಕೆಯ Instagram  ಖಾತೆ ಡಿಲೀಟ್ ಆಗಿದೆ. ಅದರ ನಂತರ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ ಮತ್ತು ತೀವ್ರ ಅಸಮಾಧಾನಗೊಂಡಿದ್ದಾರೆ. ನೋರಾಳ ಇತರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಭಿಮಾನಿಗಳು ಆಕೆಯ Insta ಖಾತೆ ಡಿಲೀಟ್ ಆಗುರುವುದರ ಕುರಿತು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.  ಇನ್ನೊಂದೆಡೆ ನೋರಾಳ  ಇನ್‌ಸ್ಟಾಗ್ರಾಮ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಹಲವು ಮಾಧ್ಯಮ ವರರಿಗಳಲ್ಲಿ ಊಹಾಪೋಹಗಳು ಕೇಳಿಬಂದಿವೆ. ಆದರೆ ಈ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ-Pushpa Box Office Collection : 100 ಕೋಟಿ ಕ್ಲಬ್ ಸೇರಿದ 'ಪುಷ್ಪ' ಸಿನಿಮಾ! ಹಾಗಿದ್ರೆ ಗಳಿಸಿದ್ದು ಎಷ್ಟು?

ಈ ಪೋಸ್ಟ್ ವೈರಲ್ ಆಗಿತ್ತು
ತನ್ನ ಖಾತೆ ಡಿಲೀಟ್ ಆಗುವ ಕೆಲ ಗಂಟೆಗಳ ಮುನ್ನ Instagram ನಲ್ಲಿ, ನೋರಾ  ತನ್ನ ರಜೆಯ ಫೋಟೋವನ್ನು ಹಂಚಿಕೊಂಡಿದ್ದಾಳೆ. ಈ ಚಿತ್ರದಲ್ಲಿ ಆಕೆ ಎರಡು ಸಿಂಹಗಳೊಂದಿಗೆ ಕುಳಿತಿರುವುದು ಕಂಡುಬಂದಿದೆ. ಚಿತ್ರಕ್ಕೆ ಶೀರ್ಷಿಕೆ ಬರೆದುಕೊಂಡಿದ್ದ ನೋರಾ - 'ಇನ್ನು ಮುಂದೆ ಸಿಂಹದ ಶಕ್ತಿ ಮಾತ್ರ ಇರುತ್ತದೆ, ಬೇರೆ ಏನೂ ಇಲ್ಲ ಆದರೆ ಅವು ತುಂಬಾ ಸುಂದರವಾಗಿವೆ' ಎಂದಿದ್ದಳು. ಆಕೆಯ ಈ ಪೋಸ್ಟ್  ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ (Viral Post) ಆಗಿದ್ದು, ಸಿಂಹಗಳೊಂದಿಗೆ ಫೋಟೋ ತೆಗೆಸಿದಾಗ ಅಭಿಮಾನಿಗಳು ಆಕೆಯ ಧೈರ್ಯವನ್ನು ಶ್ಲಾಘಿಸಿದ್ದರು.

ಇದನ್ನೂ ಓದಿ-Pushpa: The Rise - 100 ಕೋಟಿ ಸಂಪಾದನೆ ಮಾಡಿದ ಚಿತ್ರಗಳ ಕ್ಲಬ್ ಸೇರಿದ Allu Arjun ಅಭಿನಯದ 'ಪುಷ್ಪ' ಹಿಂದಿ ಆವೃತ್ತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News