ನವದೆಹಲಿ: ರಸ್ತೆಯಲ್ಲಿ ಅನೇಕ ಜನರು ತಮ್ಮ ವಾಹನಗಳನ್ನು ವಿಭಿನ್ನ ಮತ್ತು ವಿಶಿಷ್ಟ ರೀತಿಯಲ್ಲಿ ನಿಲ್ಲಿಸುವುದನ್ನು ನೀವು ನೋಡಿರಬಹುದು. ಆದರೆ ಇಂದು ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋ ಚೀನಾದ ಚಾಂಗ್‌ಕಿನ್ ನಗರದ್ದು. ಈ ರೀತಿಯ ಕಾರ್ ಪಾರ್ಕಿಂಗ್‍ಅನ್ನು ನೀವು ನೋಡಿಯೇ ಇರುವುದಿಲ್ಲ. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


COMMERCIAL BREAK
SCROLL TO CONTINUE READING

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ ಈ ವಿಡಿಯೋದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಕಾರೊಂದು ನಿಯಂತ್ರಣ ಕಳೆದುಕೊಂಡು ಗಾಳಿಯಲ್ಲಿ ಹಾರಿಹೋಗಿದೆ. ನಂತರ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ಹತ್ತುವ ಕಾರು ನೇರವಾಗಿ ಖಾಲಿ ಪಾರ್ಕಿಂಗ್ ಜಾಗದಲ್ಲಿ ನಿಲ್ಲುತ್ತದೆ. ಕಾರುಗಳ ಮೇಲೆ ಹತ್ತಿದ ಕಾರು ನಿಖರವಾಗಿ ಖಾಲಿ ಇದ್ದ ಪಾರ್ಕಿಂಗ್ ಸ್ಥಳಕ್ಕೆ ಹೋಗಿ ನಿಂತಿರುವ ದೃಶ್ಯ ನೋಡಿಗರಿಗೆ ಅಚ್ಚರಿ ಮೂಡಿಸಿದೆ.


ಇದನ್ನೂ ಓದಿViral News: ರಾತ್ರಿ ಮಲಗಿದ್ದ ಈ ಬಾಲಕಿ 9 ವರ್ಷ ಏಳಲಿಲ್ಲ, ಎದ್ದಾಗ ತಾಯಿ ಸಾವನ್ನಪ್ಪಿದ್ದರು!


ಅಪಾಯಕಾರಿ ಪಾರ್ಕಿಂಗ್ ವಿಡಿಯೋ ವೈರಲ್!


ಲೈಕ್ ಎ ಗ್ಲೋವ್’ ಆಕ್ಷನ್ ಚಿತ್ರದ ದೃಶ್ಯವೆಂದು ಹೇಳಿದ್ದಾರೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ವಿಡಿಯೋವನ್ನು ಶೇರ್ ಕೂಡ ಮಾಡಿದ್ದಾರೆ.


ಇದನ್ನೂ ಓದಿ: China: ಚೀನಾದಲ್ಲಿ ಮತ್ತೆ ಕೊರೊನಾ ಅಬ್ಬರ: ಶಾಂಘೈನಲ್ಲಿ ಅಂಗಡಿಗಳು ಬಂದ್‌


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.