ನವದೆಹಲಿ: ಶೀತಲ ಸಮರದ ಬಳಿಕ ಜಗತ್ತು ಇದೇ ಮೊದಲ ಬಾರಿಗೆ ಮಾನವ ವಿನಾಶದ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆತಂಕ ವ್ಯಕ್ತಪಡಿಸಿದ್ದಾರೆ.  


COMMERCIAL BREAK
SCROLL TO CONTINUE READING

ನ್ಯೂಯಾರ್ಕ್‍ ನಗರದಲ್ಲಿ ನಡೆದ ಡೆಮಾಕ್ರಟಿಕ್‌ ಪಕ್ಷದ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿರುವ ಬಿಡೆನ್, ‘1962ರಲ್ಲಿ ಉಂಟಾದ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಬಳಿಕ ಇಂತಹ ವಿನಾಶದ ಅಪಾಯಗಳು ಎದುರಾಗಿರಲಿಲ್ಲ. ಉಕ್ರೇನ್‌ ಮೇಲೆ ಆಕ್ರಮಣ ಮುಂದುವರಿಸಲು ಪರಮಾಣು ಶಸ್ತ್ರಾಸ್ತ್ರ ಬಳಸುವ ವಿಚಾರವಾಗಿ ಬೆದರಿಕೆ ಹಾಕುತ್ತಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತಮಾಷೆ ಮಾಡುತ್ತಿಲ್ಲ’ ಅಂತಾ ಎಚ್ಚರಿಕೆ ನೀಡಿದ್ದಾರೆ.  


ಇದನ್ನೂ ಓದಿ: WHO Medical Alert: ಭಾರತದಲ್ಲಿ ತಯಾರಾದ 4 ಕೆಮ್ಮು ಸಿರಪ್‌ಗಳ ಬಗ್ಗೆ ಡಬ್ಲ್ಯೂಎಚ್ಒ ಎಚ್ಚರಿಕೆ


ಉದ್ಯಮಿ ಜೇಮ್ಸ್‌ ಮುರ್ಡೊಕ್ ಅವರ ಮ್ಯಾನ್‌ ಹಟನ್‌ ನಿವಾಸದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಕ್ಷದ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಬಿಡೆನ್, ಪರಮಾಣು ಬೆದರಿಕೆಗಳಿಂದ ಉಂಟಾಗುವ ಅಪಾಯಗಳನ್ನು ಬಲವಾಗಿ ಖಂಡಿಸಿದ್ದಾರೆ. ಸೋವಿಯತ್‌ ಒಕ್ಕೂಟವು ಕ್ಯೂಬಾದಲ್ಲಿ ಕ್ಷಿಪಣಿಗಳನ್ನು ಸ್ಥಾಪಿಸಿದ್ದ ಕಾರಣ ಪರಮಾಣು ಬಿಕ್ಕಟ್ಟು ಉಂಟಾಗಿತ್ತು. ಇದನ್ನು ಉಲ್ಲೇಖಿಸಿ ಟೀಕಾಪ್ರಹಾರ ನಡೆಸಿದ ಬಿಡೆನ್, ‘ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಬಳಿಕ ಇದೇ ಮೊದಲ ಬಾರಿಗೆ ಪರಮಾಣು ಶಸ್ತ್ರಾಸ್ತ್ರಗಳ ನೇರ ಅಪಾಯ ಎದುರಾಗಿದೆ’ ಅಂತಾ ಕಳವಳ ವ್ಯಕ್ತಪಡಿಸಿದ್ದಾರೆ.   


ಉಕ್ರೇನ್‌ ಭೂ ಪ್ರದೇಶವನ್ನು ವಶಕ್ಕೆ ಪಡೆಯುವ ತನ್ನ ಪ್ರಯತ್ನಕ್ಕೆ ತಡೆಯುಂಟಾದರೆ ಹಾಗೂ ರಷ್ಯಾದ ‘ಪ್ರಾದೇಶಿಕ ಸಮಗ್ರತೆ’ಗೆ ಬೆದರಿಕೆ ಎದುರಾದರೆ ಉಕ್ರೇನ್‌ನಲ್ಲಿ ಪರಮಾಣು ಅಸ್ತ್ರ ಬಳಸುವುದಾಗಿ ಪುಟಿನ್ ಬೆದರಿಕೆ ಒಡ್ಡಿದ್ದರು. ಒಂದು ವೇಳೆ ಪುಟಿನ್ ಪರಮಾಣು ಅಸ್ತ್ರ ಬಳಸಿದರೆ ಅದರ ಪರಿಣಾಮ ಹೇಗಿರುತ್ತದೆ ಎಂಬ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಚರ್ಚೆ ನಡೆಯುತ್ತಿದೆ.


ಇದನ್ನೂ ಓದಿ: Viral Video: ಸನ್ ಗ್ಲಾಸ್ ಹಾಕೊಂಡು ಜ್ಯೂಸ್ ಕುಡಿತಿರೋ ಈ ಚಿಂಪಾಜಿ ಸ್ಟೈಲ್ ನೋಡ್ರೀ…ಹೊಟ್ಟೆಕಿಚ್ಚು ಪಡ್ತೀರ


ಈ ಬೆದರಿಕೆಯು ರಷ್ಯಾದ ಯುದ್ಧತಂತ್ರವಾಗಿರಬಹುದು ಅಂತಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಸೀಮಿತ ಪ್ರದೇಶದಲ್ಲಿನ ಯುದ್ಧತಂತ್ರದ ಹೊಡೆತವು ವ್ಯಾಪಕ ಪರಿಣಾಮಗ ಪ್ರಚೋದಿಸುವ ಅಪಾಯವಿದೆ ಅಂತಾ ಬೈಡನ್ ಎಚ್ಚರಿಸಿದ್ದಾರೆ.


‘ನಮಗೆ ಪುಟಿನ್‌ ಬಗ್ಗೆ ಚೆನ್ನಾಗಿ ತಿಳಿದಿದೆ. ಪರಮಾಣು ಶಸ್ತ್ರಾಸ್ತ್ರಗಳು ಅಥವಾ ಜೈವಿಕ ಇಲ್ಲವೇ ರಾಸಾಯನಿಕ ಅಸ್ತ್ರಗಳ ಸಂಭಾವ್ಯ ಬಳಕೆಯ ಬಗ್ಗೆ ಅವರು ಹೇಳುತ್ತಿರುವುದು ತಮಾಷೆಯ ವಿಷಯವಲ್ಲ. ಏಕೆಂದರೆ ರಷ್ಯಾ ಸೇನೆ ಗಮನಾರ್ಹವಾಗಿ ದುರ್ಬಲವಾಗಿದೆ. ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರವನ್ನು ಸುಲಭವಾಗಿ ಬಳಸುವ ಸಾಮರ್ಥ್ಯ ಮತ್ತು ಆರ್ಮಗೆಡ್ಡೋನ್‌ನೊಂದಿಗೆ ಅಂತ್ಯಗೊಳ್ಳದಂತಹ ಯಾವುದೇ ವಿಷಯವಿಲ್ಲವೆಂದು ನಾನು ಭಾವಿಸುತ್ತೇನೆ’ ಎಂದು ಬಿಡೆನ್ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.