WATCH : ತೈವಾನ್ ಭೀಕರ ಭೂಕಂಪದ ವಿಡಿಯೋ ನೋಡಿ.. ಆಟಿಕೆಯಂತೆ ಅಲುಗಾಡಿದ ರೈಲು
Taiwan Earthquake Video: ತೈವಾನ್‌ನ ಪೂರ್ವ ಯುಜಿಂಗ್‌ನಲ್ಲಿ ಭಾನುವಾರ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿಯಲ್ಲಿ ತಿಳಿಸಿದೆ.
Taiwan Earthquake Video: ತೈವಾನ್‌ನ ಪೂರ್ವ ಯುಜಿಂಗ್‌ನಲ್ಲಿ ಭಾನುವಾರ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿಯಲ್ಲಿ ತಿಳಿಸಿದೆ. 10 ಕಿಲೋಮೀಟರ್ ಆಳದಲ್ಲಿ ಕರಾವಳಿ ನಗರವಾದ ಟೈಟುಂಗ್‌ನಿಂದ ಉತ್ತರಕ್ಕೆ 50 ಕಿಲೋಮೀಟರ್‌ಗಳು (30 ಮೈಲಿಗಳು) ರಾತ್ರಿ 9:30 ರ ನಂತರ ಈ ಕಂಪನ ನಡೆದಿದೆ. 6.5 ತೀವ್ರತೆಯ ಭೂಕಂಪ ಸಂಭವಿಸಿದ ಒಂದು ದಿನದ ನಂತರ ಈ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ ಎಂದು USGS ಹೇಳಿದೆ.
ಇದನ್ನೂ ಓದಿ : Viral Video : ಪುಟ್ಟ ಮಗುವಿನಂತೆ ಜಾರುಬಂಡಿ ಆಡುವ ಕರಡಿ.. ಮನಸ್ಸನ್ನು ರಿಲ್ಯಾಕ್ಸ್ ಮಾಡುವ ವಿಡಿಯೋ
ಭೂಕಂಪನದ ಪರಿಣಾಮ ನಿಲ್ದಾಣದಲ್ಲಿ ನಿಂತಿದ್ದ ರೈಲು ಅಲುಗಾಡಿದೆ. ಈ ವಿಡಿಯೋ ಟ್ವಿಟರ್‌ನಲ್ಲಿ ಅತಿ ಹೆಚ್ಚು ವೈರಲ್ ಆಗಿದೆ. ತೈವಾನ್ ಮಾಧ್ಯಮ ವರದಿಯ ಪ್ರಕಾರ, ಭೂಕಂಪದ ಕೇಂದ್ರದ ಬಳಿ ಎರಡು ಅಂತಸ್ತಿನ ವಸತಿ ಕಟ್ಟಡ ಕುಸಿದು ಬಿದ್ದಿದೆ. ರಾಜಧಾನಿ ತೈಪೆಯ ದ್ವೀಪದ ಉತ್ತರ ತುದಿಯಲ್ಲಿ ಕಂಪನದ ಅನುಭವವಾಗಿದೆ.
ಮಾತನಾಡದೇ ಕೋಟಿ ಒಡೆಯನಾದ ಖಾಬಿ : ಈತನ ಬ್ಯಾಂಕ್ ಬ್ಯಾಲೆನ್ಸ್ ಕೇಳಿದ್ರೆ ದಂಗಾಗ್ತೀರಾ..!
ಟ್ವಿಟರ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಭಯಭೀತರಾದ ನಿವಾಸಿಗಳು ಕಟ್ಟಡದಿಂದ ಆಚೆ ಓಡಿಬರುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ. ತೈವಾನ್ ರಾಜಧಾನಿ ತೈಪೆಯಲ್ಲೂ ಕಟ್ಟಡಗಳು ಅಲುಗಾಡುವ ಅನುಭವವಾಗಿದೆ ಎಂದು ಎಎಫ್‌ಪಿ ವರದಿಗಾರರು ತಿಳಿಸಿದ್ದಾರೆ. ಈ ಹಿಂದೆ ಸೆಪ್ಟೆಂಬರ್ 1999 ರಲ್ಲಿ ತೈವಾನ್‌ನ ಅತ್ಯಂತ ಭೀಕರ ಭೂಕಂಪನಕ್ಕೆ ಸಾಕ್ಷಿಯಾಗಿತ್ತು. ಇದು 2,400 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.