Viral Video : ಪುಟ್ಟ ಮಗುವಿನಂತೆ ಜಾರುಬಂಡಿ ಆಡುವ ಕರಡಿ.. ಮನಸ್ಸನ್ನು ರಿಲ್ಯಾಕ್ಸ್‌ ಮಾಡುವ ವಿಡಿಯೋ

Viral Video : ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಪ್ರಾಣಿಗಳು ಮತ್ತು ಪಕ್ಷಿಗಳ ವಿಡಿಯೋಗಳನ್ನು ನೆಟಿಜನ್‌ಗಳು ಹೆಚ್ಚು ಇಷ್ಟಪಡುತ್ತಾರೆ. 

Written by - Chetana Devarmani | Last Updated : Sep 18, 2022, 10:19 AM IST
  • ಪುಟ್ಟ ಮಗುವಿನಂತೆ ಜಾರುಬಂಡಿ ಆಡುವ ಕರಡಿ
  • ಮನಸ್ಸನ್ನು ರಿಲ್ಯಾಕ್ಸ್‌ ಮಾಡುವ ವಿಡಿಯೋ
  • ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್‌
Viral Video : ಪುಟ್ಟ ಮಗುವಿನಂತೆ ಜಾರುಬಂಡಿ ಆಡುವ ಕರಡಿ.. ಮನಸ್ಸನ್ನು ರಿಲ್ಯಾಕ್ಸ್‌ ಮಾಡುವ ವಿಡಿಯೋ  title=
ಕರಡಿ

Viral Video : ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಪ್ರಾಣಿಗಳು ಮತ್ತು ಪಕ್ಷಿಗಳ ವಿಡಿಯೋಗಳನ್ನು ನೆಟಿಜನ್‌ಗಳು ಹೆಚ್ಚು ಇಷ್ಟಪಡುತ್ತಾರೆ. ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗಳು ಎಲ್ಲಾ ರೀತಿಯ ಪ್ರಾಣಿಗಳ ಪ್ರವೃತ್ತಿಗಳ ಬಗ್ಗೆ ನಿಮಗೆ ಅರಿವು ಮೂಡಿಸಲು ಕೆಲಸ ಮಾಡುವುದರ ಜೊತೆಗೆ ಅವುಗಳ ಮುದ್ದಾದ ಚಟುವಟಿಕೆಗಳಿಂದ ನಿಮ್ಮ ದಿನವನ್ನು ರಂಗುಗೊಳಿಸುತ್ತವೆ. 

ಇದನ್ನೂ ಓದಿ : Video : ಇಯರ್‌ ಫೋನ್‌ ಹಾಕಿಕೊಳ್ಳಲು ಪಾಕ್ ಪ್ರಧಾನಿ ಪರದಾಟ, ಜೋರಾಗಿ ನಕ್ಕ ಪುಟಿನ್

ಈ ವಿಡಿಯೋದಲ್ಲಿ ಮುದ್ದಾದ ಕರಡಿ ಜಾರುಬಂಡಿ ಆಟವನ್ನು ಆನಂದಿಸುತ್ತಿದೆ. ಮಕ್ಕಳಂತೆ ಕರಡಿ ಕೂಡ ಮುದ್ದಾಗಿ ಆಟವಾಡುತ್ತಿದೆ. ಜಾರುಬಂಡಿಯ ಮೆಟ್ಟಿಲುಗಳನ್ನು ಹತ್ತುವಾಗ ಕರಡಿ ತುಂಬಾ ಮುದ್ದಾಗಿ ಕಾಣುತ್ತದೆ. ಕರಡಿಗಳು ಸಾಮಾನ್ಯವಾಗಿ ಭಾರೀ ತೂಕವನ್ನು ಹೊಂದಿರುವುದರಿಂದ ಇದನ್ನು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಆದರೆ ಈ ವಿಡಿಯೋದಲ್ಲಿ ಕರಡಿಯು ಸಾಕಷ್ಟು ಬುದ್ಧಿವಂತಿಕೆಯಿಂದ ಜಾರುಬಂಡಿ ಆಟ ಆಡುತ್ತಾ ಎಂಜಾಯ್‌ ಮಾಡುತ್ತಿದೆ. 

 

 

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ನೆಟಿಜನ್‌ಗಳು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಇದುವರೆಗೆ 86.6 ಸಾವಿರ ಲೈಕ್ಸ್‌ಗಳು ಬಂದಿವೆ. ಬಳಕೆದಾರರು ಈ ವಿಡಿಯೋ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ, ಒಬ್ಬ ಬಳಕೆದಾರನು ‘ಅಯ್ಯೋ ತುಂಬಾ ಮುದ್ದಾಗಿದೆ’ ಎಂದು ಮತ್ತೊಬ್ಬರು ‘ಒಂದು ಸಂತೋಷಕರ ಕರಡಿ’ ಎಂದು ಬರೆದಿದ್ದಾರೆ. 

ಇದನ್ನೂ ಓದಿ : ಆಹಾರಕ್ಕಾಗಿ ಮನೆಗೆ ನುಗ್ಗಿದ ಆನೆ, ಹೊರ ಬರಲಾರದೆ ಪರದಾಟ ! ಇಲ್ಲಿದೆ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News