ಮಾತನಾಡದೇ ಕೋಟಿ ಒಡೆಯನಾದ ಖಾಬಿ : ಈತನ ಬ್ಯಾಂಕ್‌ ಬ್ಯಾಲೆನ್ಸ್‌ ಕೇಳಿದ್ರೆ ದಂಗಾಗ್ತೀರಾ..!

ಸೋಷಿಯಲ್‌ ಮೀಡಿಯಾ ಒಂದು ತರ ಮ್ಯಾಜಿಕ್‌ ವರ್ಲ್ಡ್‌ ಇದ್ದಂತೆ. ಇಲ್ಲಿ ಯಾರು ಯಾವಾಗ ಫೇಮಸ್‌ ಆಗ್ತಾರೆ, ಸ್ಟಾರ್‌ ಲೋಕದ ದಿಗ್ಗಜರಾಗ್ತಾರೆ ಅಂತ ಗೊತ್ತೇ ಆಗಲ್ಲ. ಅದೇ ರೀತಿ ಖಾಬಿ ಲೇಮ್‌, ಈತ ಒಂದು ಶಬ್ದವನ್ನು ಮಾತನಾಡದೆ ತನ್ನ ನಟನೆಯ ಮೂಲಕ ಅಂತರ್ಜಾಲ ಲೋಕದಲ್ಲಿ ಅಪಾರ ಅಭಿಮಾನಿಗಳನ್ನ ಗಳಿಸಿದ್ದಾನೆ. ಅಲ್ಲದೆ, ಸಿನಿಮಾ ನಟರಿಗೂ ಇರದಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಮತ್ತು ಹಣ ಸಂಪಾದಿಸಿದ್ದಾನೆ.  

Written by - Krishna N K | Last Updated : Sep 18, 2022, 08:01 PM IST
  • ಖಾಬಿ ಲೇಮ್‌, ಈತ ಒಂದು ಶಬ್ದವನ್ನು ಮಾತನಾಡದೆ ತನ್ನ ನಟನೆಯ ಮೂಲಕ ಅಂತರ್ಜಾಲ ಲೋಕದಲ್ಲಿ ಅಪಾರ ಅಭಿಮಾನಿಗಳನ್ನ ಗಳಿಸಿದ್ದಾನೆ.
  • ಸಿನಿಮಾ ನಟರಿಗೂ ಇರದಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಮತ್ತು ಹಣ ಸಂಪಾದಿಸಿದ್ದಾನೆ.
  • ಈ ವರ್ಷ ಸುಮಾರು 80 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ
ಮಾತನಾಡದೇ ಕೋಟಿ ಒಡೆಯನಾದ ಖಾಬಿ : ಈತನ ಬ್ಯಾಂಕ್‌ ಬ್ಯಾಲೆನ್ಸ್‌ ಕೇಳಿದ್ರೆ ದಂಗಾಗ್ತೀರಾ..! title=

ಬೆಂಗಳೂರು : ಸೋಷಿಯಲ್‌ ಮೀಡಿಯಾ ಒಂದು ತರ ಮ್ಯಾಜಿಕ್‌ ವರ್ಲ್ಡ್‌ ಇದ್ದಂತೆ. ಇಲ್ಲಿ ಯಾರು ಯಾವಾಗ ಫೇಮಸ್‌ ಆಗ್ತಾರೆ, ಸ್ಟಾರ್‌ ಲೋಕದ ದಿಗ್ಗಜರಾಗ್ತಾರೆ ಅಂತ ಗೊತ್ತೇ ಆಗಲ್ಲ. ಅದೇ ರೀತಿ ಖಾಬಿ ಲೇಮ್‌, ಈತ ಒಂದು ಶಬ್ದವನ್ನು ಮಾತನಾಡದೆ ತನ್ನ ನಟನೆಯ ಮೂಲಕ ಅಂತರ್ಜಾಲ ಲೋಕದಲ್ಲಿ ಅಪಾರ ಅಭಿಮಾನಿಗಳನ್ನ ಗಳಿಸಿದ್ದಾನೆ. ಅಲ್ಲದೆ, ಸಿನಿಮಾ ನಟರಿಗೂ ಇರದಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಮತ್ತು ಹಣ ಸಂಪಾದಿಸಿದ್ದಾನೆ.

ಹೌದು.. ಸೆನೆಗಲ್ ಮೂಲದ ಖಾಬಿ ಲೇಮ್ ಟಿಕ್‌ಟಾಕ್‌ನಲ್ಲಿ ಮೂಲಕ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟರು. ಸರಿ ಸುಮಾರು 150 ಮಿಲಿಯನ್ ಅನುಯಾಯಿಗಳಿದ್ದರು. ಲೇಮ್ ಅತಿ ಹೆಚ್ಚು ಸಂಭಾವನೆ ಪಡೆಯುವ ಸಾಮಾಜಿಕ ಮಾಧ್ಯಮ ತಾರೆಗಳಲ್ಲಿ ಒಬ್ಬರು, ಅಲ್ಲದೆ ಅಂತರರಾಷ್ಟ್ರೀಯ ಖ್ಯಾತಿಗೆ ಪಾತ್ರರಾದವರು. ಅವರು ಈ ವರ್ಷ ಸುಮಾರು 80 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ ಎಂದು ಅವರ ಮ್ಯಾನೇಜರ್ ಅಲೆಸ್ಸಾಂಡ್ರೊ ರಿಗ್ಗಿಯೊ ಪ್ರಮುಖ ವ್ಯಾಪಾರ ಸುದ್ದಿವಾಹಿನಿ ಔಟ್‌ಲೆಟ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Suspicious Drone: ಬಾರ್ಡರ್ ನಲ್ಲಿ ಕಂಡ ಅನುಮಾನಾಸ್ಪದ ಡ್ರೋನ್, ಆತಂಕಕ್ಕೊಳಗಾದ ಗ್ರಾಮಸ್ಥರು

ಟಿಕ್‌ಟಾಕ್ ವೀಡಿಯೊಗಳಿಗೆ ಹೆಸರುವಾಸಿಯಾಗಿದ್ದ ಲೇಮ್‌ ಹೆಚ್ಚು ಮೌನವಾಗಿಯೇ ಅಪಹಾಸ್ಯ ಮಾಡುವ ವಿಡಯೋ ಮಾಡುತ್ತಾನೆ. 22 ವರ್ಷದ ಈತ ಸಮಾಜಿಕ ಮಾಧ್ಯಮದಲ್ಲಿ ಒಂದೇ ಪೋಸ್ಟ್‌ಗಳಿಗಾಗಿ ಅತಿಯಾದ ಮೊತ್ತವನ್ನು ಗಳಿಸುತ್ತಾನೆ. ಇತ್ತೀಚಿಗೆ ಲೇಮ್‌ ಮಿಲನ್ ಫ್ಯಾಶನ್ ವೀಕ್‌ನಲ್ಲಿ ರಾಂಪ್ ಮೇಲೆ ವಾಕ್ ಮಾಡಲು ಹಾಗೂ ಆ ವಿಡಿಯೋವನ್ನು ಪೋಸ್ಟ್ ಮಾಡಲು ಬರೋಬ್ಬರಿ 3.58 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.

ಲೇಮ್ ಅವರು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಿದ ಮತ್ತೊಂದು ವೀಡಿಯೊಗಾಗಿ ಹಾಲಿವುಡ್ ಪ್ರೊಡಕ್ಷನ್ ಹೌಸ್‌ ಒಂದು ಸುಮಾರು 6 ಕೋಟಿ ($ 750,000) ಪಾವತಿಸಿದ್ದಾರೆ ಎಂದು ವರದಿಯಾಗಿದೆ. ಕೋವಿಡ್‌ ಸಂದರ್ಭದಲ್ಲಿ ಮನೆಯಲ್ಲಿ ಖಾಲಿ ಕುಳಿತಿದ್ದ ಲೇಮ್‌ ಸದ್ಯ ಇಂಟರ್ನ್ಯಾಷನಲ್ ಸ್ಟಾರ್. 

ಯಾರೂ ಈ ಖಾಬಿ ಲೇಮ್..?

ಲೇಮ್ ಕುಟುಂಬಸ್ಥರು 2001ರಲ್ಲಿ ಸೆನೆಗಲ್‌ನಿಂದ ಇಟಲಿಗೆ ವಲಸೆ ಬಂದರು. ಮಾರ್ಚ್ 9, 2000 ರಂದು ಜನಿಸಿದ ಖಾಬಿ ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಸ್ಟಾರ್‌ಡಮ್ ಹೊಡೆಯುವ ಮೊದಲು ಅವರು ಟುರಿನ್ ನಗರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಮಾರ್ಚ್ 2020 ರಲ್ಲಿ ಸಾಂಕ್ರಾಮಿಕ ರೋಗದ ಆರಂಭಿಕ ತಿಂಗಳುಗಳಲ್ಲಿ ತಮ್ಮ ಕೆಲಸವನ್ನು ಕಳೆದುಕೊಂಡರು. ನಂತರ ಟಿಕ್‌ಟಾಕ್ ವೀಡಿಯೊಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದ ಖಾಬಿಗೆ ಈಗ ತನ್ನ ಹಳೆ ಕಂಪನಿಯ ಮ್ಯಾನೇಜರ್‌ಗಿಂತಲೂ ಹೆಚ್ಚೆ ಸಂಪಾದನೆ ಮಾಡುತ್ತಿದ್ದಾನೆ.

ಅವರು ಈ ವರ್ಷ ಜೂನ್ 22 ರಂದು 142.8 ಮಿಲಿಯನ್ ಅನುಯಾಯಿಗಳೊಂದಿಗೆ ಚಾರ್ಲಿ ಡಿ'ಅಮೆಲಿಯೊ ಅವರನ್ನು ಮೀರಿಸುವ ಮೂಲಕ ಅತಿ ಹೆಚ್ಚು ಅನುಸರಿಸಿದ TikToker ಆಗಿದ್ದಾರೆ. ಅಲ್ಲದೆ, ಇನ್ಸ್ಟಾಗ್ರಾಮ್‌ನಲ್ಲಿ 78.3 ಮಿಲಿಯನ್ ಮತ್ತು ಫೇಸ್‌ಬುಕ್‌ನಲ್ಲಿ 1.2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅಲ್ಲದೆ, ಸದ್ಯ ಇಟಲಿಯ ಚಿವಾಸ್ಸೊದಲ್ಲಿ $6 ಮಿಲಿಯನ್ ಮೌಲ್ಯದ ಮನೆಯಲ್ಲಿ ಖಾಬಿ ವಾಸಿಸುತ್ತಿದ್ದಾರೆ. ಅಕ್ಟೋಬರ್ 2022 ರಲ್ಲಿ ಝೈರಾ ನುಚ್ಚಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹಣದ ಬಗ್ಗೆ ಆಸಕ್ತಿ ಹೊಂದಿಲ್ಲದ ಖಾಬಿಗೆ ತನ್ನ ಬ್ಯಾಂಕ್‌ ಬ್ಯಾಲೆನ್ಸ್‌ ಎಷ್ಟಿದೆ ಅಂತಾನೂ ಗೊತ್ತಿಲ್ಲವಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News