ನವದೆಹಲಿ : ಉಕ್ರೇನ್‌ನಲ್ಲಿ  (Ukraine)  ವಿನಾಶವನ್ನುಂಟುಮಾಡುತ್ತಿರುವ ರಷ್ಯಾದ ಸೇನೆಯ ವಾಹನಗಳ (Russian Troops) ಮೇಲಿನ 'Z' ಗುರುತಿನ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ (Z Symbol on Russian Military Vehicles). ಎಲ್ಲಾ ಮಿಲಿಟರಿ ವಾಹನಗಳಲ್ಲಿ ಒಂದೇ ರೀತಿಯಲ್ಲಿ  Z ಚಿಹ್ನೆಯನ್ನು ಬರೆಯಲಾಗಿಲ್ಲ. ಕೆಲವು ಟ್ಯಾಂಕ್ ಗಳ ಮೇಲೆ Z ಎಂದು ನೇರವಾಗಿ ಬರೆಯಲಾಗಿದೆ. ಕೆಲವು ಟ್ಯಾಂಕ್ ಗಳಲ್ಲಿ ತ್ರಿಕೋನದಲ್ಲಿ ಬರೆಯಲಾಗಿದೆ. ಈ ಚಿಹ್ನೆಯ ಅರ್ಥ ಏನು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ (Social media) ಬೇರೆ ಬೇರೆ ಮಾತುಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ರಷ್ಯಾದಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. 


COMMERCIAL BREAK
SCROLL TO CONTINUE READING

ವಿಭಿನ್ನ ಅರ್ಥಗಳು : 
ರಷ್ಯಾವನ್ನು ಬೆಂಬಲಿಸುವವರಲ್ಲಿ ಈ Z ಗುರುತು ಬಹಳ ಜನಪ್ರಿಯವಾಗಿದೆ (Z Symbol on Russian Military Vehicles). ಝಡ್ ಮುದ್ರಿತ ಟೀ ಶರ್ಟ್ ಧರಿಸಿ, ವಾಹನಗಳ ಮೇಲೆ ಸ್ಟಿಕ್ಕರ್ ಹಾಕುತ್ತಿದ್ದಾರೆ. 'ದಿ ವಿಲ್ಸನ್ ಸೆಂಟರ್' ಎಂಬ ಸಂಶೋಧನಾ ಗುಂಪಿನೊಂದಿಗೆ ಸಂಯೋಜಿತವಾಗಿರುವ ಕಮಿಲ್ ಗಲೇವ್, ಪ್ರಕಾರ Z ಎಂದರೆ ಝಾ ಪೊಬೇಡಿ  ಅಂದರೆ ಗೆಲುವಿಗಾಗಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.   ಮತ್ತೊಂದೆಡೆ, ಯುದ್ಧಭೂಮಿಯಲ್ಲಿ ಸೈನಿಕರು ತಮ್ಮ ಟ್ಯಾಂಕ್ ಗಳನ್ನು ಗುರುತಿಸಲು ಸುಲಭವಾಗಲಿ ಎಂಬ ಕಾರಣಕ್ಕೆ ಈ ಗುರುತನ್ನು ಹಾಕಲಾಗಿದೆ ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿವೆ. 


Russia-Ukraine War:ಯುದ್ಧದ ನಡುವೆಯೇ 11 ವರ್ಷದ ಬಾಲಕನ 1000 ಕೀ.ಮೀ ಪಯಣ, 'ಹೀರೋ' ಎಂದ ಸರ್ಕಾರ


ಕ್ರೈಮಿಯಾದಲ್ಲೂ ಕಾಣಿಸಿಕೊಂಡ  'ಝಡ್' :
 ಈ ಚಿಹ್ನೆಗಳು ಘಟಕ ಅಥವಾ ವಾಹನಗಳ ಸ್ಥಳವನ್ನು ಸೂಚಿಸುತ್ತವೆ ಎಂದು ಕಳೆದ ತಿಂಗಳು, ರಕ್ಷಣಾ ಥಿಂಕ್ ಟ್ಯಾಂಕ್ RUSI ನ ಮಾಜಿ ನಿರ್ದೇಶಕ ಪ್ರೊಫೆಸರ್ ಮೈಕೆಲ್ ಕ್ಲಾರ್ಕ್ಮಾಧ್ಯಮವೊಂದಕ್ಕೆ ತಿಳಿಸಿದ್ದರು. ಫೆಬ್ರವರಿ 22 ರಂದು ಡೊನೆಟ್ಸ್ಕ್ ಪ್ರದೇಶವನ್ನು ಪ್ರವೇಶಿಸುವ ರಷ್ಯಾದ  (Russia) ವಾಹನಗಳಲ್ಲಿ 'Z' ಚಿಹ್ನೆಯನ್ನು ,ಮೊಟ್ಟ ಮೊದಲು ಗುರುತಿಸಲಾಗಿತ್ತು. ಇನ್ನೊಂದು ಮೂಲಗಳ ಪ್ರಕಾರ,  ರಷ್ಯಾ ಕ್ರೈಮಿಯಾವನ್ನು ಆಕ್ರಮಿಸಿಕೊಂಡಾಗಲೂ, ಅದರ ಮಿಲಿಟರಿ ವಾಹನಗಳಲ್ಲಿ Z ನ ಗುರುತು ಕಾಣಿಸಿತ್ತು. 


'ಟೆಲಿಗ್ರಾಫ್' ನಲ್ಲಿನ ವರದಿಯ ಪ್ರಕಾರ, ಈ ರೀತಿಯ ಗುರುತುಗಳನ್ನು ರೋಸ್ಗ್ವಾರ್ಡಿಯಾ ಟ್ರೂಪ್ಸ್  ಗಾಗಿ, ಬಳಸಲಾಗುತ್ತದೆ. ರೋಸ್ವರ್ಡಿಯಾ ಟ್ರೂಪ್ಸ್ ಎಂದರೆ ರಷ್ಯಾದ ರಾಷ್ಟ್ರೀಯ ಗಾರ್ಡ್. ಇದು ಸೇನೆಯ ಸೈನಿಕರಿಗಿಂತ ಭಿನ್ನವಾಗಿದೆ. ರೋಸ್ವರ್ಡಿಯಾ ಪಡೆಗಳ ಪ್ರತಿಯೊಂದು ಕ್ರಿಯೆಯನ್ನು ನೇರವಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರಿಗೆ ತಿಳಿಸಲಾಗುತ್ತದೆ. 


ಕೈವ್ ನತ್ತ ಧಾವಿಸುತ್ತಿರುವ ಶತ್ರು ಪಡೆ, ಹೊಸ ವೀಡಿಯೊ ಬಿಡುಗಡೆ ಮಾಡಿದ ರಷ್ಯಾದ ರಕ್ಷಣಾ ಸಚಿವಾಲಯ


'ಇದು ಒಂದು ರೀತಿಯ ಕೆಂಪು ಧ್ವಜ'
ರಷ್ಯಾದ ರಕ್ಷಣಾ ನೀತಿಯನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ ರಾಬ್ ಲೀ ಕೂಡ ಈ ಬಗ್ಗೆ ಟ್ವೀಟ್ (Tweet)ಮಾಡಿದ್ದಾರೆ. ಇದು ಒಂದು ರೀತಿಯ ಕೆಂಪು ಧ್ವಜ ಎಂದು ಅವರು ಹೇಳುತ್ತಾರೆ. ಕೈದಿಗಳನ್ನು ಸಾಗಿಸುವ ವಾಹನಗಳ ಮೇಲೆ ಈ ಗುರುತು ಹಾಕಲಾಗುತ್ತದೆ. ಸಾಮಾನ್ಯವಾಗಿ, ಬೆಲ್ಗೊರೊಡ್ ಪ್ರದೇಶದಲ್ಲಿನ  ವಾಹನಗಳಲ್ಲಿ Z ಗುರುತು ಕಂಡುಬರುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.