ನವದೆಹಲಿ: ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಭಾರತದಲ್ಲಿ ಮತ್ತು ವಿಶ್ವಾದ್ಯಂತ ಶುಕ್ರವಾರ ರಾತ್ರಿ ನಿಲುಗಡೆಗೆ ಒಳಗಾಯಿತು.ಹಲವಾರು ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಲಿಲ್ಲ ಎನ್ನಲಾಗಿದೆ. ಕೆಲವರು ಟ್ವಿಟ್ಟರ್ ನಲ್ಲಿ  ವಾಟ್ಸಾಪ್ ವೆಬ್‌ಗೆ ಲಾಗ್ ಇನ್ ಮಾಡಲು ಸಹ ವಿಫಲರಾಗಿದ್ದಾರೆ ಎಂದು ವರದಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-WhatsApp OTP ಹಗರಣ ಎಂದರೇನು? ಅದನ್ನು ಹೇಗೆ ತಪ್ಪಿಸಬೇಕು ಎಂದು ತಿಳಿಯಿರಿ


ಡೌನ್‌ಡೆಟೆಕ್ಟರ್” ಪ್ರಕಾರ ಈ ಸಮಸ್ಯೆಯು ರಾತ್ರಿ 10:40 ರ ಸುಮಾರಿಗೆ ಪ್ರಾರಂಭವಾಯಿತು. ಫೇಸ್‌ಬುಕ್ ಒಡೆತನದ ಎಲ್ಲಾ ಅಪ್ಲಿಕೇಶನ್‌ಗಳಾದ ಮೆಸೆಂಜರ್, ವಾಟ್ಸಾಪ್ (WhatsApp) ಮತ್ತು ಇನ್‌ಸ್ಟಾಗ್ರಾಮ್ ಜಾಗತಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅದು ಹೇಳಿದೆ.


ಈ ವಿಚಾರವಾಗಿ ಟ್ವಿಟ್ಟರ್ನಲ್ಲಿ ಬಳಕೆದಾರರು ರಾತ್ರಿ 11 ರ ಸುಮಾರಿಗೆ ವರದಿ ಮಾಡಿದ್ದಾರೆ. ವಿಶ್ವದ ಅತ್ಯಂತ ಜನಪ್ರಿಯ ತ್ವರಿತ ಸಂದೇಶ ಅಪ್ಲಿಕೇಶನ್‌ಗಳಲ್ಲಿ ಒಂದಾದ ಕೆಲವು ಸಮಯದಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಜನರು ಟ್ವೀಟ್ ಮಾಡಿದ್ದಾರೆ.ಕೆಲವರು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮೆಸೆಂಜರ್ ಬಳಕೆದಾರರು ಸಹ ಅಪ್ಲಿಕೇಶನ್‌ಗಳು ಡೌನ್ ಆಗಿವೆ ಎಂದು ವರದಿ ಮಾಡಿದ್ದಾರೆ.


ಇದನ್ನು ಓದಿ-ಆನ್ಲೈನ್ ಶಾಪಿಂಗ್ ಸೇರಿದಂತೆ ಇತ್ತೀಚೆಗೆ 5 ಉತ್ತಮ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದ WhatsApp


ವಾಟ್ಸಾಪ್ ಮತ್ತು ಮೆಸೆಂಜರ್‌ನಲ್ಲಿ ಯಾವುದೇ ಸಂದೇಶಗಳನ್ನು ತಲುಪಿಸಲಾಗುತ್ತಿಲ್ಲ ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ,30 ನಿಮಿಷಗಳಿಗಿಂತ ಹೆಚ್ಚು ಕಾಲ ಅಪ್ಲಿಕೇಶನ್‌ಗಳು ಜಾಗತಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನಿಲುಗಡೆ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ಡೆಟೆಕ್ಟರ್.ಕಾಮ್ ವರದಿ ಮಾಡಿದೆ.


ರಾತ್ರಿ 11 ರಿಂದ 11:40 ರ ನಡುವೆ, ಇನ್‌ಸ್ಟಾಗ್ರಾಮ್‌ನಲ್ಲಿ 1.2 ದಶಲಕ್ಷಕ್ಕೂ ಹೆಚ್ಚು ಜನರು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ ಎಂದು ಡೌಂಡೆಟೆಕ್ಟರ್ ತೋರಿಸಿದರೆ, 23,000 ಕ್ಕೂ ಹೆಚ್ಚು ಬಳಕೆದಾರರು ವೆಬ್‌ಸೈಟ್‌ನಲ್ಲಿ ವಾಟ್ಸಾಪ್‌ನ ಸಮಸ್ಯೆಗಳ ಬಗ್ಗೆ ಪೋಸ್ಟ್ ಮಾಡಿದ್ದಾರೆ.


ಇದನ್ನು ಓದಿ- ವಾಟ್ಸಾಪ್‌ನಲ್ಲಿಯೇ ತೆರೆಯಿರಿ Fixed Deposit, ಇಲ್ಲಿದೆ ಅದನ್ನು ಬಳಸುವ ಸುಲಭ ವಿಧಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ