WHO Pandemic Alert To China: ಮತ್ತೊಂದು ಮಹಾಮಾರಿಯ ಕುರಿತು ಚೀನಾಗೆ ಎಚ್ಚರಿಕೆ ನೀಡಿದ WHO, ಅರ್ಧಕ್ಕಿಂತ ಹೆಚ್ಚು ಸೋಂಕಿತರ ಸಾವು!
WHO Pandemic Alert To China - ಒಂದೆಡೆ ಇಡೀ ವಿಶ್ವಕ್ಕೆ ಕೊರೊನಾ ಮಾಹಾಮಾರಿಯಿಂದ ಸ್ವಾತಂತ್ರ್ಯ ಸಿಕ್ಕಿಲ್ಲ ಅನ್ನುವಷ್ಟರಲ್ಲೇ ಚೀನಾದಲ್ಲಿ ಮತ್ತೊಂದು ಸಂಕ್ರಾಮಿಕ ರೋಗದ ಎಚ್ಚರಿಕೆಯ ಗಂಟೆ ಮೊಳಗಿದೆ. ಅಷ್ಟೇ ಅಲ್ಲ ಅದರ ಮೇಲೆ ಗಂಭೀರವಾಗಿ ಕೆಲಸ ಮಾಡುವಂತೆ WHO ಚೀನಾಗೆ ಕೇಳಿದೆ.
ನವದೆಹಲಿ: WHO Pandemic Alert To China - ಚೀನಾದ (China) ವುಹಾನ್‌ನಿಂದ ಹರಡಿದ ಕೊರೊನಾವೈರಸ್ (Coronavirus) ಸೋಂಕಿನೊಂದಿಗೆ ಇಡೀ ಜಗತ್ತು ಹೋರಾಡುತ್ತಿದೆ. ಏತನ್ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ (WHO) ಕೋಳಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಾಂಕ್ರಾಮಿಕ ಹಕ್ಕಿ ಜ್ವರದ ಬಗ್ಗೆ ಎಚ್ಚರಿಕೆ ನೀಡಿದೆ. ಚೀನಾದಲ್ಲಿ, ಮಾರಣಾಂತಿಕ ಹಕ್ಕಿ ಜ್ವರ ರೂಪಾಂತರ H5N6ನ ಮರಣ ಪ್ರಮಾಣವು ಶೇ.50ಕ್ಕೆ ತಲುಪಿದೆ. ಚೀನಾದಲ್ಲಿ ಹಕ್ಕಿ ಜ್ವರ (Bird Flu) ಪ್ರಕರಣಗಳ ಹೆಚ್ಚಳ ಕಳವಳಕಾರಿ ಸಂಗತಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಹೇಳಿದೆ. H5N6 ಹಕ್ಕಿ ಜ್ವರ ರೂಪಾಂತರವನ್ನು (H5N6 Bird Flu Variant) ಟ್ರ್ಯಾಕ್ ಮಾಡುವ ಅವಶ್ಯಕತೆ ಇದೆ ಎಂದು WHO ಹೇಳಿದೆ.
ಆತಂಕ ಹೆಚ್ಚಿಸಿದ H5N6 ಹಕ್ಕಿ ಜ್ವರ ರೂಪಾಂತರಿ
ಈ ಕುರಿತು ಮಾತನಾಡಿರುವ WHO ವಕ್ತಾರರು, 'ಚೀನಾದಲ್ಲಿ ಮತ್ತು ಹಕ್ಕಿ ಜ್ವರ ಪೀಡಿತ ಪ್ರದೇಶಗಳಲ್ಲಿ ಅದರ ಅಪಾಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಕಣ್ಗಾವಲಿನ ಅಗತ್ಯವಿದೆ' ಎಂದು ಹೇಳಿದ್ದಾರೆ. ಚೀನಾದ ರೋಗ ನಿಯಂತ್ರಣ ಕೇಂದ್ರವೂ ಎಚ್ 5 ಎನ್ 6 ರೂಪಾಂತರದಿಂದ ಉಂಟಾಗುವ ಗಂಭೀರ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಡಬ್ಲ್ಯುಎಚ್‌ಒ ಹಕ್ಕಿ ಜ್ವರವು ವೇಗವಾಗಿ ಹರಡುತ್ತಿರುವ ರೀತಿಯನ್ನು ನಿರ್ಲಕ್ಷಿಸಲಾಗದು ಎಂದು ಅದು ಹೇಳಿದೆ. H5N6 ರೂಪಾಂತರವು ಸಹ ಕಳವಳವನ್ನು ಉಂಟುಮಾಡಿದೆ ಏಕೆಂದರೆ ಇದರಿಂದ ಸೋಂಕಿತ ಜನರ ಮೃತ್ಯು ದರ ಶೇ.50ರಷ್ಟಿದೆ.
ಇದನ್ನೂ ಓದಿ-Father Of Pak Nuclear Program: ಪಾಕ್ ಪರಮಾಣು ಕಾರ್ಯಕ್ರಮದ ಪಿತಾಮಹ Abdul Kadir Khan ನಿಧನ
ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿದೆಯೇ ಸೋಂಕು?
ಆದರೆ ಇದರಲ್ಲಿ ನೆಮ್ಮದಿಯ ಸಂಗತಿ ಎಂದರೆ, ಈ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುವ ಬಗ್ಗೆ ಯಾವುದೇ ಖಚಿತವಾದ ಪುರಾವೆಗಳು ಇದುವರೆಗೆ ಕಂಡುಬಂದಿಲ್ಲ ಎಂದು WHO ಹೇಳಿದೆ. ಇದಲ್ಲದೆ ಇದುವರೆಗೆ ಅದರ ಹಿಡಿತಕ್ಕೆ ಬಂದ ಎಲ್ಲಾ ಜನರು ಗಂಭೀರ ರೋಗಗಳಿಂದ ಬಳಲುತ್ತಿದ್ದಾರೆ ಎಂದು ಸಹ ಹೇಳಲಾಗಿದೆ. ಚೀನಾದಲ್ಲಿ, ಯಾವುದೇ ರೋಗವಿಲ್ಲದ 61 ವರ್ಷದ ಮಹಿಳೆ ಕೂಡ ವೈರಸ್‌ನ ಹಿಡಿತಕ್ಕೆ ಒಳಗಾಗಿದ್ದಾರೆ. ಇದರ ಲಕ್ಷಣಗಳು ಸಾಮಾನ್ಯವಾಗಿ ಶೀತ, ನ್ಯುಮೋನಿಯಾದಂತೆಯೇ ಇರುತ್ತವೆ.
ಇದನ್ನೂ ಓದಿ-Viral News: 4 ಕೋಟಿ ರೂ. ಮೌಲ್ಯದ 70 ಕೆಜಿ ಬಾಳೆಹಣ್ಣು!, ಇಷ್ಟೊಂದು ದುಬಾರಿ ಏಕೆ ಗೊತ್ತಾ..?
ಈ ಮುನ್ನೆಚ್ಚರಿಕೆಯನ್ನು ವಹಿಸಿ
ಜನರು ಆದಷ್ಟು ಅನಾರೋಗ್ಯ ಪೀಡಿತ ಅಥವಾ ಸತ್ತ ಕೋಳಿ ಅಥವಾ ಪಕ್ಷಿಗಳ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಅಲ್ಲದೆ, ಜೀವಂತ ಪಕ್ಷಿಗಳೊಂದಿಗೆ ನೇರ ಸಂಪರ್ಕವನ್ನು ತಪ್ಪಿಸಲು ಪ್ರಯತ್ನಿಸಬೇಕು. ಪಕ್ಷಿಗಳೊಂದಿಗೆ ಕೆಲಸ ಮಾಡುವ ಜನರು ಶುಚಿತ್ವದ ಬಗ್ಗೆ ವಿಶೇಷ ಗಮನ ಹರಿಸಬೇಕು, ಮುಖವಾಡಗಳನ್ನು ಧರಿಸಬೇಕು ಮತ್ತು ಜ್ವರ ಮತ್ತು ಉಸಿರಾಟದ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷೆಗೆ ಒಳಗಾಗಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ-ಅಫ್ಘಾನಿಸ್ತಾನದ ಕುಂಡುಜ್ ಪ್ರಾಂತ್ಯದಲ್ಲಿ ಸ್ಫೋಟ, 12 ಸಾವು; ಹಲವರಿಗೆ ಗಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.