Father Of Pak Nuclear Program: ಪಾಕ್ ಪರಮಾಣು ಕಾರ್ಯಕ್ರಮದ ಪಿತಾಮಹ Abdul Kadir Khan ನಿಧನ

Death Of Father Of Pak Nuclear Program - ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಪಿತಾಮಹ ಎಂದು ಪರಿಗಣಿಸಲ್ಪಟ್ಟ AQ Khan ನಿಧನರಾಗಿದ್ದಾರೆ. ಅವರ ಸಾವು ತುಂಬಾ ನೋವು ತಂದಿದೆ ಮತ್ತು ಇದು ತುಂಬಲಾರದ ನಷ್ಟ ಎಂದು ರಕ್ಷಣಾ ಸಚಿವ ಪರ್ವೇಜ್ ಖಟಕ್ ಹೇಳಿದ್ದಾರೆ.

Written by - Nitin Tabib | Last Updated : Oct 10, 2021, 01:21 PM IST
  • ಪಾಕ್ ಪರಮಾಣು ಕಾರ್ಯಕ್ರಮದ ಜನಕ ಇನ್ನಿಲ್ಲ.
  • ಅಬ್ದುಲ್ ಖಾದಿರ್ ಖಾನ್ ಅವರಿಗೆ 85 ವರ್ಷ ವಯಸ್ಸಾಗಿತ್ತು.
  • ಶ್ವಾಸಕೋಶದ ಸೋಂಕಿನಿಂದ ಅವರು ಬಳಲುತ್ತಿದ್ದರು ಎಂದು ವರದಿಯಾಗಿದೆ.
Father Of Pak Nuclear Program: ಪಾಕ್ ಪರಮಾಣು ಕಾರ್ಯಕ್ರಮದ ಪಿತಾಮಹ Abdul Kadir Khan ನಿಧನ title=
Death Of Father Of Pak Nuclear Program (File Photo - Abdul Kadir Khan)

AQ Khan Death: ಪಾಕಿಸ್ತಾನದ (Pakistan) ಪರಮಾಣು ಕಾರ್ಯಕ್ರಮದ (Pak Nuclear Program) ಪಿತಾಮಹ ಎಂದು ಪರಿಗಣಿಸಲ್ಪಟ್ಟ AQ Khan ಭಾನುವಾರ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಖಾನ್ ಇಸ್ಲಾಮಾಬಾದ್‌ನ ಖಾನ್ ರಿಸರ್ಚ್ ಲ್ಯಾಬೋರೇಟರೀಸ್ (KRL) ಆಸ್ಪತ್ರೆಯಲ್ಲಿ ಬೆಳಗ್ಗೆ 7 ಗಂಟೆಗೆ (ಸ್ಥಳೀಯ ಸಮಯಾನುಸಾರ) ಕೊನೆಯುಸಿರೆಳೆದಿದ್ದಾರೆ.

ಉಸಿರಾಟದ ತೊಂದರೆಯ ಬಗ್ಗೆ ಅವರು ದೂರು ನೀಡಿದ ನಂತರ ಅವರನ್ನು ಮುಂಜಾನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಖಾನ್ ಸಾವು ಅಪಾರ ನೋವು ತಂದಿದ್ದು ಅದೊಂದು ತುಂಬಲಾರದ ನಷ್ಟ ಎಂದು ರಕ್ಷಣಾ ಸಚಿವ ಪರ್ವೇಜ್ ಖಟಕ್ (Parvez Khatak) ಹೇಳಿದ್ದಾರೆ. ರಾಷ್ಟ್ರಕ್ಕೆ ಅವರು ನೀಡಿದ ಸೇವೆಯನ್ನು ಪಾಕಿಸ್ತಾನ ಸದಾ ಗೌರವಿಸಲಿದೆ ಎಂದು ಅವರು ಹೇಳಿದ್ದಾರೆ.  ನಮ್ಮ ರಕ್ಷಣಾ ಸಾಮರ್ಥ್ಯಗಳನ್ನು ಶ್ರೀಮಂತಗೊಳಿಸುವ ಅವರ ಕೊಡುಗೆಗಾಗಿ ರಾಷ್ಟ್ರ ಎಂದಿಗೂ ಕೂಡ ಚಿರಋಣಿಯಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಪರಮಾಣು ವಿಜ್ಞಾನಿ ಅಬ್ದುಲ್ ಖಾದಿರ್ (Pakistan Atomic Scientist Abdul Kadir Khan) ಖಾನ್ ಅವರನ್ನು ಪಾಕಿಸ್ತಾನದಲ್ಲಿ ರಾಷ್ಟ್ರೀಯ ನಾಯಕ ಎಂದು ಪರಿಗಣಿಸಲಾಗುತ್ತದೆ ಪಾಕಿಸ್ತಾನವನ್ನು ಪರಮಾಣು ಸಾಮರ್ಥ್ಯ ಹೊಂದಿರುವ ಮೊದಲ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಿದ್ದಕ್ಕಾಗಿ ಅವರನ್ನು ದೇಶದಲ್ಲಿ ಪ್ರಶಂಸಿಸಲಾಗುತ್ತದೆ. ಒಂದೆಡೆ, ಪಾಕಿಸ್ತಾನದಲ್ಲಿ ಅವರನ್ನು ಹೀರೋ ಎಂದು ಪರಿಗಣಿಸಲಾಗುತ್ತಿದ್ದರೆ, ಇನ್ನೊಂದೆಡೆ ಪಾಶ್ಚಿಮಾತ್ಯ ದೇಶಗಳು ಅವರನ್ನು ತಂತ್ರಜ್ಞಾನವನ್ನು ಮಾರಾಟ ಮಾಡಿದ್ದಕ್ಕಾಗಿ ಟೀಕಿಸುತ್ತಿದ್ದವು.

ಇದನ್ನೂ ಓದಿ-ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ: 1 ಪ್ಯೂನ್ ಹುದ್ದೆಗೆ 15 ಲಕ್ಷಕ್ಕೂ ಹೆಚ್ಚು ಅರ್ಜಿ..!

ಅಬ್ದುಲ್ ಖಾದಿರ್ ಖಾನ್ (Abdul Kadir Khan) ಅವರು ಪರಮಾಣು ತಂತ್ರಜ್ಞಾನವನ್ನು ಇತರ ದೇಶಗಳಿಗೂ ರಹಸ್ಯವಾಗಿ ಮಾರಾಟ ಮಾಡಿದ್ದಾರೆ ಎಂದು ಪಾಶ್ಚಿಮಾತ್ಯ ದೇಶಗಳು ಅವರನ್ನು ಟೀಕಿಸುತ್ತಿದ್ದವು.  ಅಬ್ದುಲ್ ಖಾದಿರ್ ಖಾನ್ 1936 ರಲ್ಲಿ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಜನಿಸಿದ್ದಾರೆ. ಆದರೆ ದೇಶ ವಿಭಜನೆಯ ನಂತರ, ಅವರು ತಮ್ಮ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ಹೋಗಲು ನಿರ್ಧರಿಸಿದ್ದರು. ಕಳೆದ ತಿಂಗಳು, ಅಬ್ದುಲ್ ಖಾದಿರ್ ಖಾನ್ ಅವರು ದೀರ್ಘಾವಧಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇಮ್ರಾನ್ ಖಾನ್ (Imran Khan) ಅಥವಾ ಅವರ ಸಂಪುಟದ ಯಾವುದೇ ಸದಸ್ಯರು ಅವರನ್ನು ಭೇಟಿಯಾಗಿರಲಿಲ್ಲ. ಅವರು ದೀರ್ಘಕಾಲದವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.

ಇದನ್ನೂ ಓದಿ-ಅಮೇರಿಕಾವು ತಾಲಿಬಾನ್ ನ್ನು ಪರಿಗಣಿಸದಿದ್ದರೆ ಪರಿಸ್ಥಿತಿ ಹದಗೆಡುತ್ತದೆ-ಇಮ್ರಾನ್ ಖಾನ್

ಪಾಕ್ ಮಾದ್ಯಮಗಳು ಮಾಡಿರುವ ವರದಿ ಪ್ರಕಾರ ಆಗಸ್ಟ್ 26ರಂದು ಕೊರೊನಾ ಸೋಂಕಿಗೆ ಗುರಿಯಾದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 2004 ರಲ್ಲಿ ಪರಮಾಣು ತಂತ್ರಜ್ಞಾನ ಮಾರಾಟ ಪ್ರಕರಣದಲ್ಲಿ ಅಬ್ದುಲ್ ಕಾದಿರ ಖಾನ್ ಅವರ ಮೇಲೆ ಭಾರಿ ಆರೋಪಗಳು ಕೇಳಿಬಂದಿದ್ದವು. ಈ ವೇಳೆ ಅವರು ತಮ್ಮ ತಪ್ಪನ್ನು ಕೂಡ ಒಪ್ಪಿಕೊಂಡಿದ್ದರು.

ಇದನ್ನೂ ಓದಿ-Corona Vaccine: ಈ ದೇಶದಲ್ಲಿ ಲಸಿಕೆ ಪಡೆಯದವರಿಗೆ ರೈಲು ಪ್ರಯಾಣ ನಿಷೇಧ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News