ವಾಷಿಂಗ್ಟನ್: ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಡೆಮೋಕ್ರಾಟ್ ಅಭ್ಯರ್ಥಿ ಜೋ ಬಿಡೆನ್ (Joe Biden) ನಡುವೆ ಸ್ಪರ್ಧೆ ಇದೆ. ಅಮೆರಿಕದ ಸಾರ್ವಜನಿಕರು ಡೊನಾಲ್ಡ್ ಟ್ರಂಪ್ ಅಥವಾ ಅವರ ಪ್ರತಿಸ್ಪರ್ಧಿ ಜೋ ಬಿಡೆನ್ ಅವರಲ್ಲಿ ಯಾರ ಕೈ ಹಿಡಿಯಲಿದ್ದಾರೆ ಎಂಬುದು ಇಂದು (ನವೆಂಬರ್ 3) ನಿರ್ಧಾರವಾಗಲಿದೆ. ರಾಷ್ಟ್ರಪತಿ ಚುನಾವಣೆಗೆ ಇಂದು ಭಾರತೀಯ ಕಾಲಮಾನದ ಪ್ರಕಾರ ಸಂಜೆ 4: 30 ರಿಂದ ಮತದಾನ ಪ್ರಾರಂಭವಾಗುತ್ತದೆ.


COMMERCIAL BREAK
SCROLL TO CONTINUE READING

ಸೋಲು-ಗೆಲುವಿನ ದಾಖಲೆ:-
ಈ ಚುನಾವಣೆಗಳಲ್ಲಿ ಟ್ರಂಪ್ ಮತ್ತು ಬಿಡೆನ್ ಅವರ ಸೋಲು ಮತ್ತು ಗೆಲುವು ದಾಖಲೆಯನ್ನು ಸೃಷ್ಟಿಸುತ್ತದೆ. ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಸೋತರೆ, 1988ರಲ್ಲಿ ಜಾರ್ಜ್ ಬುಷ್ ಸೀನಿಯರ್ ನಂತರ ಎರಡನೇ ಅವಧಿಗೆ ಬಾರದ ಮೊದಲ ಅಧ್ಯಕ್ಷರಾಗುತ್ತಾರೆ. ಅದೇ ಸಮಯದಲ್ಲಿ ಬಿಡೆನ್ ಗೆದ್ದರೆ, ಅವರು ಯುಎಸ್ ಚುನಾವಣೆಯಲ್ಲಿ ಗೆದ್ದ ಅತ್ಯಂತ ಹಿರಿಯ ಅಧ್ಯಕ್ಷ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ. ಟ್ರಂಪ್‌ಗೆ 74 ವರ್ಷ ಮತ್ತು ಬಿಡೆನ್‌ಗೆ 78 ವರ್ಷ ಎಂಬುದು ಗಮನಾರ್ಹ.


ಚುನಾವಣೆಯ ಕ್ಷಣ ಕ್ಷಣದ ಮಾಹಿತಿ...
ಜೀ ನ್ಯೂಸ್‌ನ ಅಂಗಸಂಸ್ಥೆ ಚಾನೆಲ್ WION ಸೇರಿದಂತೆ ಎಲ್ಲಾ ಪ್ರಮುಖ ಅಂತರರಾಷ್ಟ್ರೀಯ ಟಿವಿ ಚಾನೆಲ್‌ಗಳಲ್ಲಿ ಯುಎಸ್ ಅಧ್ಯಕ್ಷೀಯ ಚುನಾವಣೆ ಪ್ರಸಾರವಾಗಲಿದೆ. ಯುಎಸ್ ಚುನಾವಣೆ (US Election) ಯನ್ನು ಇಡೀ ಜಗತ್ತು ನೋಡುತ್ತಿದೆ. ವಿಶೇಷವಾಗಿ ಚೀನಾ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ, ಏಕೆಂದರೆ ಡೊನಾಲ್ಡ್ ಟ್ರಂಪ್ ಕರೋನಾವೈರಸ್‌ನಿಂದಾಗಿ ಚೀನಾದ ವಿರುದ್ಧ ತುಂಬಾ ಕಟ್ಟುನಿಟ್ಟಾಗಿ ವರ್ತಿಸಿದ್ದಾರೆ. ವಿಗಾರ್ ಮುಸ್ಲಿಮರ ವಿಷಯದ ಬಗ್ಗೆ ಟ್ರಂಪ್ ಆಡಳಿತವು ಬೀಜಿಂಗ್ ಅನ್ನು ಸುತ್ತುವರೆದಿದೆ. ಅಂತಹ ಪರಿಸ್ಥಿತಿಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷರಾಗದಿದ್ದರೆ ಸಾಕು ಎಂಬಂತೆ ಚೀನಾ ಬಯಸಿದೆ.


ನಾನು ಗೆದ್ದರೆ ಚೀನಾ ಉಳಿಯುವುದಿಲ್ಲ: ಸಾರ್ವಜನಿಕರಿಗೆ ಡೊನಾಲ್ಡ್ ಟ್ರಂಪ್ ಭರವಸೆ


ಸಮೀಕ್ಷೆಗಳಲ್ಲಿ ಟ್ರಂಪ್ ಗಿಂತ ಮುಂದಿರುವ ಬಿಡೆನ್ :
ಅನೇಕ ಸಮೀಕ್ಷೆಗಳಲ್ಲಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಬಿಡೆನ್ ಅವರ ಬಗ್ಗೆ ಹೆಚ್ಚಿನ ಒಲವು ಕಂಡು ಬಂದಿದೆ. ಅರ್ಲಿ ಮತದಾನ ಮತ್ತು ಅಂಚೆ ಮತದಾನದ ಮೂಲಕ ಮೂವತ್ತೊಂದು ಮಿಲಿಯನ್ ಜನರು ಈವರೆಗೆ ಮತ ಚಲಾಯಿಸಿದ್ದಾರೆ. ಈ ಸಂಖ್ಯೆ 2016ರಲ್ಲಿ ದಾಖಲಾದ ಮತಗಳಲ್ಲಿ ಸುಮಾರು 68% ಆಗಿದೆ. ಗಮನಿಸಬೇಕಾದ ವಿಷಯವೆಂದರೆ ಅಮೆರಿಕದಲ್ಲಿ ಗೆಲುವು ಕೇವಲ ಜನಪ್ರಿಯ ಮತಗಳಿಂದಲ್ಲ. ಅಧ್ಯಕ್ಷರಾಗಲು, ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರು 538 ಎಲೆಕ್ತ್ರಾಲ್ ಕಾಲೇಜುಗಳಲ್ಲಿ 270ರಲ್ಲಿ ಗೆಲ್ಲಬೇಕಾಗುತ್ತದೆ. ಸರಳವಾಗಿ ಹೇಳುವುದಾದರೆ 270 ಮತದಾರರ ಬೆಂಬಲ ಪಡೆಯುವ ಅಭ್ಯರ್ಥಿಯು ರಾಷ್ಟ್ರಪತಿಯಾಗುತ್ತಾರೆ.


Trump in Trouble: ಅಮೆರಿಕ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಾಜಿ ಮಾಡೆಲ್


ಚುನಾವಣೆಯ ಪ್ರಮುಖ ವಿಷಯಗಳು:
ಕರೋನಾವೈರಸ್ ಮತ್ತು ನಿರುದ್ಯೋಗವು ಈ ಬಾರಿ ಅಧ್ಯಕ್ಷೀಯ ಚುನಾವಣೆಯ ಪ್ರಮುಖ ವಿಷಯಗಳಾಗಿವೆ. ಕರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ತಮ್ಮ ಸರ್ಕಾರ ಬಹುಮಟ್ಟಿಗೆ ಯಶಸ್ವಿಯಾಗಿದೆ ಎಂದು ಸಾಬೀತುಪಡಿಸಲು ಟ್ರಂಪ್ ಪ್ರಯತ್ನಿಸಿದರೆ, ಬಿಡೆನ್ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗಕ್ಕೆ ಟ್ರಂಪ್ ನೇರವಾಗಿ ಚೀನಾವನ್ನು ದೂಷಿಸಿದ್ದಾರೆ ಮತ್ತು ಅದರ ವಿರುದ್ಧ ಬಲವಾದ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಈ ವಿಷಯದಲ್ಲಿ ಅವರು ತುಂಬಾ ಗಂಭೀರವಾಗಿರುವುದನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಇದಲ್ಲದೆ  ವೀಸಾ ಸಂಬಂಧಿತ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಉದ್ಯೋಗಗಳಲ್ಲಿ ಸ್ಥಳೀಯ ಜನರಿಗೆ ಆದ್ಯತೆ ನೀಡುವತ್ತ ಅವರು ಕ್ರಮ ಕೈಗೊಂಡಿದ್ದಾರೆ.