Trump in Trouble: ಅಮೆರಿಕ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಾಜಿ ಮಾಡೆಲ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೊಂದರೆಗಳು ಮತ್ತೊಮ್ಮೆ ಹೆಚ್ಚಾಗಿದೆ. ಈಗ ಮಾಜಿ ಮಾಡೆಲ್ ಒಬ್ಬರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

Last Updated : Sep 18, 2020, 10:25 AM IST
  • ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಮಾಜಿ ಮಾಡೆಲ್ ಆಮಿ ಡೋರಿಸ್ ಆರೋಪ
  • ಯುಎಸ್ ಓಪನ್ ಸಮಯದಲ್ಲಿ ವಿಐಪಿ ಬಾಕ್ಸ್ ನಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿರುವ ಮಾಡೆಲ್
  • ಆರೋಪಗಳು ಆಧಾರರಹಿತವಾಗಿವೆ ಎಂದು ಟ್ರಂಪ್ ಸ್ಪಷ್ಟನೆ
Trump in Trouble: ಅಮೆರಿಕ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಾಜಿ ಮಾಡೆಲ್ title=

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೊಂದರೆಗಳು ಮತ್ತೊಮ್ಮೆ ಹೆಚ್ಚಾಗಿದೆ. ಈಗ ಮಾಜಿ ಮಾಡೆಲ್ ಒಬ್ಬರು ಟ್ರಂಪ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. 23 ವರ್ಷಗಳ ಹಿಂದೆ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಡೊನಾಲ್ಡ್ ಟ್ರಂಪ್ (Donald Trump) ತನ್ನನ್ನು ಬಲವಂತಪಡಿಸಿದ್ದಾನೆ ಎಂದು ಆಮಿ ಡೋರಿಸ್ ಹೇಳಿದ್ದಾರೆ.

ಡೋರಿಸ್ ಪ್ರಕಾರ ಸೆಪ್ಟೆಂಬರ್ 5, 1997 ರಂದು ನ್ಯೂಯಾರ್ಕ್ನಲ್ಲಿ ನಡೆದ ಯುಎಸ್ (US) ಓಪನ್ ಸಂದರ್ಭದಲ್ಲಿ ವಿಐಪಿ ಬಾಕ್ಸ್ನಲ್ಲಿ ಟ್ರಂಪ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಸಂದರ್ಭದಲ್ಲಿ ತನ್ನನ್ನು ಬಿಡುವಂತೆ ಎಷ್ಟು ಮನವಿ ಮಾಡಿದರು ಟ್ರಂಪ್ ಬಲವಂತವಾಗಿ ಆಕೆಯ ಮೇಲೆ ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿರುವ ಡೋರಿಸ್ ಆ ಬಳಿಕ ತಾನು ಅನಾರೋಗ್ಯಕ್ಕೀಡಾಗಿದ್ದಾಗಿಯೂ ಮತ್ತು ತುಂಬಾ ಅನುಮಾನವನ್ನು ಅನುಭವಿಸಿರುವುದಾಗಿಯೂ ಹೇಳಿಕೊಂಡಿದ್ದಾರೆ.

US Election: ಕಾಶ್ಮೀರ, ಚೀನಾ ವಿಷಯದಲ್ಲಿ ಭಾರತ ಬೆಂಬಲಿಸುವುದರಿಂದ ಟ್ರಂಪ್‌ಗೆ ಸಿಗಲಿದೆಯೇ ಲಾಭ

ಆದರೆ ಡೋರಿಸ್ ಅವರ ಈ ಆರೋಪಗಳನ್ನು ಟ್ರಂಪ್ ಸಾರಾಸಗಟಾಗಿ ನಿರಾಕರಿಸಿದ್ದಾರೆ. ನವೆಂಬರ್ 3 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಈ ಆರೋಪಗಳನ್ನು ಮಾಡಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

24 ವರ್ಷದ ಆಮಿ ಡೋರಿಸ್  :
ಸಂದರ್ಶನವೊಂದರಲ್ಲಿ ಈ ಘಟನೆ ನಡೆದಾಗ ಆಕೆಗೆ 24 ವರ್ಷ ವಯಸ್ಸಾಗಿತ್ತು ಎಂದು ಮಾಡೆಲ್ ಆಮಿ ಡೋರಿಸ್ ಹೇಳಿದ್ದಾರೆ. ಆ ಸಂದರ್ಭದಲ್ಲಿ ತಾನೂ ತುಂಬಾ ಹೆದರಿದ್ದಾಗಿ ತಿಳಿಸಿರುವ ಆಗೇ ಜನರಿಗೆ ಸತ್ಯ ಹೇಳಲು ಬಯಸಿದ್ದೆ ಆದರೆ ಅದು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆಮಿ ಡೋರಿಸ್ ಅವರ ಆರೋಪಗಳನ್ನು ಟ್ರಂಪ್ ಪರ ವಕೀಲರು ನಿರಾಕರಿಸಿದ್ದಾರೆ. ಅಧ್ಯಕ್ಷರು ಎಂದಿಗೂ ಕಿರುಕುಳ ನೀಡಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.  ಈ ಆರೋಪವು ಅಧ್ಯಕ್ಷೀಯ ಚುನಾವಣೆಗೆ ಮುನ್ನ ಡೊನಾಲ್ಡ್ ಟ್ರಂಪ್ ಅವರ ಚಿತ್ರಣವನ್ನು ಹಾಳು ಮಾಡುವ ಪಿತೂರಿ ಮಾತ್ರ ಎಂದವರು ಬಣ್ಣಿಸಿದ್ದಾರೆ.

ವೀಸಾ ನಿರ್ಬಂಧಗಳಲ್ಲಿ ವಿನಾಯಿತಿ ಘೋಷಿಸಿದ ಯುಎಸ್, H-1B ವೀಸಾ ಇರುವವರಿಗೆ ಪ್ರಯೋಜನ

ಅನೇಕ ರಹಸ್ಯಗಳನ್ನು ತೆರೆದಿಟ್ಟ ಟ್ರಂಪ್ ಮಾಜಿ ವಕೀಲರು:
ಇದು ಹೊಸ ವಿಷಯವಲ್ಲ. ಟ್ರಂಪ್ ಮೇಲೆ ಲೈಂಗಿಕ ಶೋಷಣೆಯ ಆರೋಪವಿದೆ ಮತ್ತು ಚುನಾವಣಾ  ಸಂದರ್ಭದಲ್ಲಿ ಪ್ರತಿದಿನವೂ ಅದನ್ನು ಬಹಿರಂಗಪಡಿಸಲಾಗುತ್ತದೆ. ಟ್ರಂಪ್ ಅವರ ಮಾಜಿ ವಕೀಲ ಮೈಕೆಲ್ ಕೋಹೆನ್ ಕೂಡ ತಮ್ಮ ಪುಸ್ತಕದಲ್ಲಿ ಅವರ ವರ್ಣರಂಜಿತ ಮನಸ್ಥಿತಿಯ ಬಗ್ಗೆ ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಟ್ರಂಪ್ ತನ್ನ 15 ವರ್ಷದ ಮಗಳ ಮೇಲೆ ಕೆಟ್ಟ ಕಣ್ಣಿಟ್ಟಿರುತ್ತಾನೆ ಎಂದು ಮೈಕೆಲ್ ಬರೆದಿದ್ದಾರೆ. ಇದಲ್ಲದೆ ಅವರು ರಾಷ್ಟ್ರಪತಿಗಳ ಜೀವನದ ಹಲವು ಕರಾಳ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. 'ನ್ಯೂಜೆರ್ಸಿ ಗಾಲ್ಫ್ ಕ್ಲಬ್'ನಲ್ಲಿ ಟ್ರಂಪ್ ತಮ್ಮ ಮಗಳು ಸಮಂತಾ ಬಗ್ಗೆ ಅಪವಿತ್ರ ಮತ್ತು ಅಶ್ಲೀಲ ಹೇಳಿಕೆಗಳನ್ನು ನೀಡಿದ್ದ 2012ರ ಘಟನೆಯನ್ನು ಕೋಹೆನ್ ವಿವರಿಸಿದ್ದಾರೆ. ಆಕೆ ತಮ್ಮ ಮಗಳೇ ಎಂದು ಟ್ರಂಪ್‌ಗೆ ಹೇಳಿದಾಗಲೂ ಅವರು ತಮ್ಮ ಮಾತನ್ನು ಮುಂದುವರೆಸಿದ್ದರು. 'ಇವಳು ಯಾವಾಗ ಇಷ್ಟು ಹಾಟ್ ಆದಳು' ಎಂದೂ ಕೂಡ ಟ್ರಂಪ್ ಹೇಳಿದ್ದನ್ನು ಅವರು ಉಲ್ಲೇಖಿಸಿದ್ದಾರೆ.

ಚುನಾವಣೆಯ ಮೇಲೆ ಪರಿಣಾಮ:
ನವೆಂಬರ್ 3 ರಂದು ಯುಎಸ್ನಲ್ಲಿ ಅಧ್ಯಕ್ಷೀಯ ಚುನಾವಣೆಗಳು (US President Election) ನಡೆಯಲಿದ್ದು, ಅಂತಹ ಪರಿಸ್ಥಿತಿಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧದ ಆರೋಪಗಳು ನಿರಂತರವಾಗಿ ಕೇಳಿಬರುತ್ತಿವೆ. ಇವು ಅಮೆರಿಕ ಅಧ್ಯಕ್ಷ ಚುನಾವಣೆಯ ಮೇಲೆ ನೇರ ಪರಿಣಾಮ ಬೀರಬಹುದು ಎಂದು ತಜ್ಞರು ತಿಳಿಸಿದ್ದಾರೆ. ಅನೇಕ ಸಮೀಕ್ಷೆಗಳಲ್ಲಿ ಟ್ರಂಪ್ ಈಗಾಗಲೇ ತಮ್ಮ ಪ್ರತಿಸ್ಪರ್ಧಿ ಜೋ ಬಿಡೆನ್ ಅವರಿಗಿಂತ ಹಿಂದಿದ್ದಾರೆ ಎನ್ನಲಾಗಿದೆ. ಅಲ್ಲದೆ ದೇಶದಲ್ಲಿ ಕರೋನಾ ಸಾಂಕ್ರಾಮಿಕ ಹರಡಿರುವ ಬಗ್ಗೆ ಜನರಲ್ಲಿ ಅಸಮಾಧಾನವಿದೆ. ಈ ಎಲ್ಲಾ ಅಂಶಗಳು ಚುನಾವಣೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ.
 

Trending News