ನವದೆಹಲಿ: ನಾಯಿ ಮತ್ತು ಬೆಕ್ಕುಗಳು(Dog & Cat's) ಮನುಷ್ಯಸ್ನೇಹಿ ಜೀವಿಗಳು. ಪ್ರತಿಯೊಬ್ಬರೂ ಈ ಎರಡು ಪ್ರಾಣಿಗಳ ಜೊತೆಗೆ ಪ್ರೀತಿಯಿಂದ ವರ್ತಿಸುತ್ತಾರೆ. ನಾಯಿ ಮತ್ತು ಬೆಕ್ಕು ಕಂಡರೆ ಸಾಕು ಅಕ್ಕರೆ ತೋರುತ್ತಾರೆ. ಅವುಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ತಮ್ಮ ಪ್ರೀತಿಯ ಬೆಕ್ಕು ಅಥವಾ ನಾಯಿಗೆ ಏನಾದರೂ ಆದರೆ ನೊಂದುಕೊಳ್ಳುವವರು ಇದ್ದಾರೆ. ತಮ್ಮ ಮಗುವಿನಂತೆ ಅವುಗಳ ಜೊತೆ ಬಾಂಧವ್ಯ ಇಟ್ಟುಕೊಂಡು ಸಾಕುತ್ತಾರೆ. ನಾಯಿ ಮತ್ತು ಬೆಕ್ಕು ಎಷ್ಟು ಮುದ್ದಾಗಿರುತ್ತವೆ ಎಂದರೆ ಚಿಕ್ಕ ಮಕ್ಕಳೂ ಸಹ ಭಯವಿಲ್ಲದೆ ಅವುಗಳ ಜೊತೆಗೆ ಆಟವಾಡುತ್ತವೆ.


COMMERCIAL BREAK
SCROLL TO CONTINUE READING

ಬೆಕ್ಕನ್ನು ನೋಡಿ ಭಾವುಕರಾದ ವೃದ್ಧ


ಕೆಲವರು ತಾವು ಪ್ರೀತಿಯಿಂದ ಸಾಕಿದ ಬೆಕ್ಕು(Cat) ಅಥವಾ ನಾಯಿಗಳಿಗೆ ಏನಾದರೂ ಆದರೆ ತುಂಬಾ ನೊಂದುಕೊಳ್ಳುತ್ತಾರೆ. ಅದೇ ರೀತಿ ಈ ವಿಡಿಯೋವನ್ನು ನೀವು ನೋಡಿದರೆ ನಿಮ್ಮ ಕಣ್ಣಂಚಲ್ಲಿ ನೀರು ಬರುವುದು ಗ್ಯಾರೆಂಟಿ. ಏಕೆಂದರೆ ಇಲ್ಲಿ ಪ್ರೀತಿಯಿಂದ ಸಾಕಿದ ಬೆಕ್ಕು ಪುನರ್ಜನ್ಮವೆತ್ತಿ ಬಂದಂತೆ ಈ ವೃದ್ಧರಿಗೆ ಸಿಕ್ಕಿದೆ. ಹೀಗಾಗಿ ಅವರ ಖುಷಿಗೆ ಪಾರವೇ ಇರಲಿಲ್ಲ. ಅಷ್ಟಕ್ಕೂ ಈ ವೃದ್ಧರು ಭಾವುಕರಾಗಿದ್ದು ಏಕೆ ಅಂತೀರಾ..? ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೊ(Viral Video)ದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ತಮ್ಮ ಬೆಕ್ಕನ್ನು ಎದೆಗೆ ಅಪ್ಪಿಕೊಂಡು  ಅಳುತ್ತಿರುವುದನ್ನು ಕಾಣಬಹುದು. ಇದರ ಹಿಂದಿನ ಕಥೆ ತಿಳಿದರೆ ನೀವೂ ಭಾವುಕರಾಗುತ್ತೀರಿ.


Viral Video: ಪಾಪ್ ಸಿಂಗರ್ ಕೆನ್ನೆ ಕಚ್ಚಿದ ಹಾವು!, ಭಯಾನಕ ದೃಶ್ಯ ಹೇಗಿದೆ ನೋಡಿ


ವಿಡಿಯೋದಲ್ಲಿ ಕಾಣಸಿಗುವ ಈ ವೃದ್ಧರ ಮನೆಗೆ ಆಕಸ್ಮಿಕ ಬೆಂಕಿ ತಗುಲಿದೆ. ಬೆಂಕಿ(Fire Breaksout)ಯ ಕೆನ್ನಾಲಿಗೆಗೆ ಇಡೀ ಮನೆಯೇ ಸುಟ್ಟು ಭಸ್ಮವಾಗಿದೆ. ಈ ವೇಳೆ ವೃದ್ಧರೂ ಹೇಗೋ ಜೀವ ಉಳಿಸಿಕೊಂಡಿದ್ದಾರೆ. ಆದರೆ ಅವರು ಸಾಕಿದ ಮುದ್ದಿನ ಬೆಕ್ಕು ಬೆಂಕಿಗಾಹುತಿಯಾಗಿದೆ ಅಂತಾ ತಿಳಿದುಕೊಂಡು ಸುಟ್ಟು ಕರಕಲಾದ ತಮ್ಮ ಮನೆಯ ಮುಂದೆ ಅಳುತ್ತಿದ್ದರು. ಆದರೆ ಅದೃಷ್ಟವಶಾತ್ ಸುಟ್ಟುಭಸ್ಮವಾದ ಮನೆಯ ಅವಶೇಷಗಳಡಿ ಸಿಲುಕಿದ್ದ ಅವರ ಬೆಕ್ಕು ಪ್ರಾಣಾಪಾಯದಿಂದ ಪಾರಾಗಿ ಹೊರಬಂದಿದೆ. ಅದನ್ನು ಕಂಡ ಕೂಡಲೇ ವೃದ್ಧರಿಗೆ ದುಃಖ ಉಮ್ಮಳಿಸಿ ಬಂದಿದೆ. ಬೆಕ್ಕು ನೋಡಿದ ಅವರು ಆನಂದಭಾಷ್ಪ ಸುರಿಸುತ್ತಾ ಬೆಕ್ಕನ್ನು ತಮ್ಮ ಎದೆಗೆ ಅಪ್ಪಿಕೊಂಡು ಅಳಲು ಶುರುಮಾಡುತ್ತಾರೆ. ತಮ್ಮ ಮುದ್ದಿನ ಬೆಕ್ಕು(Cat) ಪುನರ್ಜನ್ಮ ಪೆಡದಿರುವುದು ಅವರ ಸಂತಸವನ್ನು ಇಮ್ಮಡಿಗೊಳಿಸಿತ್ತು.  


 ಮನೆ ಸುಟ್ಟುಭಸ್ಮವಾದರೂ ದುಃಖಿಸದ ವೃದ್ಧ  


ಆಕಸ್ಮಿಕ ಬೆಂಕಿಗೆ ಸಿಲುಕಿ ಇಡೀ ಮನೆಯೇ ಸುಟ್ಟುಭಸ್ಮವಾದರೂ ವೃದ್ಧರಿಗೆ ದುಃಖವಾಗಿರಲಿಲ್ಲವಂತೆ. ಅವರು ದುಃಖಿಸಿದ್ದು ಕೇವಲ ಆ ಮುದ್ದಿನ ಬೆಕ್ಕಿಗಾಗಿ. ಬೆಕ್ಕಿಗಾಗಿ ಅವರು ಅಳುತ್ತಿರುವುದು, ಅವರ ಕಣ್ಣುಗಳಿಂದ ನೀರು ಹೊರಬರುತ್ತಿರುವುದನ್ನು ವಿಡಿಯೋ(Viral Video)ದಲ್ಲಿ ಕಾಣಬಹುದು. ಮನೆ ಸುಟ್ಟರೆ ಸುಡಲಿ ನನ್ನ ಮುದ್ದಿನ ಬೆಕ್ಕು ಬದುಕಲಿ ಅಂತಾ ವೃದ್ಧರು ದೇವರಲ್ಲಿ ಪ್ರಾರ್ಥಿಸಿದ್ದರಂತೆ. ಅದರಂತೆ ಅವರ ಬೆಕ್ಕು ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದು ಅವರಿಗೆ ದುಃಖ ಉಮ್ಮಳಿಸಿ ಬರುವಂತೆ ಮಾಡಿತ್ತು. ಪ್ರೀತಿಯಿಂದ ಸಾಕಿದ ಬೆಕ್ಕಿನ ಪ್ರಾಣ ಉಳಿಯಿತಲ್ಲವೆಂದು ವೃದ್ಧರು ಖುಷಿ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Pakistan: ಸೇನಾ ಮುಖ್ಯಸ್ಥರ ಎಚ್ಚರಿಕೆಯ ಬಳಿಕ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ ಆಪರೇಶನ್ ಕಾಟ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.