ರಿಯಾದ್: ಕಳೆದ ಕೆಲವು ದಿನಗಳಿಂದ ಸೌದಿ ಅರೇಬಿಯಾ (Saudi Arabia) ಸರ್ಕಾರವು ತನ್ನ ದೃಢವಾದ ಚಿತ್ರಣವನ್ನು ಬದಲಾಯಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಇದೀಗ ತನ್ನ ಮೂಲಭೂತವಾದಿ ಚಿತ್ರಣವನ್ನು ಬದಲಾಯಿಸುವ ಪ್ರಯತ್ನದಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಮುಂದಿಟ್ಟಿರುವ ಸೌದಿ ಅರೇಬಿಯಾ ಸರ್ಕಾರ ಮಹಿಳೆಯರು ಸೈನ್ಯದಲ್ಲಿ (Armed Forces) ಸೇರಲು ಸಾಧ್ಯವಾಗುತ್ತದೆ ಎಂದು ಘೋಷಿಸಿದೆ. ಇದರೊಂದಿಗೆ ಸೌದಿ ಅರೇಬಿಯಾದ ಮಹಿಳೆಯರು ಈಗ ಸಶಸ್ತ್ರ ಪಡೆಗಳಿಗೆ ಸೇರಲು ಸಾಧ್ಯವಾಗುತ್ತದೆ. ಅಂದರೆ ಸೈನ್ಯ, ವಾಯುಪಡೆ ಮತ್ತು ನೌಕಾಪಡೆ ಮೂರು ಪಡೆಗಳಲ್ಲಿ ಮಹಿಳೆಯರಿಗೆ ಈಗ ಸೈನ್ಯದ ಭಾಗವಾಗಲು ಸ್ವಾತಂತ್ರ್ಯವಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ದೇಶದಲ್ಲಿ ಮಹಿಳೆಯರು ಸೈನ್ಯದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 


COMMERCIAL BREAK
SCROLL TO CONTINUE READING

ಈ ಹುದ್ದೆಗಳಲ್ಲಿ ನೇಮಕಾತಿ ನಡೆಯಲಿದೆ :
ಸೈನಿಕ, ಲ್ಯಾನ್ಸ್ ನಾಯಕ, ನಾಯಕ, ಸಾರ್ಜೆಂಟ್ ಮತ್ತು ಸ್ಟಾಫ್ ಸಾರ್ಜೆಂಟ್ ಹುದ್ದೆಗಳಿಗೆ ಮಹಿಳೆಯರು ಅರ್ಜಿ ಸಲ್ಲಿಸಬಹುದು ಎಂದು ಸೌದಿ ಅರೇಬಿಯಾದ (Saudi Arabia) ರಕ್ಷಣಾ ಸಚಿವಾಲಯ ತಿಳಿಸಿದೆ. ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ (Crown Prince Mohammed bin Salman)  ಅವರ ವಿಷನ್ 2030 ರ ಅಡಿಯಲ್ಲಿ ಸೌದಿ ಅರೇಬಿಯಾ ಈ ಕ್ರಮ ಕೈಗೊಂಡಿದೆ ಎಂದು ನಂಬಲಾಗಿದೆ. ಕ್ರೌನ್ ಪ್ರಿನ್ಸ್ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಮುನ್ನಡೆಸಲು ಸುಧಾರಣೆಗಳನ್ನು ನಡೆಸುತ್ತಿದ್ದಾರೆ.


ಇದನ್ನೂ ಓದಿ - 231 ಜನರ ಕಣ್ಣೆದುರಲ್ಲಿತ್ತು ಘನಘೋರ ಮೃತ್ಯು..! ಅವರಲ್ಲೊಬ್ಬ ಸಾವನ್ನೇ ಸೋಲಿಸಿಬಿಟ್ಟ ..!


ಕೆಲವು ಷರತ್ತುಗಳನ್ನು ಪೂರೈಸಬೇಕಾಗಿದೆ :
ಅರಬ್ ನ್ಯೂಸ್ ಪ್ರಕಾರ, ಸೈನ್ಯಕ್ಕೆ ಸೇರಲು ಮಹಿಳೆಯರು (Women) ವಯಸ್ಸು ಮತ್ತು ಉದ್ದದ ಮಾನದಂಡಗಳನ್ನು ಪೂರೈಸಬೇಕು. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿರುವ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ವಿದೇಶಿ ಪುರುಷರನ್ನು ಮದುವೆಯಾಗುವ ಮಹಿಳೆಯರನ್ನು ಸೈನ್ಯಕ್ಕೆ ಸೇರಿಸಲಾಗುವುದಿಲ್ಲ. ಪ್ರವೇಶ ಪ್ರಕ್ರಿಯೆಯಲ್ಲಿ ಮಹಿಳೆಯರು ಉತ್ತೀರ್ಣರಾಗಬೇಕು. ಅವರು ಕ್ರಿಮಿನಲ್ ದಾಖಲೆ ಹೊಂದಿದ್ದರೆ, ಅವರ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.


ಹ್ಯಾಥ್ಲೌಲ್‌ಗೆ (Hathloul) ಶಿಕ್ಷೆಯಾಯಿತು :
2019 ರಲ್ಲಿ ಸೈನ್ಯದಲ್ಲಿ ಮಹಿಳೆಯರನ್ನು ನೇಮಕ ಮಾಡುವ ಯೋಜನೆಯನ್ನು ಸೌದಿ ಅರೇಬಿಯಾ ಸರ್ಕಾರ ಮೊದಲು ಘೋಷಿಸಿತು. ಇದಕ್ಕೂ ಒಂದು ವರ್ಷದ ಮೊದಲು, 2018 ರಲ್ಲಿ ಸರ್ಕಾರ ಮಹಿಳೆಯರಿಗೆ ವಾಹನ ಚಲಾಯಿಸುವ ಹಕ್ಕನ್ನು ನೀಡಿತು. ಆದಾಗ್ಯೂ, ಈ ಹಕ್ಕಿಗಾಗಿ ಧ್ವನಿ ಎತ್ತಿದ ಕಾರ್ಯಕರ್ತ ಲೌಜೈನ್ ಅಲ್-ಹ್ಯಾಥ್ಲೌಲ್‌ (Loujain Al-Hathloul) ಅವರಿಗೆ ಆರು ವರ್ಷಗಳ ಶಿಕ್ಷೆ ವಿಧಿಸಲಾಗಿದೆ ಎಂಬುದು ವಿಪರ್ಯಾಸವಾಗಿದೆ.


ಇದನ್ನೂ ಓದಿ - ಮೊದಲ ಬಾರಿಗೆ ಮನುಷ್ಯನನ್ನೂ ತಲುಪಿದ Bird Flu H5N8 ವೈರಸ್


Drivingಗಾಗಿ ದನಿ ಎತ್ತಿದ್ದ ಲೌಜೈನ್ ಅಲ್ ಹ್ಯಾಥ್ಲೌಲ್‌ :
ವಾಸ್ತವವಾಗಿ 31 ವರ್ಷದ ಲೌಜೈನ್ ಅಲ್ ಹ್ಯಾಥ್ಲೌಲ್‌ ದೇಶದಲ್ಲಿ ಮಹಿಳೆಯರಿಗೆ ವಾಹನ ಚಲಾಯಿಸಲು ಹಕ್ಕು ನೀಡಬೇಕೆಂದು ದನಿ ಎತ್ತಿದ್ದರು. ಇದಕ್ಕಾಗಿ ಅವರನ್ನು ಶಿಕ್ಷೆಗೆ ಗುರಿಪಡಿಸಲಾಯಿತಾದರೂ ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ಇತ್ತೀಚೆಗೆ ಅವರನ್ನು ಬಿಡುಗಡೆ ಮಾಡಲಾಯಿತು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.