ಈ ದೇಶದಿಂದ ಲಕ್ಷಾಂತರ ಪಾಕಿಸ್ತಾನಿಗಳು ಹೊರಕ್ಕೆ; ಇಮ್ರಾನ್ ಖಾನ್‌ಗೆ ಮರ್ಮಾಘಾತ

ಕಳೆದ ಐದು ವರ್ಷಗಳಲ್ಲಿ ವಿವಿಧ ಅಪರಾಧಗಳು ಮತ್ತು ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ಒಟ್ಟು 2,85,980 ಪಾಕಿಸ್ತಾನಿಗಳನ್ನು ವಾಪಸ್ ಕಳುಹಿಸಿದೆ ಎಂದು ಪಾಕಿಸ್ತಾನ ತಿಳಿಸಿದೆ.

Written by - Yashaswini V | Last Updated : Feb 3, 2020, 10:18 AM IST
ಈ ದೇಶದಿಂದ ಲಕ್ಷಾಂತರ ಪಾಕಿಸ್ತಾನಿಗಳು ಹೊರಕ್ಕೆ; ಇಮ್ರಾನ್ ಖಾನ್‌ಗೆ ಮರ್ಮಾಘಾತ title=
File Image(PTI)

ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಪಾಕಿಸ್ತಾನವು ಒಂದರ ನಂತರ ಒಂದರಂತೆ ನಿರಂತರವಾಗಿ ಪೆಟ್ಟು ತಿನ್ನುತ್ತಿದೆ. ಪಾಕಿಸ್ತಾನದ ಪರಿಸ್ಥಿತಿಗಳು ವಿನಾಶದತ್ತ ಸಾಗುತ್ತಿದೆಯೇನೋ ಎಂಬಂತೆ ತೋರುತ್ತಿದೆ. ಹಣದುಬ್ಬರದಿಂದ ತತ್ತರಿಸಿರುವ ಪಾಕಿಸ್ತಾನ(PAKISTAN) ಸದ್ಯಕ್ಕೆ ಸುಧಾರಿಸಿಕೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಸ್ವತಃ ಮುಸ್ಲಿಂ ರಾಷ್ಟ್ರಗಳು ಪಾಕಿಸ್ತಾನದಿಂದ ದೂರವಿರಲು ಪ್ರಾರಂಭಿಸಿವೆ. ಕಳೆದ ಕೆಲವು ವರ್ಷಗಳಲ್ಲಿ ಸೌದಿ ಅರೇಬಿಯಾ ಲಕ್ಷಾಂತರ ಪಾಕಿಸ್ತಾನಿಗಳನ್ನು ತಮ್ಮ ದೇಶದಿಂದ ಹೊರಹಾಕಿದೆ. ಇದರಿಂದಾಗಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್(IMRAN KHAN) ನೇತೃತ್ವದ ಸರ್ಕಾರಕ್ಕೆ ಆಘಾತವಾದಂತಾಗಿದೆ.

ಕಳೆದ ಐದು ವರ್ಷಗಳಲ್ಲಿ ವಿವಿಧ ಅಪರಾಧಗಳು ಮತ್ತು ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ(SAUDI ARABIA) ಒಟ್ಟು 2,85,980 ಪಾಕಿಸ್ತಾನಿಗಳನ್ನು ವಾಪಸ್ ಕಳುಹಿಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಸೌದಿ ಅರೇಬಿಯಾದಿಂದ ವಾಪಸಾಗಿದ್ದ ಪಾಕಿಸ್ತಾನಿಗಳ ಪಟ್ಟಿಯನ್ನು ಖುರೇಷಿ ಮೇಲ್ಮನೆ ಸೆನೆಟ್ಗೆ ಸಲ್ಲಿಸಿದರು. ಸಂಸದರು ಎತ್ತಿದ ಪ್ರಶ್ನೆಗೆ ಖುರೇಷಿ ಸೆನೆಟ್ನಲ್ಲಿ ಈ ಕೆಳಗಿನ ಅಂಕಿ ಅಂಶಗಳನ್ನು ಪ್ರಸ್ತುತಪಡಿಸಿದರು.

ಈ ಪೈಕಿ 61,076 ಜನರನ್ನು ರಿಯಾದ್‌ನಿಂದ ವಾಪಸ್ ಕಳುಹಿಸಲಾಗಿದ್ದು, 2,24,904 ಜನರನ್ನು ಜೆಡ್ಡಾದಿಂದ ಹಿಮ್ಮೆಟ್ಟಿಸಲಾಗಿದೆ ಎಂದು ಅವರು ಹೇಳಿದರು.

ಪಟ್ಟಿಯ ಪ್ರಕಾರ, 2015 ಮತ್ತು 2019 ರ ನಡುವೆ 2,85,980 ಪಾಕಿಸ್ತಾನಿಗಳನ್ನು ರಿಯಾದ್ ಮತ್ತು ಜೆಡ್ಡಾದಿಂದ ವಾಪಸ್ ಕಳುಹಿಸಲಾಗಿದೆ.

ಆಂತರಿಕ ಸಮಸ್ಯೆಗಳಿಂದಾಗಿ ಪಾಕಿಸ್ತಾನ ನಿರಂತರವಾಗಿ ಸಮಸ್ಯೆ ಎದುರಿಸುತ್ತಿದೆ. ಅಲ್ಲದೆ ದೇಶದ ಆರ್ಥಿಕತೆಗೆ ನೆರವಾಗುತ್ತಿದ್ದ ಹತ್ತಿ ಉತ್ಪಾದನೆಯಲ್ಲಿ ದಾಖಲೆಯ ಮಟ್ಟದಲ್ಲಿ ಇಳಿಕೆ ಕಂಡಿದೆ. ಪಾಕಿಸ್ತಾನದ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಳೆದ ವರ್ಷದಲ್ಲಿ ಹತ್ತಿ ಉತ್ಪಾದನೆಯಲ್ಲಿ ದಾಖಲೆಯ ಕುಸಿತ ಕಂಡುಬಂದಿದೆ. ವರದಿಯ ಪ್ರಕಾರ, ಹತ್ತಿ ಬೀಜಗಳ ಬಗ್ಗೆ ಸರಿಯಾದ ಗಮನ ಹರಿಸದ ಕಾರಣ ಇದು ಸಂಭವಿಸಿದೆ. ಹತ್ತಿಯ ರಫ್ತು ವಿದೇಶಿ ವಿನಿಮಯವನ್ನು ಗಳಿಸುತ್ತದೆ ಮತ್ತು ಇದು ಐಎಂಎಫ್ ಸಾಲವನ್ನು ಮರುಪಾವತಿಸಲು ಸಹಾಯ ಮಾಡುತ್ತದೆ ಎಂಬ ಅಂಶದ ಮೇಲೆ ಇಮ್ರಾನ್ ಖಾನ್ ಸರ್ಕಾರದ ಕಣ್ಣುಗಳು ಹತ್ತಿ ಉತ್ಪಾದನೆಯ ಮೇಲೆ ಕೇಂದ್ರೀಕೃತವಾಗಿತ್ತು. ಆದಾಗ್ಯೂ, ಈ ಆಸೆಯೂ ಹುಸಿಯಾದಂತಿದೆ.

Trending News