ವಾಷಿಂಗ್ಟನ್: ನೀವು ಎಂದಾದರೂ ಹಾರುವ ಕಾರಿನಲ್ಲಿ ಪ್ರಯಾಣಿಸುವ ಕನಸು ಕಂಡಿದ್ದೀರಾ? ಹೌದು ಎಂದಾದರೆ ನಿಮ್ಮ ಕನಸು ಶೀಘ್ರದಲ್ಲೇ ಈಡೇರಲಿದೆ. ಏಕೆಂದರೆ ಫ್ಲೈಯಿಂಗ್ ಕಾರನ್ನು (Flying Car) ಅಮೆರಿಕದಲ್ಲಿ ತಯಾರಿಸಲಾಗಿದೆ ಮಾತ್ರವಲ್ಲ, ಅದಕ್ಕೆ ಅನುಮೋದನೆಯನ್ನೂ ನೀಡಲಾಗಿದೆ. ವಿಶೇಷವೆಂದರೆ ಈ ಕಾರು 160 ಕಿ.ಮೀ. ವೇಗದಲ್ಲಿ ಹಾರಾಟ ನಡೆಸುವುದಲ್ಲದೆ, ನೆಲದಿಂದ 10,000 ಅಡಿಗಳಷ್ಟು ಎತ್ತರದಲ್ಲಿ ಸಹ ಹಾರಾಟ ನಡೆಸಬಹುದು. ಇನ್ನೂ ವಿಶೇಷವೆಂದರೆ ನಿಮ್ಮ ಪ್ರಯಾಣ ಪೂರ್ಣಗೊಂಡ ಬಳಿಕ ಯಾವುದೇ ಸಾಮಾನ್ಯ ಕಾರಿನಂತೆ ನಿಮ್ಮ ಗ್ಯಾರೇಜ್ನಲ್ಲಿ ಪಾರ್ಕ್ ಮಾಡಬಹುದಂತೆ.
ಯುಎಸ್ ಫೆಡರಲ್ ಏಜೆನ್ಸಿಯಿಂದ ಅನುಮೋದನೆ :
ಅಮೆರಿಕದ ಫೆಡರಲ್ ಏವಿಯೇಷನ್ ಅಥಾರಿಟಿ ಈ ಕಾರಿಗೆ ಅನುಮೋದನೆ ನೀಡಿದೆ. ಈ ಫ್ಲೈಯಿಂಗ್ ಕಾರನ್ನು (Flying Car) ಟೆರ್ರಾಫುಜಿಯಾ ಟ್ರಾನ್ಸಿಶನ್ ಕಂಪನಿಯು ನಿರ್ಮಿಸಿದ್ದು, ಇದನ್ನು 'ರೋಡಬಲ್ ಏರ್ಕ್ರಾಫ್ಟ್' ವಿಭಾಗದಲ್ಲಿ ವಿಶೇಷ ಲೈಟ್-ಸ್ಪೋರ್ಟ್ಸ್ ವಿಮಾನವಾಗಿ ಅನುಮೋದಿಸಲಾಗಿದೆ. ಇದರರ್ಥ ಈ ಕಾರು ವಿಮಾನವಾಗಿಯೂ ಮಾನ್ಯವಾಗಿದೆ. ರಸ್ತೆಯಲ್ಲಿ ಸಾಮಾನ್ಯ ಕಾರುಗಳಂತೆಯೂ ಚಲಿಸಬಹುದು. ಆದರೆ ರಸ್ತೆಯಲ್ಲಿ ಚಲಿಸಲು ಈ ವಾಹನಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಶೀಘ್ರದಲ್ಲೇ ಇದಕ್ಕೆ ರಸ್ತೆಯಲ್ಲಿ ಚಲಿಸಲು ಕೂಡ ಅನುಮೋದನೆ ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ - ಪೆಟ್ರೋಲ್, ಡೀಸೆಲ್, ವಿದ್ಯುತ್ ಅಲ್ಲ, ಸೌರಶಕ್ತಿಯಿಂದ ಚಲಿಸುವ ಕಾರುಗಳು, ಇದು ಸರ್ಕಾರದ ಯೋಜನೆ
27 ಅಡಿ ಅಗಲದ ಫ್ಯಾನ್ :
ಈ ಕಾರು 27 ಅಡಿ ಅಗಲದ ಫ್ಯಾನ್ ಹೊಂದಿದ್ದು, ಇದು ಪೋರ್ಟಬಲ್ ಆಗಿದೆ. ಈ ಹಾರುವ ಕಾರಿನಲ್ಲಿ (Flying Car) ಕೇವಲ 2 ಜನರು ಕುಳಿತುಕೊಳ್ಳಬಹುದು ಮತ್ತು ಅದನ್ನು ಮುಂದಿನ ವರ್ಷ ಬಿಡುಗಡೆ ಮಾಡಬಹುದು. ಡೈಲಿಮೇಲ್ನ ಸುದ್ದಿಯ ಪ್ರಕಾರ, ಈ ಕಾರನ್ನು ಹಾರಲು ಅನುಮತಿಸಲಾಗಿದೆ ಮತ್ತು ನೀವು ಅದನ್ನು ಪೈಲಟ್ ತರಬೇತಿ ಸಂಸ್ಥೆಯಲ್ಲಿಯೂ ಖರೀದಿಸಬಹುದು. ಆದರೆ 2023 ರ ವೇಳೆಗೆ ಈ ಕಾರನ್ನು ರಸ್ತೆಯಲ್ಲೂ ಓಡಿಸಲು ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ - Uber ನಿಂದ ಬುಕ್ ಮಾಡಿ ಹಾರುವ ಟ್ಯಾಕ್ಸಿ!
ಪೈಲಟ್ ಪರವಾನಗಿ ಅಗತ್ಯವಿದೆ :
ಈ ಕಾರನ್ನು ಚಲಾಯಿಸಲು ಪೈಲಟ್ ಪರವಾನಗಿ ಅಗತ್ಯ ಎಂದು ಟೆರ್ರಾಫುಜಿಯಾ ಟ್ರಾನ್ಸಿಶನ್ ಕಂಪನಿ ಹೇಳಿದೆ. ಟೆರ್ರಾಫುಜಿಯಾ ಚೀನಾದ ಕಂಪನಿಯಾಗಿದೆ. ಆದರೆ ಅದರ ಎಲ್ಲಾ ಕಾರ್ಯಾಚರಣೆಗಳು ಯುಎಸ್ನಲ್ಲಿವೆ. ಕಂಪನಿಯ ಅಧಿಕಾರಿ ಕೆವಿನ್ ಅವರು ನಮ್ಮ ತಂಡವು ಈ ಫ್ಲೈಯಿಂಗ್ ಕಾರನ್ನು ಬಹಳ ಶ್ರಮವಹಿಸಿ ತಯಾರಿಸಿದೆ. ಇದು 80 ದಿನಗಳ ವಿಮಾನ ಪರೀಕ್ಷೆಯನ್ನು ಸಹ ಮಾಡಿದೆ. ಈ ಕಂಪನಿಯು ಎಫ್ಎಎ ಲೆಕ್ಕಪರಿಶೋಧನೆಗೆ 150 ತಾಂತ್ರಿಕ ಪತ್ರಿಕೆಗಳನ್ನು ಸಹ ಭರ್ತಿ ಮಾಡಿದೆ. ಈ ಕಾರಿನ ತೂಕ 590 ಕೆಜಿ ಮತ್ತು ಇದು ಕೇವಲ 1 ನಿಮಿಷದಲ್ಲಿ ಹಾರಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.