Viral Video: ಜೋ ಬಿಡೆನ್ ನಮಗೆ ದ್ರೋಹ ಬಗೆದಿದ್ದಾರೆ ಎಂದು ಅಫ್ಘಾನ್ ಪ್ರಜೆಗಳ ಘೋಷಣೆ..!
ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರ ಸಂಘಟನೆ ಸರ್ಕಾರ ರಚಿಸುವುದಾಗಿ ಘೋಷಿಸಿದೆ.
ನವದೆಹಲಿ: ಅಫ್ಘಾನಿಸ್ತಾನವನ್ನು (Afghanistan) ಸಂಪೂರ್ಣವಾಗಿ ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರ ಸಂಘಟನೆ ಸರ್ಕಾರ ರಚಿಸುವುದಾಗಿ ಘೋಷಿಸಿದೆ. ಭಾನುವಾರ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಅನ್ನು ವಶಕ್ಕೆ ತೆಗೆದುಕೊಂಡ ಬಳಿಕ ದೇಶದಲ್ಲಿ ಅನೇಕ ಮಹತ್ತರ ಬೆಳವಣಿಗೆಗಳಾಗಿವೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತಮ್ಮ ನಾಗರಿಕರು ಮತ್ತು ರಾಯಭಾರಿಗಳನ್ನು ಕರೆಸಿಕೊಳ್ಳಲು ವಿವಿಧ ದೇಶಗಳ ಪ್ರಯತ್ನಿಸುತ್ತಿವೆ. ಈ ಹಿನ್ನೆಲೆ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಉಂಟಾಗಿದೆ.
ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿರುವುದರಿಂದ ಅಫ್ಘಾನಿಸ್ತಾನ(Afghanistan) ಪ್ರಜೆಗಳಿಗೆ ಮುಂದೇನು ಮಾಡಬೇಕೆಂಬುದು ತೋಚುತ್ತಿಲ್ಲ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಫ್ಘಾನಿಸ್ತಾನದಿಂದ ಅಶ್ರಫ್ ಘನಿ ಎಸ್ಕೇಪ್ ಆಗಿದ್ದರು. ರಕ್ತಪಾತ ತಪ್ಪಿಸಲು ದೇಶವನ್ನು ತೊರೆದಿರುವುದಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ ಮಧ್ಯೆ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿರುವ ಅಫ್ಘಾನ್ ಪ್ರಜೆಗಳು ತಮ್ಮ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: Haiti Earthquake: ಹೈತಿಗಪ್ಪಳಿಸಿದ ಪ್ರಬಲ ಭೂಕಂಪ, 304 ಜನರ ಸಾವು 1800 ಜನರಿಗೆ ಗಾಯ
White House)ದ ಹೊರಗೆ ಜಮಾಯಿಸಿದ ಸಾವಿರಾರು ಅಫ್ಘಾನ್ ಪ್ರಜೆಗಳು ಅಧ್ಯಕ್ಷ ಜೋ ಬಿಡೆನ್(Joe Biden)ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ‘ಬಿಡೆನ್ ನೀವು ನಮಗೆ ದ್ರೋಹ ಮಾಡಿದ್ದೀರಿ, ಬಿಡೆನ್ ಇದಕ್ಕೆಲ್ಲಾ ನೀವೇ ಜವಾಬ್ದಾರರು’ ಅಂತಾ ಅಮೆರಿಕ ಅಧ್ಯಕ್ಷರ ವಿರುದ್ಧ ಕಿಡಿಕಾರಿದ್ದಾರೆ.
‘20 ವರ್ಷಗಳ ನಂತರ ನಾವು 2000ನೇ ಇಸವಿಗೆ ಮರಳಿದ್ದೇವೆ. ನಾವು ಶಾಂತಿಯನ್ನು ಬಯಸುತ್ತೇವೆ. ತಾಲಿಬಾನ್‌ಗಳು ದೇಶದಲ್ಲಿ ಅಧಿಕಾರ ವಹಿಸಿಕೊಂಡರೆ ಸಾವಿರಾರು ಒಸಾಮಾ ಬಿನ್ ಲಾಡೆನ್(Osama bin Laden)ಗಳು, ಸಾವಿರಾರು ಮುಲ್ಲಾ ಒಮರ್‌ಗಳು ಹುಟ್ಟಿಕೊಳ್ಳುತ್ತಾರೆ. ಅವರೆಲ್ಲಾ ಪಾಕಿಸ್ತಾನದ ಜೊತೆ ಸೇರಿಕೊಳ್ಳುತ್ತಾರೆ ಮತ್ತು ಮಧ್ಯ ಏಷ್ಯಾದಾದ್ಯಂತ ತಮ್ಮ ನೆಲಗಳನ್ನು ವಿಸ್ತರಿಸಿಕೊಳ್ಳುತ್ತಾರೆ’ ಅಂತಾ ಮಾಜಿ ಅಫ್ಘಾನ್ ಪತ್ರಕರ್ತ ಹಮ್ದರ್ಫ್ ಗಫೂರಿ ಆತಂಕ ವ್ಯಕ್ತಪಡಿಸಿದ್ದಾರೆ. ‘ತಾಲಿಬಾನಿ ಉಗ್ರರು ನಮ್ಮ ಜನರನ್ನು ಕೊಲ್ಲುತ್ತಿದ್ದಾರೆ. ಅಲ್ಲಿ ಮಹಿಳೆಯರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ ಮತ್ತು ಜನರನ್ನು ನೋಡಿಕೊಳ್ಳಲು ಯಾರೂ ಇಲ್ಲ’ವೆಂದು ಫರ್ಜಾನಾ ಹಫೀಜ್ ಎಂಬುವರು ಹೇಳಿದ್ದಾರೆ.
ಈ ದೇಶದಲ್ಲಿ ಸೈನ್ಯಕ್ಕೆ ಸೇರುವ ಮಹಿಳೆಯೆರಿಗೆ ಮಾಡಲಾಗುತ್ತೆ Virginity Test : ಈ ಬದಲಾವಣೆಗೆ ಮುಂದಾದ ಸರ್ಕಾರ
ಜೋ ಬಿಡೆನ್ ರಾಜೀನಾಮೆಗೆ ಟ್ರಂಪ್ ಆಗ್ರಹ
ಅಫ್ಘಾನಿಸ್ತಾನದಿಂದ ಸುಮಾರು 20 ವರ್ಷಗಳ ನಂತರ ಅಮೆರಿಕಾದ ಸೇನಾ ಪಡೆಗಳನ್ನು ಹಿಂಪಡೆದಿದ್ದರಿಂದ ತಾಲಿಬಾನ್ ಉಗ್ರರು ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುವಂತಾಗಿದೆ. ಹೀಗಾಗಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಜೋ ಬಿಡೆನ್ ರಾಜೀನಾಮೆ ನೀಡಬೇಕೆಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಆಗ್ರಹಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ