ಲೆಸ್ ಕಾಯೇಸ್: Haiti Earthquake - ನೈಋತ್ಯ ಹೈತಿಯಲ್ಲಿ ಶನಿವಾರ 7.2 ತೀವ್ರತೆಯ (Richter Scale) ಭೂಕಂಪ ಸಂಭವಿಸಿದ್ದು, ಕಟ್ಟಡಗಳು ಕುಸಿದು ಕನಿಷ್ಠ 304 ಜನರು ಸಾವನ್ನಪ್ಪಿದ್ದು, ಸುಮಾರು 1800 ಜನರು ಗಾಯಗೊಂಡಿದ್ದಾರೆ. ಭೂಕಂಪದಿಂದಾಗಿ ನೂರಾರು ಮನೆಗಳು ನೆಲಕಚ್ಚಿವೆ. ಭೂಕಂಪದಿಂದಾಗಿ ಜನರು ರಸ್ತೆಗಿಳಿದು ಮನೆಗಳು, ಹೋಟೆಲ್ಗಳು ಮತ್ತು ಇತರೆ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರಿಗೆ ಸಹಾಯ ಮಾಡಿದ್ದಾರೆ.
ಶನಿವಾರ ಸಂಭವಿಸಿರುವ ಈ ಭೂಕಂಪದಲ್ಲಿ ಹಲವು ನಗರಗಳು ಸಂಪೂರ್ಣ ನಾಶವಾಗಿವೆ. ಭೂಕುಸಿತ ಹಾಗೂ ಭೂಕಂಪದ ಕಾರಣ ಪ್ರಭಾವಿತಗೊಂಡ ಎರಡು ಸಮುದಾಯಗಳ ನಡುವೆ ರಕ್ಷಣಾ ಅಭಿಯಾನಕ್ಕೆ ಅಡೆತಡೆ ಉಂಟಾಗುತ್ತಿದೆ. ಭೂಕಂಪದ ಕಾರಣ ಈಗಾಗಲೇ ಕೊರೊನಾ ವೈರಸ್ ಹೊಡೆತಕ್ಕೆ ನಲುಗಿಹೋಗಿರುವ ಹೈತಿ ಜನರ ಸಂಕಷ್ಟದಲ್ಲಿ ಇನ್ನಷ್ಟು ಏರಿಕೆಯಾಗಿದೆ. ದೇಶದ ರಾಷ್ಟ್ರಪತಿಯ ಹತ್ಯೆ ಹಾಗೂ ಆಳವಾಗುತ್ತಿರುವ ಬಡತನದಿಂದ ರಾಷ್ಟ್ರ ಈಗಾಗಲೇ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದೆ.
ಸಂಕಷ್ಟದಲ್ಲಿ ಹೆಚ್ಚಾಗುವ ಸಾಧ್ಯತೆ (Haiti Earthquake Latest News)
ಶನಿವಾರ ಸಂಭವಿಸಿದ ಭೂಕಂಪದ ಕೇಂದ್ರ ರಾಜಧಾನಿ ಪೋರ್ಟ್ ಔ ಪ್ರಿನ್ಸ್ ನಿಂದ ಸುಮಾರು 125 ಕಿ.ಮೀ ದೂರದಲ್ಲಿದೆ. ಮುಂದಿನ ವಾರದ ಆರಂಭದಲ್ಲಿ ಸಂಕಷ್ಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಏಕೆಂದರೆ ಗ್ರೇಸ್ ಚಂಡಮಾರುತ ಕೂಡ ಸೋಮವಾರ ಅಥವಾ ಮಂಗಳವಾರದವರೆಗೆ ಹೈತಿ ತಲುಪುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಈ ಪ್ರಬಲ ಭೂಕಂಪದ ಬಳಿಕ ಹಗಲಿನಲ್ಲಿ ಮತ್ತು ರಾತ್ರಿ ಇಡೀ ಸಣ್ಣ ಸಣ್ಣ ಕಂಪನಗಳು ಸಂಭವಿಸಿವೆ. ಸೂರು ಕಳೆದುಕೊಂಡ ಜನರು ಹಾಗೂ ತಮ್ಮ ಮನೆ ಕುಸಿಯುವ ಹಂತದಲ್ಲಿರುವ ಜನರು ಬೀದಿಯ ಮೇಲೆಯೇ ಕಾಲ ಕಳೆಯುವ ಸ್ಥಿತಿ ಎದುರಾಗಿದೆ.
ಇದನ್ನೂ ಓದಿ-PM Gatishakti Scheme: ಪ್ರಧಾನಿ ಗತಿಶಕ್ತಿ ಯೋಜನೆ ಘೋಷಿಸಿದ ಪ್ರಧಾನಿ ಮೋದಿ, ಏನಿದರ ವಿಶೇಷತೆ?
Haiti Earthquake Updates - ಭೂಕಂಪದಿಂದ ಉಂಟಾಗಿರುವ ಹಾನಿಯ ಕುರಿತು ಮಾಹಿತಿ ನೀಡಿರುವ ಹೈತಿ ಪ್ರಧಾನಿ ಏರಿಯಲ್ ಹೆನ್ರಿ, ಸಂಪೂರ್ಣ ನಗರಗಳು ನಷ್ಟಗೊಂಡ ಪ್ರದೇಶಗಳಿಗೆ ಹಾಗೂ ಗಾಯಾಳುಗಳಿಂದ ತುಂಬಿ ಹೋದ ಆಸ್ಪತ್ರೆಗಳಿಗೆ ನೆರವು ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಈ ಕುರಿತು ಹೇಳಿಕೆ ನೀಡಿರುವ ಹೈತಿ ನಾಗರಿಕರ ಸುರಕ್ಷಾ ಸಂಸ್ಥೆಯ ನಿರ್ದೇಶಕ ಜೆರಿ ಚಾಂಡ್ಲರ್ ಭೂಕಂಪದಲ್ಲಿ ಇರುವರೆಗೆ ಮೃತಪಟ್ಟವರ ಸಂಖ್ಯೆ 304ರಷ್ಟಿದ್ದು, ದೇಶದ ದಕ್ಷಿಣ ಭಾಗದಲ್ಲಿ ಅತಿ ಹೆಚ್ಚು ಪ್ರಾಣಹಾನಿ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯ ಮುಂದುವರೆದಿದ್ದು, ಸುಮಾರು 860 ಅಧಿಕ ಮನೆಗಳು ಸಂಪೂರ್ಣ ನೆಲಕಚ್ಚಿದ್ದು, 700 ಮನೆಗಳಿಗೆ ಅಪಾರ ಹಾನಿ ತಲುಪಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ-Independence Day 2021: ‘ಅಮೃತ’ ಹೊಸ ಯೋಜನೆಗಳನ್ನು ಘೋಷಿಸಿದ ಸಿಎಂ ಬಸವರಾಜ್ ಬೊಮ್ಮಾಯಿ
Haiti Earthquake News Today - ಯುಎಸ್ ಅಧ್ಯಕ್ಷರಾಗಿರುವ ಜೋ ಬಿಡೆನ್(Joe Biden), ಯುಎಸ್ಐಐಡಿ ನಿರ್ವಾಹಕಿ ಸಮಂತಾ ಪವರ್ ಅವರನ್ನು ಹೈಟಿಗೆ ಯುಎಸ್ ಸಹಾಯಕ್ಕಾಗಿ ಸಮನ್ವಯ ಅಧಿಕಾರಿಯಾಗಿ ನೇಮಿಸಿದ್ದಾರೆ. USAID ಹಾನಿಯನ್ನು ನಿರ್ಣಯಿಸಲು ಮತ್ತು ಪುನರ್ನಿರ್ಮಾಣ ಮಾಡಲು ಸಹಾಯ ಮಾಡುತ್ತದೆ. ಅರ್ಜೆಂಟೀನಾ, ಚಿಲಿ ಸೇರಿದಂತೆ ಹಲವು ದೇಶಗಳು ಸಹಾಯ ಹಸ್ತ ಚಾಚಿವೆ.
ಇದನ್ನೂ ಓದಿ-ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಂಭ್ರಮ : ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ