ಒಂದು ವೇಳೆ ನಿಮ್ಮ ಬಳಿಯೂ ಕೂಡ ವೈಜ್ಞಾನಿಕ ಬ್ರೇನ್ ಇದ್ದು, ಅಗ್ಗದ ಮತ್ತು ವೇಗದ ಕೋವಿಡ್ -19 ಪರೀಕ್ಷಾ ಪದ್ಧತಿಯನ್ನು ನೀವು ಕಂಡುಹಿಡಿದರೆ, ನಿಮಗೆ 5 ಮಿಲಿಯನ್ ಡಾಲರ್‌ ಬಹುಮಾನದ ರೂಪದಲ್ಲಿ ಸಿಗುವ ಸಾಧ್ಯತೆ ಇದೇ. ಅಂದರೆ ಸರಿ ಸುಮಾರು 37.39 ಕೋಟಿ ರೂ. ಈ ಮೊತ್ತದ ಬಹುಮಾನವನ್ನು ಎಕ್ಸ್ ಪ್ರೈಸ್ ಎಂಬ ಸಂಸ್ಥೆ ನೀಡುತ್ತಿದೆ. ಸ್ಪರ್ಧೆಯು 6 ತಿಂಗಳವರೆಗೆ ನಡೆಯಲಿದ್ದು, ಮುಂದಿನ ವರ್ಷದ ಆರಂಭದ ತಿಂಗಳಿನಲ್ಲಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಗುವುದು.


COMMERCIAL BREAK
SCROLL TO CONTINUE READING

ಸರ್ಕಾರೇತರ ಸಂಸ್ಥೆ ಎಕ್ಸ್ ಪ್ರೈಸ್ (XPrize) ಎರಡು ದಿನಗಳ ಹಿಂದೆ ಅಂದರೆ ಜುಲೈ 28 ರಂದು ಸ್ಪರ್ಧೆಯೊಂದನ್ನು ಘೋಷಿಸಿದೆ. Covid-19ಗೆ ಅಗ್ಗದ ಮತ್ತು ವೇಗದ ಪರಿಣಾಮ ಸೂಚಿಸುವ ಪದ್ಧತಿಯನ್ನು ಸೂಚಿಸುವವರಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.


ಮುಂದಿನ 6 ತಿಂಗಳುಗಳ ಕಾಲ ನಡೆಯಲಿರುವ ಈ ಸ್ಪರ್ಧೆಗೆ 'XPrize', ರಾಪಿಡ್ ಕೊವಿಡ್ ಟೆಸ್ಟಿಂಗ್ ಹೆಸರನ್ನು ನೀಡಿದೆ. ಅತಿ ಶೀಘ್ರದಲ್ಲಿಯೇ ಉತ್ತಮ ಗುಣಮಟ್ಟದ ಹಾಗೂ ಅಗ್ಗದ ಕೊವಿಡ್-19 ಟೆಸ್ಟಿಂಗ್ ಕಿಟ್ ಸಿದ್ಧಪಡಿಸುವುದು ಇದರ ಉದ್ದೇಶವಾಗಿದ್ದು, ಅದು ವೇಗವಾಗಿ ನಂಬಿಕಾರ್ಹ ಫಲಿತಾಂಶ ನೀಡಬೇಕು. ಇದರಿಂದ ಪೂರ್ಣ ಮಾನವತೆಗೆ ಲಾಭ ಸಿಗಲಿದೆ.


ಓರ್ವ ಚಿಕ್ಕ ಬಾಲಕನೂ ಕೂಡ ಸುಲಭವಾಗಿ ಉಪಯೋಗಿಸಬಲ್ಲ ಸರಳ ಮತ್ತು ಸಹಜ ಟೆಸ್ಟಿಂಗ್ ಕಿಟ್ ಸಿದ್ಧಮಾಡುವುದು XPrizeನ ಉದ್ದೇಶ. ಟೆಸ್ಟ್ ನ ಫಲಿತಾಂಶ ಕನಿಷ್ಠ 15ನಿಮಿಷಗಳಲ್ಲಿ ಲಭ್ಯವಾಗಬೇಕು ಎನ್ನುವುದು ಸಂಸ್ಥೆಯ ಉದ್ದೇಶ.


ಪ್ರಸ್ತುತ ಕೊವಿಡ್-19 ಮೇಲೆ ಸುಮಾರು 100 ಡಾಲರ್ ಅಂದರೆ 7479 ರೂ. ಖರ್ಚು ಬರುತ್ತದೆ. ಇದು ಇಳಿಕೆಯಾಗಿ 15 ಡಾಲರ್ ಅಂದರೆ 1121ರೂ.ಗೆ ಇಳಿಯಬೇಕು.  ಒಟ್ಟು 5 ವಿಜೇತ ತಂಡಗಳ ಆಯ್ಕೆ ಮಾಡಲಾಗುವುದು ಎಂದು ಎಕ್ಸ್ ಪ್ರೈಸ್ ಹೇಳಿದೆ. ವಿಜೇತರಾಗುವ ಪ್ರತಿ ತಂಡಕ್ಕೆ 1 ಮಿಲಿಯನ್ ಡಾಲರ್ ಅಂದರೆ 7.47 ಡಾಲರ್ ಬಹುಮಾನ ನೀಡಲಾಗುವುದು.  ಇವುಗಳಲ್ಲಿ ಪಿಸಿಆರ್ ಟೆಸ್ಟ್ ಪದ್ಧತಿ ಆಗಿರಲಿ ಅಥವಾ ಆಂಟಿಜೇನ್ ಆಂಟಿ ಜೇನ್ ಪದ್ಧತಿಯೇ ಆಗಿರಲಿ, ಪದ್ಧತಿ ಸಹಜ ಮತ್ತು ಸರಳವಾಗಿರಬೇಕು.


ವಿಜೇತಗಾಗುವ ಪ್ರತಿ ತಂಡ ಸತತ ಎರಡು ತಿಂಗಳುಗಳ ಕಾಲ ಪ್ರತಿ ವಾರ ಸುಮಾರು 500 ಕೊವಿಡ್ 19 ಟೆಸ್ಟ್ ಮಾಡಿಸಬೇಕು. ಆದರೆ, ತಂಡದವರು ಪ್ರತಿ ವಾರ 1000 ಟೆಸ್ಟ್ ಗಳನ್ನು ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ಗಳನ್ನು ಕೂಡ ಮಾಡಿಸಬಹುದು.


ಈ ಕುರಿತು ಮಾಹಿತಿ ನೀಡಿರುವ ಎಕ್ಸ್ ಪ್ರೈಸ್ ಸಿಇಓ ಅನುಷೆಹ್ ಅನ್ಸಾರಿ, ಟೆಸ್ಟಿಂಗ್ ದರದಲ್ಲಿ ಭಾರಿ ಇಳಿಕೆಯಾದ ಕಾರಣ ಹಲವು ಕೊವಿಡ್ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಒಂದು ವೇಳೆ ಜನರಿಗೆ ಸರಿಯಾದ ಸಮಯಕ್ಕೆ ಟೆಸ್ಟಿಂಗ್ ವರದಿ ಲಭಿಸಿದರೆ, ಅವರ ಚಿಕಿತ್ಸೆ ಕೂಡ ಬೇಗ ಸಂಭವಿಸುವ ಸಾಧ್ಯತೆ ಇದೇ ಎಂದು ಹೇಳಿದ್ದಾರೆ.


ಈ ಸ್ಪರ್ಧೆ ಅಟ್ ಹೋಮ್, ಪಾಯಿಂಟ್ ಆಫ್ ಕೆಯರ್, ಡಿಸ್ಟ್ರಿಬ್ಯೂಟೆಡ್ ಲ್ಯಾಬ್ ಹಾಗೂ ಹೈ ಥ್ರೋಪುಟ್ ಲ್ಯಾಬ್ ಎಂಬ ನಾಲ್ಕು ಕೆಟೆಗರಿಗಳಲ್ಲಿ ಈ ಸ್ಪರ್ಧೆಯನ್ನು ನಡೆಸಲಾಗುವುದು ಎಂದು ಅನ್ಸಾರಿ ಹೇಳಿದ್ದಾರೆ.