Davanagere Lok Sabha Election Result: ಬಿಜೆಪಿ ಭದ್ರಕೋಟೆ ಛಿದ್ರ ಮಾಡಿದ ಕೈ ಪಡೆ..! ಪ್ರಭಾ ಮಲ್ಲಿಕಾರ್ಜುನಗೆ ಭರ್ಜರಿ ಜಯ

Davanagere Lokasabha Election Result 2024:  2024ರ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆಲವು ಸಾಧದಿಸಿದ್ದಾರೆ.

Written by - Savita M B | Last Updated : Jun 4, 2024, 03:06 PM IST
  • ಸದ್ಯ ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಕ್ತಾಯವಾಗಿದ್ದು, ಕೈ-ಕಮಲ ಅಭ್ಯರ್ಥಿಗಳ ಭವಿಷ್ಯ ಭದ್ರವಾದೆ
  • ದಾವಣಗೆರೆಯಲ್ಲಿ ಮತದಾರರು ಹಾಗೂ ಪಕ್ಷಗಳಲ್ಲಿ ಗೆಲುವಿನ ಲೆಕ್ಕಾಚಾರ ಜೋರಾಗಿದ್ದು, ಜಿಲ್ಲೆಯಲ್ಲಿ ಗೆಲುವಿನ ಚರ್ಚೆ ಭರ್ಜರಿಯಾಗಿದೆ..
Davanagere Lok Sabha Election Result: ಬಿಜೆಪಿ ಭದ್ರಕೋಟೆ ಛಿದ್ರ ಮಾಡಿದ ಕೈ ಪಡೆ..! ಪ್ರಭಾ ಮಲ್ಲಿಕಾರ್ಜುನಗೆ ಭರ್ಜರಿ ಜಯ title=

Davanagere Lok Sabha Election Result:  ಬಿಜೆಪಿ ಭದ್ರಕೋಟೆಯಾಗಿರುವ ದಾವಣಗೆರೆ ಲೋಕಸಭಾ ಕ್ಷೇತ್ರದ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ವಿರುದ್ಧ ಗೆಲವು ಸಾಧಿಸಿದ್ದಾರೆ..

ದಾವಣಗೆರೆ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ 192826, ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ 180796 ಮತಗಳು ಮತ್ತು ಜಿ. ಬಿ. ವಿನಯ್ ಕುಮಾರ್ 12690 ಮತಗಳನ್ನು ಪಡೆದಿದ್ದಾರೆ. 

ಪ್ರಭಾ ಮಲ್ಲಿಕಾರ್ಜುನ್ 107481 ಮತಗಳು, ಗಾಯತ್ರಿ ಸಿದ್ದೇಶ್ವರ 104061, ಜಿ. ಬಿ. ವಿನಯ್ ಕುಮಾರ್ 7823.. ಈ ಮೂಲಕ ಪ್ರಭಾ ಮಲ್ಲಿಕಾರ್ಜುನ್ ಮುನ್ನಡೆ ಸಾಧಿಸಿದ್ದಾರೆ. 

ದಾವಣಗೆರೆ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ 32544, ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ 26226 ಮತಗಳು ಮತ್ತು ಜಿ. ಬಿ. ವಿನಯ್ ಕುಮಾರ್ 3312 ಮತಗಳನ್ನು ಪಡೆದಿದ್ದಾರೆ. 

ಸದ್ಯ ದಾವಣಗೆರೆ ಕ್ಷೇತ್ರದಲ್ಲಿ ಮತ ಎಣಿಕೆ ಆರಂಭವಾಗಿದ್ದು, ಒಟ್ಟು 4,918 ಅಂಚೆ ಮತಗಳು ಚಲಾವಣೆಯಾಗಿದ್ದು, ಇದರಲ್ಲಿ ಕೈ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮುನ್ನಡೆ ಸಾಧಿಸಿದ್ದಾರೆ.. ಕಾಂಗ್ರೆಸ್‌- 742 ಬಿಜೆಪಿ-714  ಮತದಗಳು ದಾಖಲಾಗಿವೆ. 

ಬಿಜೆಪಿ ಭದ್ರಕೋಟೆಯಾಗಿರುವ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು 1998ರಲ್ಲಿ ಶಾಮನೂರು ಶಿವಶಂಕರಪ್ಪ ಗೆಲುವಿನ ನಂತರ ಕಾಂಗ್ರೆಸ್ 26 ವರ್ಷಗಳಿಂದ ಗೆಲ್ಲವು ಸಾಧಿಸಿಲ್ಲ.. ಸದ್ಯ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಹವಣಿಸುತ್ತಿದೆ.. ಆದರೆ ಈ ಬಾರಿ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಕಣಕ್ಕಿಳಿದಿದ್ದು ಅವರೇ ವಿಜಯಮಾಲೆ ಧರಿಸಲಿದ್ದಾರೆ ಎನ್ನುವ ಮಾತುಗಳು ಮತದಾರರಲ್ಲಿ ಕೇಳಿಬರುತ್ತಿವೆ.. ಬಿಜೆಪಿಯ ಭದ್ರಕೋಟೆಯನ್ನು ಕೈ ವಶಪಡಿಸಿಕೊಳ್ಳಲಿದೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಅಭಿಪ್ರಾಯಪಡುತ್ತಿದ್ದಾರೆ.. 1998ರ ಶಾಮನೂರು ಶಿವಶಂಕರಪ್ಪ ಅವರ ಬಳಿಕ ಗೆಲುವು ಕಾಣದ ಕಾಂಗ್ರೆಸ್‌ ಪಾಳಯ  2024ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರುವ ವಿಶ್ವಾಸ ಹೊಂದಿದೆ.. 

ಇದನ್ನೂ ಓದಿ- Chikkaballapura Lok Sabha Election Result: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಗೆಲ್ಲುವವರಾರು

ಇನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 136 ಸ್ಥಾನಗಳನ್ನು ಗೆದ್ದು ಸಾಧನೆ ಮಾಡಿತ್ತು.. ಆದರೆ ಪ್ರತಿ ಚುನಾವಣೆಯಲ್ಲಿ ಕಂಡುಬಂದಿದ್ದ ಬಿಜೆಪಿಯ ಹೋರಾಟ ಈ ಚುನಾವಣೆಯಲ್ಲಿ ಕಾಣಲಿಲ್ಲ ಎನ್ನವುದು ಬಿಜೆಪಿ ಕಾರ್ಯಕರ್ತರಿಂದಲೇ ಬಂದ ಮಾತುಗಳಾಗಿವೆ.. 

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹರಿಹರ ಹೊರತುಪಡಿಸಿ ಒಟ್ಟು ಎಂಟು ಮತಕ್ಷೇತ್ರಗಳ ಪೈಕಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇರುವುದು ಕೈಗೆ ದೊಡ್ಡ ಶಕ್ತಿಯಾಗಿದೆ.. ಇದಲ್ಲದೇ ಅವರ ಗ್ಯಾರಂಟಿಗಳಿಂದ ಮಹಿಳಾ ಮತದಾರರು ಕಾಂಗ್ರೆಸ್‌ ಪಕ್ಷದ ಕೈ ಹಿಡಿದಿದ್ದರಿಂದ ಶತಮಾನದ ಬಳಿಕ ಕೈ ವಿಜಯಮಾಲೆ ಧರಿಸಲಿದೆ ಎನ್ನುವ ಮಾತುಗಳ ಸಹ ಮತದಾರರಲ್ಲಿ ಕೇಳಿಬರುತ್ತಿವೆ.. 

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸುವ್ಯಸ್ಥಿತ ಸರ್ಕಾರದ ಕಾರ್ಯಗಳು ಈ ಬಾರಿ ಕಾಂಗ್ರೆಸ್‌ ಗೆಲುವಿಗೆ ಕಾರಣವಾಗಲಿವೆ ಎಂದು ಸಾರ್ವಜನಿಕ ವಲಯದಲ್ಲಿ ಕೆಲವು ಮಾತುಗಳು ಕೇಳಿಬರುತ್ತಿವೆ.. ಇದಲ್ಲದೇ ವಿದ್ಯಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಕಾಂಗ್ರೆಸ್‌ ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸ ಕಾಂಗ್ರೆಸ್‌ನಲ್ಲಿ ಕಂಡು ಬರುತ್ತಿದೆ.

ಇದನ್ನೂ ಓದಿ- Chikkaballapura Lok Sabha Election Result: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಗೆಲ್ಲುವವರಾರು

ಸತತ ನಾಲ್ಕು ಬಾರಿ ಗೆಲುವು ಸಾಧಿಸಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವ ಬಿಜೆಪಿ ಈ ಬಾರಿಯೂ ಗೆಲ್ಲುವ ಧೈರ್ಯದ ಮೇಲೆ ಐದನೇ ಬಾರಿಯೂ ಗೆಲುವಿನ ವಿಶ್ವಾಸದಲ್ಲಿದೆ. ಬಿಜೆಪಿ ಕಾರ್ಯಕರ್ತರು ಸಹ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ಗೆಲುವು ಖಚಿತ ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ.. ಸತತ ನಾಲ್ಕು ಬಾರಿ ಗೆಲುವು ಸಾಧಿಸಿ ಸಂಸದ ಜಿಎಂ‌ ಸಿದ್ದೇಶ್ವರ್ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಕೈ ಹಿಡಿಯಲಿದೆ ಎಂಬುದು ಮತದಾರರ ಮಾತಾಗಿದೆ.. 

ಲೆಕ್ಕಾಚಾರ ಏನೇ ಇದ್ದರೂ.. ಮತದಾರರ ನಿರ್ಧಾರ ಮತ ಯಂತ್ರಗಳಲ್ಲಿ ಭದ್ರವಾಗಿವೆ.. ಇಂದು ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದ್ದು, ಅಲ್ಲಿಯವರೆಗೂ ಈ ಗೆಲುವು ಸೋಲಿನ ಚರ್ಚಾ ಲೆಕ್ಕಾಚಾರಗಳು ಪಕ್ಷದ ಕಾರ್ಯಕರ್ತರು ಹಾಗೂ ಜನಸಾಮಾನ್ಯರಲ್ಲಿ ಇರಲಿವೆ..  
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News