ಸೂಪರ್‌.. ಡೂಪರ್‌.. ನ್ಯೂ ʼಸಿಎಂ ರೇವಂತ್‌ ರೆಡ್ಡಿʼ..! ತೆಲಂಗಾಣ ಭಾವಿ ಮುಖ್ಯಮಂತ್ರಿಗೆ RGV ವಿಶ್‌

CM Revanth reddy: ತೆಲಂಗಾಣದಲ್ಲಿ ಕಾಂಗ್ರೆಸ್‌ 63 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡು ಗೆಲ್ಲುವ ಭರವಸೆಯೊಂದಿಗೆ ಮುನ್ನುಗ್ಗುತ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಗೆಲುವಿನ ಸುದ್ದಿ ಹೊರಬಿಳಲಿದೆ. ಸಧ್ಯ ಭಾವಿ ಮುಖ್ಯಮಂತ್ರಿ ರೇವಂತ್‌ ರೆಡ್ಡಿಯವರಿಗೆ ನಿರ್ದೇಶಕ ಆರ್‌ಜಿವಿ ವಿಭಿನ್ನವಾಗಿ ವಿಶ್‌ ಮಾಡಿದ್ದಾರೆ.

Written by - Krishna N K | Last Updated : Dec 3, 2023, 05:23 PM IST
  • ತೆಲಂಗಾಣದಲ್ಲಿ ಕಾಂಗ್ರೆಸ್‌ 63 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.
  • ಇನ್ನೇನು ಕೆಲವೇ ಗಂಟೆಗಳಲ್ಲಿ ಗೆಲುವಿನ ಸುದ್ದಿ ಹೊರಬಿಳಲಿದೆ.
  • ಸಧ್ಯ ಭಾವಿ ಮುಖ್ಯಮಂತ್ರಿ ರೇವಂತ್‌ ರೆಡ್ಡಿಯವರಿಗೆ ಗಣ್ಯರು ಶುಭ ಕೋರುತ್ತಿದ್ದಾರೆ.
ಸೂಪರ್‌.. ಡೂಪರ್‌.. ನ್ಯೂ ʼಸಿಎಂ ರೇವಂತ್‌ ರೆಡ್ಡಿʼ..! ತೆಲಂಗಾಣ ಭಾವಿ ಮುಖ್ಯಮಂತ್ರಿಗೆ RGV ವಿಶ್‌ title=

RGV wish to CM Revanth reddy : ಕಳೆದ 10 ವರ್ಷಗಳ ನಂತರ ತೆಲಂಗಾಣದಲ್ಲಿ ಸರ್ಕಾರ ಬದಲಾಗುವ ಎಲ್ಲಾ ಲಕ್ಷಣಗಳು ಗೋಚರವಾಗಿದೆ. ಅದರಂತೆ ಕಾಂಗ್ರೆಸ್‌ 63 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡು ಬಂದಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಗೆಲುವಿನ ಸುದ್ದಿ ಹೊರಬಿಳಲಿದೆ. ಇದರ ಬೆನ್ನಲ್ಲೆ ತೆಲಂಗಾಣ ನೂತನ ಸಿಎಂ ರೇವಂತ್‌ ರೆಡ್ಡಿಗೆ  ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.

ಈ ಪೈಕಿ ಟಾಲಿವುಡ್‌ ಸ್ಟಾರ್‌ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರು ನೂತನ ಸಿಎಂಗೆ ವಿಭಿನ್ನವಾಗಿ ಶುಭ ಕೋರಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ರೇವಂತ್‌ ರೆಡ್ಡಿ ಜೊತೆಗಿರುವ ಫೋಟೋ ಹಂಚಿಕೊಂಡು, ಭಾವಿ ಮುಖ್ಯಮಂತ್ರಿಗೆ ಶುಭ ಕೋರಿದ್ದಾರೆ.

ಇದನ್ನೂ ಓದಿ: ನಟಿ ಉರ್ಫಿ ಜಾವೇದ್ ಕ್ಷಮೆ ಕೇಳಿದ ʼಇನ್‌ಸ್ಟಾಗ್ರಾಮ್ʼ..! ಅಸಲಿಗೆ ಆಗಿದ್ದಾದ್ರು ಏನು..?

ಪೋಸ್ಟ್‌ನಲ್ಲಿ, ಸೂಪರ್‌, ಡೂಪರ್‌, ನೀವು ಮುಖ್ಯಮಂತ್ರಿಯಾಗುತ್ತಿರುವುದಕ್ಕೆ ಹೆಮ್ಮೆ ಇದೆ ರೇವಂತ್‌ ರೆಡ್ಡಿ, ತೆಲಂಗಾಣ ವೀರ ಯೋಧ, ಅಭಿನಂದನೆಗಳು ಅಂತ ಶೀರ್ಷಿಕೆ ಬರೆದುಕೊಂಡಿರುವ ಆರ್‌ಜಿವಿ ರೇವಂತ್‌ ರೆಡ್ಡಿ ಜೊತೆಗಿರುವ ಫೋಟೋ ಹಂಚಿಕೊಂಡು ನೂತನ ಸಿಎಂಗ್ ವಿಶ್‌ ಮಾಡಿದ್ದಾರೆ.

ಇನ್ನು ಬೆಳಿಗ್ಗೆಯಿಂದಲೇ ಮುನ್ನಡೆ ಕಾಯ್ದುಕೊಂಡು ಬಂದ ಕಾಂಗ್ರೆಸ್‌ ಸಧ್ಯ 63 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ. ಅಲ್ಲದೆ, ಈಗಾಗಲೇ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್‌ ನಂಬರ್‌ 60 ಅನ್ನು ಕೈ ಪಡೆ ತನ್ನದಾಗಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರವಾಗಿದ್ದು, ಸ್ಪಷ್ಟ ಬಹುಮತದಿಂದ ಕಾಂಗ್ರೆಸ್‌ ಸರ್ಕಾರ ರಚಿಸಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News