ಕೇವಲ 5 ಲಕ್ಷಕ್ಕೆ Mahindra XUV500 ಖರೀದಿಸಿರಿ, ಇಲ್ಲಿದೆ ನೋಡಿ ಮಾಹಿತಿ

Mahindra XUV500ಯನ್ನು ಶಕ್ತಿಯುತ ವಾಹನಗಳ ಪಟ್ಟಿಯಲ್ಲಿಡಲಾಗಿದೆ. ಆದರೆ  ಮಹೀಂದ್ರಾ XUV 700 ಬಿಡುಗಡೆ ಮಾಡಿದಾಗ XUV 500 ಉತ್ಪಾದನೆಯನ್ನು ನಿಲ್ಲಿಸಲಾಯಿತು.

Written by - Puttaraj K Alur | Last Updated : Mar 6, 2023, 09:30 PM IST
  • 58 ಸಾವಿರ KM ಕ್ರಮಿಸಿರುವ 2014ರ ಮಾದರಿ ಮಹೀಂದ್ರಾ Xuv500 ಕಾರಿಗೆ 5.50 ಲಕ್ಷ ರೂ. ಇದೆ
  • 2014ರ ಮಾದರಿಯ ಕಪ್ಪು ಬಣ್ಣದ XUV500 ಕಾರು 62 ಸಾವಿರ KM ಕ್ರಮಿಸಿದ್ದು, 5.60 ಲಕ್ಷ ರೂ. ಬೆಲೆ ಇದೆ
  • 2015ರ ಮಾದರಿಯ ಸಿಲ್ವರ್ ಬಣ್ಣದ ಮಹೀಂದ್ರಾ XUV500 ಕಾರು 7.95 ಲಕ್ಷ ರೂ.ಗೆ ಲಭ್ಯವಿದೆ
ಕೇವಲ 5 ಲಕ್ಷಕ್ಕೆ Mahindra XUV500 ಖರೀದಿಸಿರಿ, ಇಲ್ಲಿದೆ ನೋಡಿ ಮಾಹಿತಿ title=
ಮಹೀಂದ್ರಾ XUV500 ಕಾರು

ನವದೆಹಲಿ: ಮಹೀಂದ್ರಾ ಎಕ್ಸ್‌ಯುವಿ 500ಯನ್ನು ಶಕ್ತಿಯುತ ವಾಹನಗಳ ಪಟ್ಟಿಯಲ್ಲಿಡಲಾಗಿದೆ. ಆದರೆ ಮಹೀಂದ್ರಾ XUV 700ಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ XUV 500 ಉತ್ಪಾದನೆ ನಿಲ್ಲಿಸಲಾಯಿತು. ಆದರೆ XUV500ನ ಸೆಕೆಂಡ್ ಹ್ಯಾಂಡ್ ಕಾರು ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ನೀವು ಇದನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಿಂದ ಖರೀದಿಸಬಹುದು.

ಈ ಮಾದರಿಯನ್ನು ಉತ್ಪಾದನೆ ಸ್ಥಗಿತಗೊಳಿಸಿದ್ದು, ಇದರ ಸೆಕೆಂಡ್ ಹ್ಯಾಂಡ್ ಕಾರು ಸ್ವಲ್ಪ ಕಡಿಮೆ ಬೆಲೆಗೆ ಲಭ್ಯವಿದೆ. ಕಡಿಮೆ ಬಜೆಟ್‍ಗೆ ಇದನ್ನು ಖರೀದಿಸಬಹುದು. ಅಲ್ಲದೇ ಹಳೆ ಕಾರಿಗೆ ರಸ್ತೆ ತೆರಿಗೆಯನ್ನೂ ಪಾವತಿಸುವಂತಿಲ್ಲ. ಮಾರಾಟಕ್ಕೆ ಲಭ್ಯವಿರುವ ಕೆಲವು ಸೆಕೆಂಡ್ ಹ್ಯಾಂಡ್ ಮಹೀಂದ್ರಾ XUV500 ಕಾರುಗಳ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದೇವೆ. ಇವುಗಳ ಬೆಲೆ ಸುಮಾರು 5.5 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆನೀವು ಇವುಗಳನ್ನು OLXನಲ್ಲಿ ಖರೀದಿಸಬಹುದಾಗಿದೆ.

ಇದನ್ನೂ ಓದಿ: RBI: 500 ರೂಪಾಯಿ ನೋಟಿನ ಪ್ರಮುಖ ಮಾಹಿತಿ.. ನಿಮ್ಮ ಬಳಿಯೂ ಈ ನೋಟು ಇದೆಯೇ?

ಮೊದಲ ಮಹೀಂದ್ರಾ Xuv500 ಕಾರು 2014ರ ಮಾದರಿಯದ್ದಾಗಿದ್ದು, ಇದುವರೆಗೆ 58 ಸಾವಿರ ಕಿಮೀ ಕ್ರಮಿಸಿದೆ. ಇದು ಕಾರಿನ W6-2WD ರೂಪಾಂತರವಾಗಿದೆ. ಇದು ಡೀಸೆಲ್ ಎಂಜಿನ್ ಹೊಂದಿದ್ದು, 5.50 ಲಕ್ಷ ರೂ. ಬೆಲೆ ಇದೆ. ಇದು ದೆಹಲಿಯ ರೋಹಿಣಿ ಸೆಕ್ಟರ್ 7ರಲ್ಲಿ ಮಾರಾಟಕ್ಕೆ ಲಭ್ಯವಿದೆ.

2ನೇ ಮಹೀಂದ್ರಾ XUV500 ಕಾರು 2014 ಮಾದರಿಯದ್ದಾಗಿದೆ. ಇದರ ಬಣ್ಣ ಕಪ್ಪು. W8 2WD ವೆರಿಯಂಟ್ ಹೊಂದಿರುವ ಈ ಕಾರು ಒಟ್ಟು 62,000 ಕಿಮೀ ಚಲಿಸಿದೆ. ಇದಕ್ಕೆ 5.60 ಲಕ್ಷ ರೂ. ಬೆಲೆ ಇದೆ. ಈ ಕಾರು ದೆಹಲಿಯ ರೋಹಿಣಿ ಸೆಕ್ಟರ್ 7ರಲ್ಲಿ ಲಭ್ಯವಿದೆ.

3ನೇ ಮಹೀಂದ್ರಾ XUV500 (2015 ಮಾದರಿ) ಸಿಲ್ವರ್ ಬಣ್ಣದ್ದಾಗಿದೆ. ಇದು ಒಟ್ಟು 76 ಸಾವಿರ ಕಿಮೀ ಚಲಿಸಿದೆ. ಈ ಕಾರು W10 2WD ರೂಪಾಂತರವಾಗಿದೆ. ಇದು ಡೀಸೆಲ್ ಎಂಜಿನ್ ಹೊಂದಿದ್ದು, 7.95 ಲಕ್ಷ ರೂ. ಬೆಲೆ ಇದೆ. ದೆಹಲಿಯ ಪಶ್ಚಿಮ ವಿಹಾರ್‌ನಲ್ಲಿ ಈ ಕಾರು ಲಭ್ಯವಿದೆ.

ಇದನ್ನೂ ಓದಿ: Tata Cheapest Car: 1.5 ಲಕ್ಷ ರೂ.ಗೆ ಟಾಟಾದ ಅಗ್ಗದ ಕಾರನ್ನು ಮನೆಗೆ ತನ್ನಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News