Gold Price: 40 ಸಾವಿರಕ್ಕೆ 10 ಗ್ರಾಂ ಚಿನ್ನ! ಜೀವಮಾನದಲ್ಲಿ ಇಷ್ಟೊಂದು ಕುಸಿತವಾಗಿರಲಿಲ್ಲ ಬಂಗಾರದ ಬೆಲೆ!

Gold and Silver Price: ಇಂಡಿಯಾ ಬುಲಿಯನ್ ಆಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​(ಐಬಿಜೆಎ) ವೆಬ್‌ಸೈಟ್ ಪ್ರಕಾರ, ಮಾರ್ಚ್ 6 ರಂದು ಚಿನ್ನದ ಬೆಲೆ 10 ಗ್ರಾಂಗೆ 56,108 ರೂ. ಇತ್ತು. ಆದರೆ ಮಾರ್ಚ್ 11 ರಂದು ಚಿನ್ನದ ಬೆಲೆ 10 ಗ್ರಾಂಗೆ 55,669 ರೂ.ಗೆ ಇಳಿದಿದೆ. ಇದರ ಪ್ರಕಾರ ಇಡೀ ವಾರದಲ್ಲಿ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 439 ರೂಪಾಯಿ ಇಳಿಕೆಯಾಗಿದೆ.

Written by - Bhavishya Shetty | Last Updated : Mar 12, 2023, 10:10 PM IST
    • ವಾರವಿಡೀ ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.
    • ಚಿನ್ನದ ಬೆಲೆ 55,000 ರ ಸಮೀಪಕ್ಕೆ ಬಂದಿದೆ.
    • ಇನ್ನೊಂದೆಡೆ ಒಂದು ವಾರದಲ್ಲಿ ಇಂದು ಬೆಳ್ಳಿ ಬೆಲೆಯಲ್ಲಿ 2500 ರೂ.ಗಿಂತ ಹೆಚ್ಚಿನ ಇಳಿಕೆ ಕಂಡುಬಂದಿದೆ.
Gold Price: 40 ಸಾವಿರಕ್ಕೆ 10 ಗ್ರಾಂ ಚಿನ್ನ! ಜೀವಮಾನದಲ್ಲಿ ಇಷ್ಟೊಂದು ಕುಸಿತವಾಗಿರಲಿಲ್ಲ ಬಂಗಾರದ ಬೆಲೆ!  title=
gold price

Gold and Silver Price: ಚಿನ್ನ-ಬೆಳ್ಳಿ ಖರೀದಿಸುವವರಿಗೆ ಇಲ್ಲಿದೆ ಭರ್ಜರಿ ಸುದ್ದಿ. ನಿಮಗೂ ಚಿನ್ನ ಖರೀದಿಸುವ ಪ್ಲಾನ್ ಇದ್ದರೆ, ಇದು ನಿಮಗೆ ಒಳ್ಳೆಯ ಸುದ್ದಿ. ವಾರವಿಡೀ ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಇದೀಗ ಚಿನ್ನದ ಬೆಲೆ 55,000 ರ ಸಮೀಪಕ್ಕೆ ಬಂದಿದೆ. ಇನ್ನೊಂದೆಡೆ ಒಂದು ವಾರದಲ್ಲಿ ಇಂದು ಬೆಳ್ಳಿ ಬೆಲೆಯಲ್ಲಿ 2500 ರೂ.ಗಿಂತ ಹೆಚ್ಚಿನ ಇಳಿಕೆ ಕಂಡುಬಂದಿದೆ. ಇಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ಪರಿಶೀಲಿಸೋಣ:

ಇದನ್ನೂ ಓದಿ: ಅಕ್ಷಯ್‌ ಕುಮಾರ್‌-ನೋರಾ ಫತೇಹಿ ʼಪುಷ್ಪಾ ಸಾಂಗ್‌ʼ ಡಾನ್ಸ್‌ ಗೆ ನೆಟ್ಟಿಗರು ಗರಂ ..!

ಇಂಡಿಯಾ ಬುಲಿಯನ್ ಆಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​(ಐಬಿಜೆಎ) ವೆಬ್‌ಸೈಟ್ ಪ್ರಕಾರ, ಮಾರ್ಚ್ 6 ರಂದು ಚಿನ್ನದ ಬೆಲೆ 10 ಗ್ರಾಂಗೆ 56,108 ರೂ. ಇತ್ತು. ಆದರೆ ಮಾರ್ಚ್ 11 ರಂದು ಚಿನ್ನದ ಬೆಲೆ 10 ಗ್ರಾಂಗೆ 55,669 ರೂ.ಗೆ ಇಳಿದಿದೆ. ಇದರ ಪ್ರಕಾರ ಇಡೀ ವಾರದಲ್ಲಿ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 439 ರೂಪಾಯಿ ಇಳಿಕೆಯಾಗಿದೆ.

ಭಾರೀ ಕುಸಿದ ಬೆಳ್ಳಿ ಬೆಲೆ:

ಐಬಿಜೆಎ ವೆಬ್‌ಸೈಟ್ ಪ್ರಕಾರ, ಬೆಳ್ಳಿಯ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಮಾರ್ಚ್ 6 ರಂದು ಬೆಳ್ಳಿಯ ಬೆಲೆ ಕೆಜಿಗೆ 64,293 ರೂ. ಇತ್ತು. ಆದರೆ ಮಾರ್ಚ್ 11 ರಂದು ಬೆಳ್ಳಿಯ ಬೆಲೆ ಕೆಜಿಗೆ 61,791 ರೂ. ಆಗಿದೆ. ಅಂದರೆ ಬೆಳ್ಳಿ ಬೆಲೆಯಲ್ಲಿ 2,502 ರೂ.ಗಳ ಕುಸಿತ ಕಂಡು ಬಂದಿದೆ.

ಇದನ್ನೂ ಓದಿ: ಆ ನೋವನ್ನು ಸಹಿಸಿಕೊಳ್ಳಲಾಗದೆ Smriti Mandhanaಗೆ ಅವಾಚ್ಯವಾಗಿ ನಿಂದಿಸಿದ ಅಭಿಮಾನಿಗಳು!

41,000ಕ್ಕೆ ಚಿನ್ನ ಲಭ್ಯ:

ಕ್ಯಾರೆಟ್ ಪ್ರಕಾರ ಚಿನ್ನದ ಬೆಲೆ ನಿಗದಿಯಾಗುತ್ತಾ ಹೋಗುತ್ತದೆ. ಬಂಗಾರ ಮಾರುಕಟ್ಟೆಯಲ್ಲಿ 18 ಕ್ಯಾರೆಟ್‌ನಿಂದ 22, 23 ಮತ್ತು 24 ಕ್ಯಾರೆಟ್‌ಗಳವರೆಗಿನ ಚಿನ್ನವನ್ನು ಖರೀದಿಸಬಹುದು. 18 ಕ್ಯಾರೆಟ್ ಚಿನ್ನದ ಬೆಲೆ ಪ್ರಸ್ತುತ 10 ಗ್ರಾಂಗೆ 41,752 ರೂ. ಇದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News