ಆ ನೋವನ್ನು ಸಹಿಸಿಕೊಳ್ಳಲಾಗದೆ Smriti Mandhanaಗೆ ಅವಾಚ್ಯವಾಗಿ ನಿಂದಿಸಿದ ಅಭಿಮಾನಿಗಳು!

Smriti Mandhana Faces Online: ಇನ್ನು ಈ ಪಂದ್ಯಾವಳಿಯಲ್ಲಿ ಮಂಧಾನ ಅವರ ತಂತ್ರಗಳು ಯಾವುದೇ ಮ್ಯಾಜಿಕ್ ಮಾಡುತ್ತಿಲ್ಲ. ಹೀಗಾಗಿ ಆರ್ ಸಿ ಬಿ ನಾಯಕಿ ಸ್ಮೃತಿ ಮಂಧಾನ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ನಿಂದನೆ ಮಾಡಲಾಗುತ್ತಿದೆ. ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್, ನಕಾರಾತ್ಮಕ ಮತ್ತು ನಿಂದನೀಯ ಕಾಮೆಂಟ್‌ಗಳೊಂದಿಗೆ ತುಂಬಿಹೋಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಹತಾಶೆಯಿಂದ ತಮ್ಮ ಮಿತಿಗಳನ್ನು ದಾಟಿದ್ದಾರೆ.

Written by - Bhavishya Shetty | Last Updated : Mar 11, 2023, 08:25 PM IST
    • ಆರ್ ಸಿ ಬಿ ತಂಡ ಇಲ್ಲಿಯವರೆಗೆ ಆಡಿದ ಪ್ರತಿಯೊಂದು ಪಂದ್ಯವನ್ನು ಸೋತಿದೆ.
    • ಸ್ಮೃತಿ ಮಂಧಾನ ನೇತೃತ್ವದ ತಂಡವು ತಮ್ಮ ನಿರೀಕ್ಷಿತ ಮಾನದಂಡಗಳ ಪ್ರಕಾರ ಪ್ರದರ್ಶನ ನೀಡಲು ಹೆಣಗಾಡುತ್ತಿದೆ.
    • ಜೊತೆಗೆ WPL ಪಾಯಿಂಟ್‌’ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಆ ನೋವನ್ನು ಸಹಿಸಿಕೊಳ್ಳಲಾಗದೆ Smriti Mandhanaಗೆ ಅವಾಚ್ಯವಾಗಿ ನಿಂದಿಸಿದ ಅಭಿಮಾನಿಗಳು!  title=
smriti mandhana

Smriti Mandhana Faces Online: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಕ್ರಿಕೆಟ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2023ರ ಋತುವಿನಲ್ಲಿ ಕೆಟ್ಟ ಆರಂಭವನ್ನು ಹೊಂದಿದೆ. ಆರ್ ಸಿ ಬಿ ತಂಡ ಇಲ್ಲಿಯವರೆಗೆ ಆಡಿದ ಪ್ರತಿಯೊಂದು ಪಂದ್ಯವನ್ನು ಸೋತಿದೆ. ಸ್ಮೃತಿ ಮಂಧಾನ ನೇತೃತ್ವದ ತಂಡವು ತಮ್ಮ ನಿರೀಕ್ಷಿತ ಮಾನದಂಡಗಳ ಪ್ರಕಾರ ಪ್ರದರ್ಶನ ನೀಡಲು ಹೆಣಗಾಡುತ್ತಿದೆ. ಜೊತೆಗೆ WPL ಪಾಯಿಂಟ್‌’ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ: 19 ಎಸೆತ, 18 ಬೌಂಡರಿ, 96 ರನ್...ಪುರುಷರಿಂದಲೂ ಸಾಧ್ಯವಾಗದ ದಾಖಲೆ ಬರೆದ ಈ ಮಹಿಳಾ ಆಟಗಾರ್ತಿ!

ಇನ್ನು ಈ ಪಂದ್ಯಾವಳಿಯಲ್ಲಿ ಮಂಧಾನ ಅವರ ತಂತ್ರಗಳು ಯಾವುದೇ ಮ್ಯಾಜಿಕ್ ಮಾಡುತ್ತಿಲ್ಲ. ಹೀಗಾಗಿ ಆರ್ ಸಿ ಬಿ ನಾಯಕಿ ಸ್ಮೃತಿ ಮಂಧಾನ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ನಿಂದನೆ ಮಾಡಲಾಗುತ್ತಿದೆ. ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್, ನಕಾರಾತ್ಮಕ ಮತ್ತು ನಿಂದನೀಯ ಕಾಮೆಂಟ್‌ಗಳೊಂದಿಗೆ ತುಂಬಿಹೋಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಹತಾಶೆಯಿಂದ ತಮ್ಮ ಮಿತಿಗಳನ್ನು ದಾಟಿದ್ದಾರೆ.

ಮೊದಲಿಗೆ, RCB ತನ್ನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನ್ನು ಅನುಭವಿಸಿತು. ನಂತರ ಹರ್ಮನ್ಪ್ರೀತ್ ಕೌರ್ ಅವರ ಮುಂಬೈ ಇಂಡಿಯನ್ಸ್ ವಿರುದ್ಧವೂ ಹೀನಾಯ ಸೋಲು ಕಾಣುವಂತಾಯಿತು. ಗುಜರಾತ್ ಜೈಂಟ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಸೋತ ನಂತರ ಯುಪಿ ವಾರಿಯರ್ಜ್ ವಿರುದ್ಧ ಮತ್ತೊಂದು ಅವಮಾನಕರ ಸೋಲನ್ನು ಅನುಭವಿಸಿದೆ ಆರ್ ಸಿ ಬಿ ತಂಡ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟ ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್’ಗಳನ್ನು ಮಾಡುತ್ತಿದ್ದಾರೆ.

ಇನ್ನು ಯುಪಿ ವಾರಿಯರ್ಜ್ ವಿರುದ್ಧದ ಪಂದ್ಯದ ನಂತರ ಮಾತನಾಡಿದ ಮಂಧಾನ, “ಕಳೆದ ನಾಲ್ಕು ಪಂದ್ಯಗಳಲ್ಲಿ ಸೋಲು ಕಾಣುತ್ತಿದ್ದೇವೆ. ನಾವು ಉತ್ತಮವಾಗಿ ಪ್ರಾರಂಭಿಸಿದರೂ ಸಹ ವಿಕೆಟ್‌’ಗಳ ಬ್ಯಾಕ್ ಟು ಬ್ಯಾಕ್ ಕಳೆದುಕೊಳ್ಳುವಿಕೆ ಸಮಸ್ಯೆಯಾಗಿದೆ. ನಾನು ಆಪಾದನೆಯನ್ನೂ ಸ್ವೀಕರಿಸುತ್ತೇಬೆ. ಅಗ್ರ ಕ್ರಮಾಂಕದ ಬ್ಯಾಟರ್ ಆಗಿ, ಬೌಲರ್‌ಗಳನ್ನು ರಕ್ಷಿಸಲು ನಾವು ಬೋರ್ಡ್‌ನಲ್ಲಿ ರನ್‌ಗಳನ್ನು ಕಲೆಹಾಕಬೇಕಾಗಿದೆ” ಎಂದು ಹೇಳಿದ್ದಾರೆ.

"ನಾವು ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೆ ನಾನು ಬಹುತೇಕ ಎಲ್ಲ ಆಟಗಾರರೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಅವರನ್ನು ಹುರಿದುಂಬಿಸುತ್ತೇನೆ. ಕಳೆದ ವಾರ ಕಠಿಣವಾಗಿತ್ತು. ನಾವು ಈ ಮೊದಲು ಇಂತಹ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ. ನನ್ನ ಸುತ್ತಲೂ ನನ್ನ ಕುಟುಂಬ ಯಾವಾಗಲೂ ಇರುತ್ತದೆ. ಆದರೆ ನಮ್ಮ ತಪ್ಪಿಗಳನ್ನು ನಾವೇ ಸರಿಪಡಿಸಿಕೊಳ್ಳಬೇಕು ಎಂಬ ಭಾವನೆಯನ್ನು ನಾನು ಹೊಂದಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ: 1 ಐಪಿಎಲ್, 16 ಪಂದ್ಯ, 973 ರನ್: ಯಾರಿಂದಲೂ ಟಚ್ ಮಾಡೋಕಾಗ್ತಿಲ್ಲ ವಿರಾಟ್ ಸೃಷ್ಟಿಸಿದ ಈ ದಾಖಲೆಗಳನ್ನು!

ಮುಂದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದ್ದು, ಈ ಸ್ಪರ್ಧೆಯಲ್ಲಿ ಸ್ಮೃತಿ ಮಂಧಾನ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಈ ಋತುವಿನ ಅತ್ಯಂತ ದುಬಾರಿ ಆಟಗಾರ್ತಿ ಎಂಬ ಟ್ಯಾಗ್‌’ಗೆ ಅರ್ಹರಲ್ಲ ಎಂದು ಟೀಕಿಸುವವರನ್ನು ಬಾಯಿ ಮುಚ್ಚುವಂತೆ ಮಾಡಲು ಅವರು ಈ ಪಂದ್ಯವನ್ನು ಗೆಲ್ಲಲೇಬೇಕಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News