ಈ ದಿನ ಸರ್ಕಾರಿ ನೌಕರರ ಖಾತೆ ಸೇರುವುದು ಡಿಎ ಹೆಚ್ಚಳದ ಅರಿಯರ್ಸ್ : ಎಷ್ಟು ಏರಿಕೆಯಾಗುವುದು ವೇತನ ? ಇಲ್ಲಿದೆ ಲೆಕ್ಕಾಚಾರ

7th Pay Commission Latest Update:ಈ ಬಾರಿ ನವರಾತ್ರಿಗೂ ಮುನ್ನವೇ ಡಿಎ ಹೆಚ್ಚಳವನ್ನು ಸರ್ಕಾರ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. 

Written by - Ranjitha R K | Last Updated : Sep 18, 2023, 01:43 PM IST
  • 42 ರಷ್ಟು ತುಟ್ಟಿ ಭತ್ಯೆ ನೀಡಲಾಗುತ್ತಿದೆ
  • ಡಿಎ ಹೆಚ್ಚಳದ ಸಂಪೂರ್ಣ ಲೆಕ್ಕಾಚಾರ
  • ಈ ಬಾರಿ ಇದು ಶೇ.42ರಿಂದ 45ಕ್ಕೆ ಏರಿಕೆಯಾಗಬಹುದು.
ಈ ದಿನ ಸರ್ಕಾರಿ ನೌಕರರ ಖಾತೆ ಸೇರುವುದು ಡಿಎ ಹೆಚ್ಚಳದ ಅರಿಯರ್ಸ್ : ಎಷ್ಟು ಏರಿಕೆಯಾಗುವುದು ವೇತನ ? ಇಲ್ಲಿದೆ ಲೆಕ್ಕಾಚಾರ  title=

7th Pay Commission Latest Update : ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಮೋದಿ ಸರ್ಕಾರ ಶೀಘ್ರದಲ್ಲೇ ಶುಭ ಸುದ್ದಿ ನೀಡಲಿದೆ. ತುಟ್ಟಿಭತ್ಯೆ ಹೆಚ್ಚಳವನ್ನು ಸರ್ಕಾರ ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ. ಈ ಬಾರಿ ಡಿಎ ಹೆಚ್ಚಳ ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಈ ಬಾರಿ ನವರಾತ್ರಿಗೂ ಮುನ್ನವೇ ಡಿಎ ಹೆಚ್ಚಳವನ್ನು ಸರ್ಕಾರ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. 

42 ರಷ್ಟು ತುಟ್ಟಿ ಭತ್ಯೆ ನೀಡಲಾಗುತ್ತಿದೆ : 
ಪ್ರಸ್ತುತ ಕೇಂದ್ರ ನೌಕರರಿಗೆ ಶೇ.42 ರಷ್ಟು ತುಟ್ಟಿಭತ್ಯೆಯನ್ನು ಸರ್ಕಾರ ಪಾವತಿಸುತ್ತಿದೆ. ಈ ಬಾರಿ ಇದು ಶೇ.42ರಿಂದ 45ಕ್ಕೆ ಏರಿಕೆಯಾಗಬಹುದು. ಈ ಬಾರಿ ತುಟ್ಟಿಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ. ಏಳನೇ ವೇತನ ಆಯೋಗದ ನಿಯಮಗಳ ಪ್ರಕಾರ, ತುಟ್ಟಿಭತ್ಯೆ  50 ಪ್ರತಿಶತವನ್ನು ತಲುಪಿದಾಗ ಅದನ್ನು ಮೂಲ ವೇತನದಲ್ಲಿ ವಿಲೀನಗೊಳಿಸಲಾಗುತ್ತದೆ. ಈ ಬಾರಿ ತುಟ್ಟಿಭತ್ಯೆ ಶೇಕಡಾ 3 ರಷ್ಟು ಹೆಚ್ಚಾದರೆ, ಜುಲೈ 2024 ರಿಂದ ಅನ್ವಯವಾಗುವ ಭತ್ಯೆ ಶೇಕಡಾ 50 ದಾಟುವ ನಿರೀಕ್ಷೆಯಿದೆ. ಈ ಬಾರಿ ಶೇ.3ರ ದರದಲ್ಲಿ ಸಂಬಳದಲ್ಲಿ ಎಷ್ಟು ಹೆಚ್ಚಳವಾಗಲಿದೆ  ನೋಡೋಣ. 

ಇದನ್ನೂ ಓದಿ : ನನ್ನ ಬಿಲ್, ನನ್ನ ಹಕ್ಕು ಯೋಜನೆಯಡಿ ಕೋಟಿ ಗೆಲ್ಲುವ ಅವಕಾಶ ! ನಿಮ್ಮ ಬಳಿ ಖರೀದಿಯ ಬಿಲ್ ಇದ್ದರೆ ಸಾಕು

ಡಿಎ ಹೆಚ್ಚಳದ ಸಂಪೂರ್ಣ ಲೆಕ್ಕಾಚಾರ : 
1.) ಉದ್ಯೋಗಿಯ ವೇತನವು ತಿಂಗಳಿಗೆ  50,000 ರೂ. ಆಗಿದ್ದು, ಮೂಲ ವೇತನ ರೂ 25,000 ಆಗಿದ್ದರೆ.
2.) ಅಂತಹ ಉದ್ಯೋಗಿ ಪ್ರಸ್ತುತ ಪ್ರತಿ ತಿಂಗಳು 10,500 ರೂ.ಗಳ ಡಿಎ ಪಡೆಯುತ್ತಿದ್ದಾರೆ.
3.) ತುಟ್ಟಿಭತ್ಯೆಯಲ್ಲಿ  3 ಶೇಕಡಾ ಹೆಚ್ಚಳದ ನಂತರ, ಉದ್ಯೋಗಿಯ ಡಿಎ 11,250 ರೂ.ಗೆ ಹೆಚ್ಚಾಗುತ್ತದೆ.
4.) ಈ ರೀತಿಯಾಗಿ ವೇತನದಲ್ಲಿ ಪ್ರತಿ ತಿಂಗಳು 750 ರೂ (ವಾರ್ಷಿಕವಾಗಿ ರೂ 9000) ಹೆಚ್ಚಾಗುತ್ತದೆ.
5.) ಅಂತಹ ಪರಿಸ್ಥಿತಿಯಲ್ಲಿ, ಉದ್ಯೋಗಿಯ ವೇತನವು ತಿಂಗಳಿಗೆ 50000 ಆಗಿದ್ದರೆ, ಅವರು ವಾರ್ಷಿಕವಾಗಿ  9000 ರೂಪಾಯಿ ಲಾಭವನ್ನು ಪಡೆಯುತ್ತಾರೆ.  ಇದು ಪಿಂಚಣಿದಾರರಿಗೂ ಅನುಕೂಲವಾಗಲಿದೆ.

ಜುಲೈ 2023 ರಲ್ಲಿ ಬಿಡುಗಡೆಯಾದ ಮಾಹಿತಿಯ ಪ್ರಕಾರ, ಅಖಿಲ ಭಾರತ ಸಿಪಿಐ 3.3 ಪಾಯಿಂಟ್‌ಗಳಿಂದ 139.7 ಪಾಯಿಂಟ್‌ಗಳಿಗೆ ತಲುಪಿದೆ. ಡಿಎ ಹೆಚ್ಚಳಕ್ಕೆ ಸಂಬಂಧಿಸಿದಂತೆ,, ಒಕ್ಕೂಟವು ತುಟ್ಟಿ ಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳಕ್ಕೆ ಒತ್ತಾಯಿಸುತ್ತಿದೆ ಎಂದು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಹೇಳಿದ್ದಾರೆ. ಆದರೆ ಈ ಬಾರಿ ಸರ್ಕಾರ ತುಟ್ಟಿಭತ್ಯೆಯನ್ನು ಶೇ.3ರಷ್ಟು ಮಾತ್ರ ಹೆಚ್ಚಿಸುವ ನಿರೀಕ್ಷೆಯಿದೆ. 2006 ರಲ್ಲಿ, ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಲೆಕ್ಕಾಚಾರದ ಸೂತ್ರವನ್ನು ಕೇಂದ್ರ ಸರ್ಕಾರ ಬದಲಾಯಿಸಿತ್ತು. 

ಇದನ್ನೂ ಓದಿ : ಡಾಲರ್ ಅಲ್ಲ, ವಿಶ್ವದ ಅತ್ಯಂತ ಶಕ್ತಿಶಾಲಿ ಕರೆನ್ಸಿ ಇದು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್

Trending News