ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ಸರ್ಕಾರ ! ವೇತನದೊಂದಿಗೆ ಸಿಗುವುದು ಅರಿಯರ್ಸ್

7th pay commission: ಮೋದಿ ಸರಕಾರ ಇತ್ತೀಚೆಗೆ ಶೇ.4ರಷ್ಟು  ಡಿಎ  ಹೆಚ್ಚಿಸಿದೆ. ಅದರ ನಂತರ ಮೂಲ ವೇತನದಲ್ಲಿ ಬಂಪರ್ ಹೆಚ್ಚಳವಾಗುವುದು ಖಚಿತ. ಅಲ್ಲದೆ ಬಾಕಿ  ಅರಿಯರ್ಸ್  ಮೊತ್ತವನ್ನು ಕೂಡಾ ಸರ್ಕಾರ ಶೀಘ್ರವೇ ಬಿಡುಗಡೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. 

Written by - Ranjitha R K | Last Updated : Apr 3, 2023, 02:16 PM IST
  • ಕೇಂದ್ರ ಸರಕಾರಿ ನೌಕರರಿಗೆ ಆದಷ್ಟು ಬೇಗ ಭರ್ಜರಿ ಗಿಫ್ಟ್
  • ಶೀಘ್ರವೇ ಬಾಕಿ ಇರುವ ಡಿಎ ಅರಿಯರ್ಸ್ ಮೊತ್ತವನ್ನು ಬಿಡುಗಡೆ
  • ಕೇಂದ್ರ ಸರ್ಕಾರಿ ನೌಕರರಿಗೆ ಸಿಗಲಿದೆ ಬಂಪರ್ ಲಾಭ.
ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ಸರ್ಕಾರ ! ವೇತನದೊಂದಿಗೆ ಸಿಗುವುದು ಅರಿಯರ್ಸ್  title=

7th pay commission : ಕೇಂದ್ರ ಸರಕಾರಿ ನೌಕರರಿಗೆ ಆದಷ್ಟು ಬೇಗ ಭರ್ಜರಿ ಗಿಫ್ಟ್ ನೀಡಲು ಮೋದಿ ಸರಕಾರ ಮುಂದಾಗಿದೆ.  ಸರ್ಕಾರ ಶೀಘ್ರವೇ ಬಾಕಿ ಇರುವ ಡಿಎ ಅರಿಯರ್ಸ್ ಮೊತ್ತವನ್ನು ಬಿಡುಗಡೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಈ ಮೊತ್ತ ನೌಕರರ ಖಾತೆಗೆ ಶೀಘ್ರವೇ ಜಮಾ ಆಗಲಿದೆ ಎನ್ನಲಾಗಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಲಾಭ ಸಿಗಲಿದೆ.

ಮೋದಿ ಸರಕಾರ ಇತ್ತೀಚೆಗೆ ಶೇ.4ರಷ್ಟು  ಡಿಎ  ಹೆಚ್ಚಿಸಿದೆ. ಅದರ ನಂತರ ಮೂಲ ವೇತನದಲ್ಲಿ ಬಂಪರ್ ಹೆಚ್ಚಳವಾಗುವುದು ಖಚಿತ. ಅಲ್ಲದೆ ಬಾಕಿ  ಅರಿಯರ್ಸ್  ಮೊತ್ತವನ್ನು ಕೂಡಾ ಸರ್ಕಾರ ಶೀಘ್ರವೇ ಬಿಡುಗಡೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. 

ಇದನ್ನೂ ಓದಿ : ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ ನೀಡಿದ ನಿರ್ಮಲಾ ಸೀತಾರಾಮನ್ ! ಇನ್ನು ಇವರು ತೆರಿಗೆ ಪಾವತಿಸುವಂತಿಲ್ಲ

ಎಷ್ಟು ತಿಂಗಳ ಡಿಎ ಬಾಕಿ ಲೆಕ್ಕ ಹಾಕಲಾಗುವುದು :
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಖಾತೆಗಳಿಗೆ ತುಟ್ಟಿ ಭತ್ಯೆ ಬಾಕಿ ಪಾವತಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ . ಜನವರಿ 2023 ರಿಂದ ಫೆಬ್ರವರಿ ವರೆಗೆ ಅಂದರೆ ಎರಡು ತಿಂಗಳವರೆಗೆ, ಬಾಕಿ ಮೊತ್ತವನ್ನು  ನೌಕರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರ ಇತ್ತೀಚೆಗೆ ಶೇ 4ರಷ್ಟು ಹೆಚ್ಚಿಸಿದೆ. ಆ ನಂತರ ನೌಕರರು ಪಡೆಯುವ ಡಿಎ ಶೇ 42ಕ್ಕೆ ಏರಿದೆ. ಇದಕ್ಕೂ ಮೊದಲು ಇದು ಶೇ.38ರಷ್ಟಿತ್ತು.

 ತುಟ್ಟಿ ಭತ್ಯೆ ಏರಿಕೆಯು ಜನವರಿ 2023 ರಿಂದ ಅನ್ವಯವಾಗುವಂತೆ ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ, ನೌಕರರು ಎರಡು ತಿಂಗಳ ಅಂದರೆ ಜನವರಿ ಮತ್ತು ಫೆಬ್ರವರಿಯ ತುಟ್ಟಿ ಭತ್ಯೆಯ ಬಾಕಿಯನ್ನು ಪಡೆಯುವ ನಿರೀಕ್ಷೆಯಿದೆ. ಅದರಂತೆ, ಹೆಚ್ಚಿನ ಮೂಲ ವೇತನ ಹೊಂದಿರುವ ಉದ್ಯೋಗಿಗಳು ಬಂಪರ್ ಪ್ರಯೋಜನಗಳನ್ನು ಪಡೆಯುತ್ತಾರೆ. 

ಇದನ್ನೂ ಓದಿ : ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ! ಖರೀದಿಸುವುದಾದರೇ ಇಂದೇ ಖರೀದಿಸಿ

ಫಿಟ್ಮೆಂಟ್ ಅಂಶದಲ್ಲಿ ಗಮನಾರ್ಹ ಹೆಚ್ಚಳ  :
ಡಿಎ ಹೆಚ್ಚಳದ ನಂತರ, ದೇಶಾದ್ಯಂತ ಎಲ್ಲಾ ಉದ್ಯೋಗಿ ಸಂಸ್ಥೆಗಳು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿವೆ. ವಾಸ್ತವವಾಗಿ, ಈ ಆಗ್ರಹ ಬಹಳ ಸಮಯದಿಂದ ಕೇಳಿ ಬರುತ್ತಿದೆ. ಈ ಬಗ್ಗೆಯೂ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಬಹುದು. 

ಸರ್ಕಾರವು ಫಿಟ್‌ಮೆಂಟ್ ಅಂಶವನ್ನು 2.6 ರಿಂದ 3.7 ಪಟ್ಟು ಹೆಚ್ಚಿಸಬಹುದು ಎಂದು ನಂಬಲಾಗಿದೆ. ಅದರ ನಂತರ ಮೂಲ ವೇತನದಲ್ಲಿ ಭಾರೀ ಏರಿಕೆ ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರಿ ನೌಕರರು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಬೇಕು ಎಂದು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಸರ್ಕಾರದ ಕಡೆಯಿಂದ ಸಂತಸದ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News