ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ! ಖರೀದಿಸುವುದಾದರೇ ಇಂದೇ ಖರೀದಿಸಿ

Gold Price Today : ವಾರದ ಮೊದಲ ದಿನದ ಆರಂಭಿಕ ವಹಿವಾಟಿನಲ್ಲಿ, ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕುಸಿತ ಕಂಡುಬರುತ್ತಿದೆ. ಶುಕ್ರವಾರ  ಚಿನ್ನ ಮತ್ತು ಬೆಳ್ಳಿ  ದರದಲ್ಲಿ ಭಾರೀ ಏರಿಕೆ ಕಂಡು ಬಂದಿತ್ತು.   

Written by - Ranjitha R K | Last Updated : Apr 3, 2023, 11:24 AM IST
  • ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬಹಳ ಸಮಯದಿಂದ ಏರಿಳಿತ
  • 60 ಸಾವಿರ ರೂ.ಗಳ ದಾಖಲೆ ಬರೆದಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಇಳಿಕೆ
  • ಶುಕ್ರವಾರ ಏರಿಕೆ ಕಂಡಿತ್ತು ಚಿನ್ನ ಮತ್ತು ಬೆಳ್ಳಿ
ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ! ಖರೀದಿಸುವುದಾದರೇ ಇಂದೇ ಖರೀದಿಸಿ  title=

Gold Price Today : ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬಹಳ ಸಮಯದಿಂದ ಏರಿಳಿತ ಕಾಣುತ್ತಲೇ ಇದೆ. ಕಳೆದ ದಿನಗಳಲ್ಲಿ 60 ಸಾವಿರ ರೂ.ಗಳ ದಾಖಲೆ ಬರೆದಿದ್ದ ಚಿನ್ನದ ಬೆಲೆಯಲ್ಲಿ  ಇದೀಗ ಇಳಿಕೆ ಕಂಡು ಬಂದಿದೆ. ಬೆಳ್ಳಿ ಕೂಡಾ  ಫೆಬ್ರವರಿಯಲ್ಲಿ  71,000 ರೂಪಾಯಿ ದಾಖಲೆ ಬರೆದಿತ್ತು. ಈ ವರ್ಷ ದೀಪಾವಳಿಯಂದು ಎರಡೂ ಅಮೂಲ್ಯ ಲೋಹಗಳು ಹೊಸ ದಾಖಲೆ ಸೃಷ್ಟಿಸಲಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ದೀಪಾವಳಿಯಂದು ಚಿನ್ನ 65,000 ರೂಪಾಯಿ ಮತ್ತು ಬೆಳ್ಳಿ 80,000 ರೂಪಾಯಿಗೆ  ತಲುಪಬಹುದು ಎನ್ನುತ್ತಾರೆ ತಜ್ಞರು. 

ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ :
ವಾರದ ಮೊದಲ ದಿನದ ಆರಂಭಿಕ ವಹಿವಾಟಿನಲ್ಲಿ, ಸೋಮವಾರ ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕುಸಿತ ಕಂಡುಬರುತ್ತಿದೆ. ಸೋಮವಾರ ಬೆಳಗ್ಗೆ ಎಂಸಿಎಕ್ಸ್ ನಲ್ಲಿ ಚಿನ್ನ ಪ್ರತಿ ಕೆಜಿಗೆ 635 ರೂ. ಇಳಿಕೆಯಾಗಿ 71,583 ರೂ.ಗೆ ಮತ್ತು 10 ಗ್ರಾಂ ಚಿನ್ನಕ್ಕೆ 276 ರೂ. ಇಳಿಕೆ ಕಂಡು 59,336 ರೂಪಾಯಿ ಆಗಿದೆ.  

ಇದನ್ನೂ ಓದಿ : ಇಂದಿನ ಅಡಿಕೆ ಧಾರಣೆ: ಯಾವ್ಯಾವ ಮಾರುಕಟ್ಟೆಯಲ್ಲಿ ದರ ಹೇಗಿದೆ..?

ಶುಕ್ರವಾರ ಏರಿಕೆ ಕಂಡಿತ್ತು ಚಿನ್ನ ಮತ್ತು ಬೆಳ್ಳಿ :
ಬುಲಿಯನ್ ಮಾರುಕಟ್ಟೆಯಲ್ಲಿ ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಏರಿಕೆ ಕಂಡುಬಂದಿದೆ. ಶುಕ್ರವಾರ ಸಂಜೆ ಇಂಡಿಯಾ ಬುಲಿಯನ್ಸ್ ಅಸೋಸಿಯೇಷನ್ ​​( https://ibjarates.com ) ಬಿಡುಗಡೆ ಮಾಡಿದ ಬೆಲೆಯ ಪ್ರಕಾರ , 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 59,751 ರೂ.ಗೆ ಏರಿದೆ. ಬೆಳ್ಳಿ ಕೆ.ಜಿಗೆ 71,582 ರೂ.ಆಗಿದೆ. ಬುಲಿಯನ್ ಮಾರುಕಟ್ಟೆಯ ದರಗಳು ಮಧ್ಯಾಹ್ನ 12 ಗಂಟೆ ವೇಳೆಗೆ ಬಿಡುಗಡೆಯಾಗುತ್ತವೆ. 

ಇದನ್ನೂ ಓದಿ :  UPI ಬಳಕೆದಾರರೇ ಗಮನಿಸಿ ! ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಬಹು ದೊಡ್ಡ ನಿರ್ಧಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News