UPI payment system : ನೀವು ಕೂಡಾ ಯುಪಿಐ ಮೂಲಕವೂ ವಹಿವಾಟು ನಡೆಸುತ್ತಿದ್ದರೆ, ಇದು ನಿಮಗೂ ಪ್ರಮುಖ ಸುದ್ದಿಯಾಗಿರಲಿದೆ. ಯುಪಿಐ ಪಾವತಿ ಸಿಸ್ಟಮ್ ಅಪ್‌ಡೇಟ್‌ಗೆ ಅಗತ್ಯವಿರುವ ಮೂಲಸೌಕರ್ಯಕ್ಕೆ ಹಣಕಾಸು ಒದಗಿಸಲು ಮತ್ತು ಅದರ ಆರ್ಥಿಕ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತಹ ವಹಿವಾಟುಗಳ ಮೇಲೆ ಶೇಕಡಾ 0.3 ರಷ್ಟು ಶುಲ್ಕವನ್ನು ವಿಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)-ಬಾಂಬೆ ನಡೆಸಿದ ಅಧ್ಯಯನವೊಂದರಲ್ಲಿ ಈ ವಿಷಯವನ್ನು ಸೂಚಿಸಿದೆ.
ಸರ್ಕಾರ 5000 ಕೋಟಿ ಸಂಗ್ರಹ ಸಾಧ್ಯ :
0.3 ರಷ್ಟು ವಿಧಿಸುವ ಶುಲ್ಕದಿಂದ 2023-24 ರಲ್ಲಿ ಸುಮಾರು 5,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಬಹುದು ಎಂದು ದಿ ಡಿಸೆಪ್ಶನ್' ಎಂಬ ಶೀರ್ಷಿಕೆಯ ಅಧ್ಯಯನವು ಹೇಳುತ್ತದೆ.
ಇದನ್ನೂ ಓದಿ : RBI MPC Meeting: ರೆಪೋ ದರದಲ್ಲಿ ಮತ್ತೆ ಏರಿಕೆ!! ಜನರ ಮೇಲೆ ಬೀಳುತ್ತಾ EMI ಹೆಚ್ಚಳದ ಬರೆ?
ವ್ಯಾಪಾರಿಗಳು ಸ್ವೀಕರಿಸಿದ ಪಾವತಿಗಳ ಮೇಲೆ ಶುಲ್ಕಗಳಿಲ್ಲ :
ಮೊಬೈಲ್ ವ್ಯಾಲೆಟ್‌ಗಳ ಮೂಲಕ ಮಾಡಿದ ಪಾವತಿಗಳ ಮೇಲೆ ವಿನಿಮಯ ಶುಲ್ಕವನ್ನು ವಿಧಿಸುವ ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮದ (NPCI) ನಿರ್ಧಾರದ ಪರಿಣಾಮವನ್ನು ವಿಶ್ಲೇಷಿಸಿದ ಅಧ್ಯಯನವು, ವ್ಯಾಪಾರಿಗಳು ಸ್ವೀಕರಿಸಿದ ಪಾವತಿಗಳಿಗೆ ಯಾವುದೇ ಶುಲ್ಕವನ್ನು ವಿಧಿಸಬಾರದು ಎಂದು ಹೇಳಿದೆ. ಪೇಮೆಂಟ್ ನೇರವಾಗಿ UPI ಮೂಲಕ ಮಾಡಿದರೂ ಅಥವಾ ಅಥವಾ ಪ್ರಿಪೇಯ್ಡ್ ಇ-ವ್ಯಾಲೆಟ್‌ಗಳ ಮೂಲಕ ಮಾಡಿದರೂ ಈ ಶುಲ್ಕವನ್ನು ವ್ಯಾಪಾರಿಗಳು ಸ್ವೀಕರಿಸಿದ ಪಾವತಿಗಳಿಗೆ ವಿಧಿಸಬಾರದು ಎಂದು ಹೇಳಿದೆ.
ಪ್ರಿಪೇಯ್ಡ್ ವ್ಯಾಲೆಟ್ ಅನ್ನು ಆಧರಿಸಿರುತ್ತದೆ :
NPCI ಯುಪಿಐ ಮೂಲಕ ಅಂಗಡಿಯವರಿಗೆ ಪಾವತಿ ಮಾಡಿದರೆ ಪಾವತಿ ಮೊತ್ತದ ಶೇಕಡಾ 1.1 ರಷ್ಟು 'ಇಂಟರ್‌ಚಾರ್ಜ್' ಶುಲ್ಕವನ್ನು ಕಡಿತಗೊಳಿಸುವ ನಿಬಂಧನೆಯನ್ನು ಏಪ್ರಿಲ್ 1, 2023 ರಿಂದ ಪ್ರಾರಂಭಿಸಿದೆ. ಇದು ಪ್ರಿಪೇಯ್ಡ್ ವ್ಯಾಲೆಟ್ ಆಧಾರಿತ UPI ವಹಿವಾಟುಗಳಿಗೆ ಅನ್ವಯಿಸುತ್ತದೆ.
ಇದನ್ನೂ ಓದಿ : PPF-ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಘೋಷಿಸಿದ ಕೇಂದ್ರ ವಿತ್ತ ಸಚಿವೆ
ಈಗ ಇರುವ ನಿಯಮವೇನು?
ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ, ಯಾವುದೇ ಬ್ಯಾಂಕ್ ಅಥವಾ UPI ಅನ್ನು ನಿರ್ವಹಿಸುವ ಯಾವುದೇ ಪೂರೈಕೆದಾರರು ನೇರವಾಗಿ ಅಥವಾ ಪರೋಕ್ಷವಾಗಿ UPI ಮೂಲಕ ಪಾವತಿ ಮಾಡುವ ಅಥವಾ ಸ್ವೀಕರಿಸುವ ಯಾವುದೇ ವ್ಯಕ್ತಿಗೆ ಶುಲ್ಕ ವಿಧಿಸುವಂತಿಲ್ಲ. ಆದರೆ ಹಲವಾರು ಸಂದರ್ಭಗಳಲ್ಲಿ ಬ್ಯಾಂಕ್‌ಗಳು ಮತ್ತು ಸಿಸ್ಟಮ್ ಪೂರೈಕೆದಾರರು UPI ಕಾನೂನನ್ನು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಂಡು ಅಳವಡಿಸಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.