ಇನ್ನು ಎನ್ ಪಿಎಸ್ ನಲ್ಲೂ ಸಿಗುವುದು ಈ ಲಾಭ ! ಪಿಂಚಣಿದಾರರಲ್ಲಿ ಸಂತಸ

NPS Pension Scheme: ದ ಈಗ ಪಿಎಫ್‌ಆರ್‌ಡಿಎಯಿಂದ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಎನ್‌ಪಿಎಸ್ ಸೌಲಭ್ಯವನ್ನು ಒದಗಿಸಲು ಯೋಜನೆಯನ್ನು ಮಾಡಲಾಗುತ್ತಿದೆ. ಇದರಿಂದ ಪ್ರತಿಯೊಬ್ಬರೂ ಸುಲಭವಾಗಿ ಪಿಂಚಣಿ ಪ್ರಯೋಜನವನ್ನು ಪಡೆಯಬಹುದು.

Written by - Ranjitha R K | Last Updated : Sep 29, 2023, 07:23 AM IST
  • ಹಳ್ಳಿಗಳು ಮತ್ತು ಪಟ್ಟಣಗಳ ಜನರಿಗೂ ಪ್ರಯೋಜನ
  • RRBಯಿಂದ NPSನ ಪ್ರಯೋಜನ
  • ಅಧಿಕೃತ ಮಾಹಿತಿಯಿಂದ ಪಡೆದ ಮಾಹಿತಿ
ಇನ್ನು ಎನ್ ಪಿಎಸ್ ನಲ್ಲೂ ಸಿಗುವುದು ಈ ಲಾಭ ! ಪಿಂಚಣಿದಾರರಲ್ಲಿ  ಸಂತಸ  title=

NPS Pension Scheme : ದೇಶಾದ್ಯಂತ ಪಿಂಚಣಿದಾರರಿಗೆ  ಸರ್ಕಾರದಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈಗ ಪಿಎಫ್‌ಆರ್‌ಡಿಎಯಿಂದ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಎನ್‌ಪಿಎಸ್ ಸೌಲಭ್ಯವನ್ನು ಒದಗಿಸಲು ಯೋಜನೆಯನ್ನು ಮಾಡಲಾಗುತ್ತಿದೆ. ಇದರಿಂದ ಪ್ರತಿಯೊಬ್ಬರೂ ಸುಲಭವಾಗಿ ಪಿಂಚಣಿ ಪ್ರಯೋಜನವನ್ನು ಪಡೆಯಬಹುದು. ಎನ್‌ಪಿಎಸ್ ಪಿಂಚಣಿಯನ್ನು ಜನರಿಗೆ ಸುಲಭವಾಗಿ ತಲುಪಿಸುವ ಸಲುವಾಗಿ ಅದನ್ನು ಎಲ್ಲಾ ಬ್ಯಾಂಕ್ ಶಾಖೆಗಳು ಮತ್ತು ಅಂಚೆ ಕಚೇರಿಗಳಲ್ಲಿ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು  ಸರ್ಕಾರ ಹೇಳಿದೆ.  

ಹಳ್ಳಿಗಳು ಮತ್ತು ಪಟ್ಟಣಗಳ ಜನರಿಗೂ ಪ್ರಯೋಜನ : 
ಹೊಸ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ವಿತರಣೆಗಾಗಿ ಪ್ರಾಧಿಕಾರವು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮತ್ತು ಬ್ಯಾಂಕ್ ಪ್ರತಿನಿಧಿಗಳನ್ನು ಸಂಪರ್ಕಿಸಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ಅಧ್ಯಕ್ಷ ದೀಪಕ್ ಮೊಹಾಂತಿ  ಹೇಳಿದ್ದಾರೆ.  ಇದರಿಂದ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳ ಜನರು ಸಹ ಈ ಪಿಂಚಣಿ ಯೋಜನೆಯ ಪ್ರಯೋಜನಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. 

ಇದನ್ನೂ ಓದಿ : ಪಿಂಚಣಿದಾರರಿಗೆ ಸಿಹಿ ಸುದ್ದಿ! ಇನ್ನು ಸಿಗುವುದು 20 % ಹೆಚ್ಚುವರಿ ಪೆನ್ಶನ್

RRBಯಿಂದ NPSನ ಪ್ರಯೋಜನ : 
ಎನ್‌ಪಿಎಸ್ 'ಮಾದರಿ' ಅಡಿಯಲ್ಲಿ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿನ  ಜನರಿಗೆ ಲಾಭ ಸಿಗುವಂತಾಗಲು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು (ಆರ್‌ಆರ್‌ಬಿ) ಸೇರಿಸಲಾಗಿದೆ. ಈ ರೀತಿಯಾಗಿ, ಈಗ NPS ಅನ್ನು RRB ಯಿಂದಲೂ ತೆಗೆದುಕೊಳ್ಳಬಹುದು. ಇದಲ್ಲದೇ ಬ್ಯಾಂಕ್ ಪ್ರತಿನಿಧಿ (ಬ್ಯಾಂಕಿಂಗ್ ಕರೆಸ್ಪಾಂಡೆಂಟ್) ಮೂಲಕ ಎನ್‌ಪಿಎಸ್ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ.

ಅಧಿಕೃತ ಮಾಹಿತಿಯಿಂದ ಪಡೆದ ಮಾಹಿತಿ :
ಅಧಿಕೃತ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 16, 2023 ರಂತೆ NPS ಗೆ ಸಂಪರ್ಕ ಹೊಂದಿದ ಒಟ್ಟು ಜನರ ಸಂಖ್ಯೆ 1.36 ಕೋಟಿ. (NPS ಲೈಟ್ ಹೊರತುಪಡಿಸಿ). ಅಟಲ್ ಪಿಂಚಣಿ ಯೋಜನೆಯಡಿ ನೊಂದಾಯಿಸಿಕೊಂಡ ಗ್ರಾಹಕರ ಸಂಖ್ಯೆ ಐದು ಕೋಟಿ.

ಇದನ್ನೂ ಓದಿ : ಮೇಕ್ ಇನ್ ಇಂಡಿಯಾ ಯೋಜನೆಗೆ ದಶಕ: ಉತ್ಪಾದನಾ ಸವಾಲುಗಳು, ನೀತಿ ನಿಯಮಗಳ ತೊಡಕುಗಳು

APY ಮತ್ತು NPS ಅನ್ನು ನಿರ್ವಹಿಸುತ್ತದೆ PFRDA : 
PFRDA NPS ಮತ್ತು ಅಟಲ್ ಪಿಂಚಣಿ ಯೋಜನೆಯನ್ನು ನಿರ್ವಹಿಸುತ್ತದೆ. ಅಟಲ್ ಪಿಂಚಣಿ ಯೋಜನೆಯಲ್ಲಿ, ಕೊಡುಗೆ ಮೊತ್ತದ ಆಧಾರದ ಮೇಲೆ ಪಿಂಚಣಿಯನ್ನು ನಿಗದಿಪಡಿಸಲಾಗಿದೆ. ಅದೇ ಸಮಯದಲ್ಲಿ, NPSನಲ್ಲಿ, 60 ವರ್ಷಗಳ ವಯಸ್ಸನ್ನು ಪೂರ್ಣಗೊಳಿಸಿದ ನಂತರ, ಒಟ್ಟು ಕಾರ್ಪಸ್‌ನ ಕನಿಷ್ಠ 40 ಪ್ರತಿಶತದೊಂದಿಗೆ  ಪೆನ್ಶನ್ ಪ್ರಾಡಕ್ಟ್ ಅನ್ನು ಕಡ್ಡಾಯವಾಗಿ ಖರೀದಿಸಬೇಕಾಗುತ್ತದೆ. 

ಪಿಎಫ್‌ಆರ್‌ಡಿಎ ಅಧ್ಯಕ್ಷರು ನೀಡಿದ ಮಾಹಿತಿ  : 
ಎನ್‌ಪಿಎಸ್‌ನಲ್ಲಿನ ಆದಾಯವು ಉತ್ತಮವಾಗಿದೆ ಮತ್ತು ಜನರು ದೀರ್ಘಾವಧಿಯಲ್ಲಿ ಉತ್ತಮ ಕಾರ್ಪಸ್ ಅನ್ನು ನಿರೀಕ್ಷಿಸಬಹುದು ಎಂದು ಪಿಎಫ್‌ಆರ್‌ಡಿಎ ಅಧ್ಯಕ್ಷರು ಹೇಳಿದ್ದಾರೆ. PFRDA ಪ್ರಕಾರ, ಪಿಂಚಣಿ ಯೋಜನೆಗಳ ಅಡಿಯಲ್ಲಿ ಈಕ್ವಿಟಿಯಲ್ಲಿ ಹೂಡಿಕೆಯು ಪ್ರಾರಂಭವಾದಾಗಿನಿಂದ 12.84 ಪ್ರತಿಶತದಷ್ಟು ಲಾಭವನ್ನು ನೀಡಿದೆ. ಸರ್ಕಾರಿ ನೌಕರರ ವಿಷಯದಲ್ಲಿ, ಎನ್‌ಪಿಎಸ್‌ನಿಂದ ಆದಾಯವು 9.4 ಪ್ರತಿಶತದವರೆಗೆ ಇರುತ್ತದೆ.

ಇದನ್ನೂ ಓದಿ : ಅಕ್ಟೋಬರ್ ಒಂದರಿಂದ ಬದಲಾಗಲಿದೆ ಪಿಪಿಎಫ್, ಸುಕನ್ಯಾ ಸಮೃದ್ದಿ ನಿಯಮಗಳು! ತಪ್ಪಿದರೆ ಕ್ಲೋಸ್ ಆಗುವುದು ಖಾತೆ

ಎನ್ ಪಿಎಸ್ ನಲ್ಲಿ ಕಮಿಷನ್ ಕಡಿಮೆ : 
ಇನ್ನು ಎನ್‌ಪಿಎಸ್ ಮಾರಾಟಕ್ಕೆ ಸಿಗುವ ಕಮಿಷನ್ ಕಡಿಮೆಯಾಗಿದೆ. ಈ ಕಾರಣದಿಂದಾಗಿ, ಏಜೆಂಟ್‌ಗಳು ಅಥವಾ ಪಿಒಪಿ (ಪಾಯಿಂಟ್ ಆಫ್ ಪ್ರೆಸೆನ್ಸ್) ಅಂದರೆ ಬ್ಯಾಂಕ್‌ಗಳು ಎನ್‌ಪಿಎಸ್  ಪ್ರಾಡಕ್ಟ್ ಮಾರಾಟ ಮಾಡಲು ಹೆಚ್ಚು ಆಕರ್ಷಿತರಾಗದಿರಬಹುದು. ಆದರೆ ಗ್ರಾಹಕರಿಗೆ ಲಾಭವಾಗುವಂತೆ ಅದನ್ನು ಕನಿಷ್ಠ ವೆಚ್ಚದ ಉತ್ಪನ್ನವಾಗಿ ಇಡುವುದು ಸರ್ಕಾರದ ಗುರಿಯಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಎನ್‌ಪಿಎಸ್ ಮತ್ತು ಎಪಿವೈ ಅಡಿಯಲ್ಲಿ ನಿರ್ವಹಣೆಯಲ್ಲಿರುವ ಆಸ್ತಿಗಳು ಕನಿಷ್ಠ 12 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅದು ಪ್ರಸ್ತುತ 10.22 ಲಕ್ಷ ಕೋಟಿ ರೂಪಾಯಿಯಾಗಿದೆ. ಒಟ್ಟು ನಿರ್ವಹಿಸಿದ ನಿಧಿಯಲ್ಲಿ APY ಪಾಲು ಸುಮಾರು 35,000 ಕೋಟಿ ರೂ.
ಎಂದು ಮೊಹಂತಿ ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News