HDFC Bonds:ಹೂಡಿಕೆದಾರರಿಗೊಂದು ಅದ್ಭುತ ಸುವರ್ಣಾವಕಾಶ! ಜೀವನವಿಡೀ ಸಿಗಲಿದೆ ಬಂಪರ್ ರಿಟರ್ನ್

HDFC Bonds: HDFC ಬ್ಯಾಂಕ್ ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿದೆ. ಮುಂದಿನ ಒಂದು ವರ್ಷದಲ್ಲಿ ಬಾಂಡ್‌ಗಳನ್ನು ವಿತರಿಸುವ ಮೂಲಕ 50,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಪ್ರಸ್ತಾವನೆಯನ್ನು ಮಂಡಳಿಯು ಅನುಮೋದಿಸಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ನಿಯಂತ್ರಕ ತನ್ನ ಸೂಚನೆಯಲ್ಲಿ ತಿಳಿಸಿದೆ. ಷೇರುದಾರರ ಅನುಮೋದನೆ ಪಡೆದ ನಂತರ, ಈ ಮೊತ್ತವನ್ನು ಖಾಸಗಿ ಹಂಚಿಕೆ ಮೂಲಕ ಸಂಗ್ರಹಿಸಲಾಗುವುದು ಎಂದು ಅದು ಹೇಳಿದೆ.   

Written by - Nitin Tabib | Last Updated : Apr 18, 2022, 09:37 PM IST
  • ಬಾಂಡ್ ಹೂಡಿಕೆದಾರರಿಗೊಂದು ಸಂತಸದ ಸುದ್ದಿ.
  • HDFC ಒಂದು ಸುವರ್ಣಾವಕಾಶ ನೀಡುತ್ತಿದೆ
  • ಹೆಚ್ಚಿನ ಮಾಹಿತಿಗಾಗಿ ಈ ವರದಿಯನ್ನು ಓದಿ
HDFC Bonds:ಹೂಡಿಕೆದಾರರಿಗೊಂದು ಅದ್ಭುತ ಸುವರ್ಣಾವಕಾಶ! ಜೀವನವಿಡೀ ಸಿಗಲಿದೆ ಬಂಪರ್ ರಿಟರ್ನ್ title=
HDFC Bonds

ನವದೆಹಲಿ: HDFC Bond Investment -  ಎಚ್‌ಡಿಎಫ್‌ಸಿ ಹೂಡಿಕೆದಾರರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಈಗ ನೀವು ಜೀವನ ಪೂರ್ತಿ ಆದಾಯವನ್ನು ಪಡೆಯುವ ಅವಕಾಶವನ್ನು ಪಡೆಯಬಹುದು. ಹೌದು ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ ಶನಿವಾರದಂದು ಮುಂದಿನ ಒಂದು ವರ್ಷದಲ್ಲಿ ಬಾಂಡ್‌ಗಳನ್ನು ವಿತರಿಸುವ ಮೂಲಕ ರೂ.50,000 ಕೋಟಿ ಹಣಕಾಸು ನಿಧಿಯನ್ನು ಸಂಗ್ರಹಿಸುವುದಾಗಿ ಹೇಳಿದೆ. ಬ್ಯಾಂಕ್‌ನ ಆಡಳಿತ ಮಂಡಳಿಯ ಸಭೆಯಲ್ಲಿ ಬಾಂಡ್ ವಿತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರಿಂದ ಸಂಗ್ರಹವಾಗುವ ಹಣವನ್ನು ಮೂಲಸೌಕರ್ಯ ವಲಯಕ್ಕೆ ಹಣಕಾಸು ಒದಗಿಸಲು ಮತ್ತು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವಸತಿ ಸಾಲ ನೀಡಲು ಬಳಸಲಾಗುವುದು ಎನ್ನಲಾಗಿದೆ.

ಮುಂದಿನ ಒಂದು ವರ್ಷದಲ್ಲಿ ಬಾಂಡ್‌ಗಳನ್ನು ವಿತರಿಸುವ ಮೂಲಕ 50,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಪ್ರಸ್ತಾವನೆಯನ್ನು ಮಂಡಳಿಯು ಅನುಮೋದಿಸಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ನಿಯಂತ್ರಕ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಷೇರುದಾರರ ಅನುಮೋದನೆ ಪಡೆದ ನಂತರ, ಈ ಮೊತ್ತವನ್ನು ಖಾಸಗಿ ಹಂಚಿಕೆ ಮೂಲಕ ಸಂಗ್ರಹಿಸಲಾಗುವುದು ಎನ್ನಲಾಗಿದೆ.

ರೇಣು ಕಾರ್ನಾಡ್ ಕಾರ್ಯನಿರ್ವಾಹಕೇತರ ನಿರ್ದೇಶಕ
ಇದರೊಂದಿಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ರೇಣು ಕಾರ್ನಾಡ್ ಅವರನ್ನು ಮರುನೇಮಕ ಮಾಡುವ ಬಗ್ಗೆಯೂ ಮಾಹಿತಿ ನೀಡಿದೆ. ರೇಣು ಅವರು ಸೆಪ್ಟೆಂಬರ್ 2022 ರಿಂದ ಜಾರಿಗೆ ಬರುವಂತೆ ಮುಂದಿನ ಐದು ವರ್ಷಗಳ ಕಾಲ ನಿರ್ದೇಶಕರ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ. ರೇಣು ಅವರು 2010 ರಿಂದ ವಸತಿ ಹಣಕಾಸು ಕಂಪನಿಯಾದ HDFC ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. HDFC ಬ್ಯಾಂಕ್ ಮತ್ತು HDFC ಲಿಮಿಟೆಡ್ ಇತ್ತೀಚೆಗೆ ವಿಲೀನವನ್ನು ಘೋಷಿಸಿವೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Online Money Transfer:ಇಂಟರ್ನೆಟ್ ಇಲ್ಲದೆಯೇ ಚಿಟಿಕೆ ಹೊಡೆಯೋದ್ರಲ್ಲಿ ಹಣ ವರ್ಗಾವಣೆ ಮಾಡುವುದು ಹೇಗೆ?

ಹೂಡಿಕೆದಾರರಿಗೆ ಲಾಭವೇನು?
ಹೂಡಿಕೆದಾರರಿಗೆ ಇದರಿಂದ ಯಾವ ಲಾಭಗಳು ಸಿಗಲಿವೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿಯೂ ಕೂಡ ಮೂಡಿರಬಹುದು. ಹೌದು ಈ ನಿರ್ಧಾರ ಹೂಡಿಕೆದಾರರಿಗೆ ಬಹಳ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಅವರಿಗೆ, ಇದು ಜೀವನಪರ್ಯಂತ ಆದಾಯದ ಸಾಧನವಾಗುವ ಸಾಧ್ಯತೆ ಇದೆ. ಏಕೆಂದರೆ ಈ ನಿರ್ಧಾರದ ಮೂಲಕ ನೀವು ಬ್ಯಾಂಕಿನ ಶಾಶ್ವತ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಶಾಶ್ವತ ಬಾಂಡ್‌ಗಳಿಗೆ ಯಾವುದೇ ಮೆಚ್ಯೂರಿಟಿ ಅವಧಿ ಇರುವುದಿಲ್ಲ, ಆದ್ದರಿಂದ ಬ್ಯಾಂಕ್ ಹೂಡಿಕೆದಾರರಿಗೆ ಜೀವನಪರ್ಯಂತ ಬಡ್ಡಿ ಸಿಗುತ್ತದೆ. ಅಂದರೆ, ನೀವು ಜೀವಮಾನದ ಆದಾಯದ ಮೂಲವನ್ನು ಹೊಂದಲಿರುವಿರಿ.

ಇದನ್ನೂ ಓದಿ-Bank Opening Hours Changed: ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ ! ಬ್ಯಾಂಕ್ ವೇಳಾಪಟ್ಟಿಯಲ್ಲಿ ಬದಲಾವಣೆ, ಇಲ್ಲಿದೆ ಹೊಸ ಟೈಮಿಂಗ್

10-30 ವರ್ಷಗಳ ಮೆಚುರಿಟಿಯನ್ನು ಹೊಂದಿರುವ ದೀರ್ಘಾವಧಿಯ ಬಾಂಡ್‌ಗಳು ಸಹ ಇವೆ, ಇದರಿಂದ ನೀವು ಉತ್ತಮ ಲಾಭವನ್ನು ಗಳಿಸಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್ ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿದ್ದು, ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಕಾರ್ಯಕ್ಷಮತೆಯೂ ಉತ್ತಮವಾಗಿದೆ. ಬ್ಯಾಂಕಿನ ಲಾಭವು ವರ್ಷದಿಂದ ವರ್ಷಕ್ಕೆ ಶೇ.23 ರಷ್ಟು ಏರಿಕೆಯಾಗಿದ್ದು, 10,055 ಕೋಟಿ ರೂ.ಗಳಷ್ಟಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News