Bank Opening Hours Changed - ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಹೌದು, ಇದೀಗ ಬ್ಯಾಂಕ್‌ಗೆ ಸಂಬಂಧಿಸಿದ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ 1 ಗಂಟೆ ಹೆಚ್ಚುವರಿ ಸಮಯಾವಕಾಶ ಸಿಗಲಿದೆ. ಏಪ್ರಿಲ್ 18, 2022 ರಿಂದ ಜಾರಿಗೆ ಬರುವಂತೆ ಆರ್‌ಬಿಐ ಮಾರುಕಟ್ಟೆಯ ವಹಿವಾಟಿನ ಸಮಯದಿಂದ ಬ್ಯಾಂಕ್‌ಗೆ ಸಮಯವನ್ನು ಬದಲಾಯಿಸಿದೆ. 4 ದಿನಗಳ ಬ್ಯಾಂಕ್ ಮುಚ್ಚುವಿಕೆಯ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ, ಏಪ್ರಿಲ್ 18, 2022 ರಿಂದ ಬ್ಯಾಂಕುಗಳ ತೆರೆಯುವ ಸಮಯವನ್ನು ಬದಲಾಯಿಸಿದೆ. ಸೋಮವಾರದಿಂದ ಬೆಳಗ್ಗೆ 9 ಗಂಟೆಗೆ ಬ್ಯಾಂಕ್‌ಗಳು ತೆರೆಯಲಿವೆ.
ಹೊಸ ವ್ಯವಸ್ಥೆ ಜಾರಿಗೆ ತಂದ ಆರ್‌ಬಿಐ
ಆದರೆ, ಬ್ಯಾಂಕ್‌ಗಳ ಮುಚ್ಚುವ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅದರಂತೆ, ಬ್ಯಾಂಕ್‌ಗಳ ಕಾರ್ಯನಿರ್ವಹಣೆಗೆ ಇನ್ನೂ ಒಂದು ಗಂಟೆಯನ್ನು ಸೇರಿಸಲಾಗಿದೆ. ಗಮನಾರ್ಹವಾಗಿ, ಈ ಹಿಂದೆ ಕರೋನಾ ಸೋಂಕಿನ ಹಿನ್ನೆಲೆ ದಿನದಲ್ಲಿ ಬ್ಯಾಂಕ್‌ಗಳ ತೆರೆಯುವ ಸಮಯವನ್ನು ಕಡಿಮೆ ಮಾಡಲಾಗಿತ್ತು. ಆದರೆ ಇದೀಗ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ, RBI ಈ ಹೊಸ ವ್ಯವಸ್ಥೆಯನ್ನು 18 ಏಪ್ರಿಲ್ 2022 ರಿಂದ ಜಾರಿಗೆ ತರುತ್ತಿದೆ.
ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ಬಾಕಿ DA ಕುರಿತು ಬಿಗ್ ಅಪ್ಡೇಟ್ ಪ್ರಕಟ
ಮಾರುಕಟ್ಟೆಯ ವಹಿವಾಟಿನ ಸಮಯವೂ ಬದಲಾಗಿದೆ
ಬದಲಾದ ಸಮಯದೊಂದಿಗೆ ವಿದೇಶಿ ವಿನಿಮಯ ಮಾರುಕಟ್ಟೆ ಮತ್ತು ಸರ್ಕಾರಿ ಸೆಕ್ಯುರಿಟಿಗಳಲ್ಲಿನ ವಹಿವಾಟುಗಳು ಇದೀಗ ಸಾಧ್ಯವಾಗಲಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 18 ಏಪ್ರಿಲ್ 2022 ರಿಂದ ಜಾರಿಗೆ ಬರುವಂತೆ, ಆರ್‌ಬಿಐ ನಿಯಂತ್ರಿತ ಮಾರುಕಟ್ಟೆಗಳಾದ ಫೋರೆಕ್ಸ್ ಉತ್ಪನ್ನಗಳು, ರೂಪಾಯಿ ಬಡ್ಡಿ ದರದ ಉತ್ಪನ್ನಗಳು, ಕಾರ್ಪೊರೇಟ್ ಬಾಂಡ್‌ಗಳಲ್ಲಿನ ರೆಪೊ ಇತ್ಯಾದಿ. ವಿದೇಶಿ ವಿನಿಮಯಕ್ಕಾಗಿ (ಎಫ್‌ಸಿವೈ)/ ಭಾರತೀಯ ರೂಪಾಯಿ (ಐಎನ್‌ಆರ್) ವಹಿವಾಟುಗಳು ಅವುಗಳ ಕೋವಿಡ್-ಪೂರ್ವ ಸಮಯದ ಬದಲಿಗೆ ಅಂದರೆ. 10 AM ಗಂಟೆಯ ಬದಲಿಗೆ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಲಿವೆ.
ಇದನ್ನೂ ಓದಿ-SBI: ಕನಸಿನ ಮನೆ ಹೊಂದಲು ಬಯಸುವವರಿಗೊಂದು ಸಂತಸದ ಸುದ್ದಿ
ಹಳೆಯ ವ್ಯವಸ್ಥೆ ಮತ್ತೆ ಅನ್ವಯ
ಗಮನಾರ್ಹವಾಗಿ, 2020 ರಲ್ಲಿ ಕರೋನಾ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ, ಆರ್‌ಬಿಐ ಏಪ್ರಿಲ್ 7 ರಂದು ಮಾರುಕಟ್ಟೆಯ ವಹಿವಾಟಿನ ಸಮಯವನ್ನು ಬದಲಾಯಿಸಿತ್ತು. ಮಾರುಕಟ್ಟೆಯ ಸಮಯವನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ಕ್ಕೆ ಬದಲಾಯಿಸಲಾಗಿತ್ತು, ವ್ಯಾಪಾರದ ಸಮಯವನ್ನು ಅರ್ಧ ಘಂಟೆಯಷ್ಟು ಕಡಿಮೆಗೊಳಿಸಲಾಗಿತ್ತು. ಆದರೆ ಇದೀಗ ಪರಿಸ್ಥಿತಿಗಳು ಸಹಜ ಸ್ಥಿತಿಯತ್ತ ಮರಳಿದ್ದು, ಈಗ ಆರ್‌ಬಿಐ ಹಳೆಯ ವೇಳಾಪಟ್ಟಿಯನ್ನು ಮರು ಜಾರಿಗೊಳಿಸುತ್ತಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.