Indian Railways: ರೈಲ್ವೆ ಇಲಾಖೆಯ ಪ್ರಮುಖ ಹುದ್ದೆಗಳಿಗೆ ‘EQ’ ಪರೀಕ್ಷೆ ಕಡ್ಡಾಯ..!

ಹೊಸ ನೇಮಕಾತಿ ಅಧಿಸೂಚನೆಯ ಪ್ರಕಾರ ಭಾರತೀಯ ರೈಲ್ವೆ ಇಲಾಖೆಯ 36 ಪ್ರಮುಖ ಹುದ್ದೆಗಳಿಗೆ EQ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.

Written by - Puttaraj K Alur | Last Updated : Jun 27, 2022, 06:02 PM IST
  • ಭಾರತೀಯ ರೈಲ್ವೆ ಇಲಾಖೆಯ 36 ಪ್ರಮುಖ ಹುದ್ದೆಗಳಿಗೆ ‘ಇಕ್ಯೂ’ ಟೆಸ್ಟ್ ಕಡ್ಡಾಯ
  • ಅಧ್ಯಕ್ಷರು, ಸದಸ್ಯರು ಅಥವಾ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಧಿಕಾರಿಗಳಿಗೆ ‘ಇಕ್ಯೂ’ ಟೆಸ್ಟ್
  • 15-20 ನಿಮಿಷಗಳ ಆನ್‌ಲೈನ್ ಪರೀಕ್ಷೆಯಲ್ಲಿ ವ್ಯಕ್ತಿತ್ವ ಮತ್ತು ಫಿಟ್ನೆಸ್ ನಿರ್ಣಯಿಸಲು ಕ್ರಮ
Indian Railways: ರೈಲ್ವೆ ಇಲಾಖೆಯ ಪ್ರಮುಖ ಹುದ್ದೆಗಳಿಗೆ ‘EQ’ ಪರೀಕ್ಷೆ ಕಡ್ಡಾಯ..! title=
36 ಪ್ರಮುಖ ಹುದ್ದೆಗಳಿಗೆ ‘ಇಕ್ಯೂ’ ಟೆಸ್ಟ್ ಕಡ್ಡಾಯ

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ 36 ಪ್ರಮುಖ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಧಿಕಾರಿಗಳಿಗೆ EQ ಅಂದರೆ ‘ಭಾವನಾತ್ಮಕ ಬುದ್ಧಿಮತ್ತೆ’ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಇನ್ನು ಮುಂದೆ ಅಧ್ಯಕ್ಷರು, ಸದಸ್ಯರು ಅಥವಾ ಜನರಲ್ ಮ್ಯಾನೇಜರ್ ಸೇರಿ 36ಕ್ಕೂ ಹೆಚ್ಚಿನ ಪ್ರಮುಖ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಧಿಕಾರಿಗಳು ‘ಎಮೋಷನಲ್ ಕ್ವಾಟಿಯಂಟ್’(EQ) ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕೆಂದು ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕಳೆದ ತಿಂಗಳು ತಿಳಿಸಲಾದ ನಮ್ಮ ಹೊಸ ಎಂಪನೆಲ್‌ಮೆಂಟ್ ಪ್ರಕ್ರಿಯೆಯ ಭಾಗವಾಗಿ 36 ಉನ್ನತ ರೈಲ್ವೆ ಹುದ್ದೆಗಳಿಗೆ ಆಯ್ಕೆ ಮಾಡಲು ಇಕ್ಯೂ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ರೈಲ್ವೆ ಅಧಿಕಾರಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಇದು ಸುಮಾರು 15-20 ನಿಮಿಷಗಳ ಆನ್‌ಲೈನ್ ಪರೀಕ್ಷೆಯಾಗಿರುತ್ತದೆ. ವ್ಯಕ್ತಿತ್ವ ಮತ್ತು ಫಿಟ್ನೆಸ್ ನಿರ್ಣಯಿಸಲು ಈ ಪರೀಕ್ಷಾ ಪದ್ಧತಿಯನ್ನು ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: New Wage Code : ಉದ್ಯೋಗಿಗಳಿಗೆ ಬಿಗ್ ನ್ಯೂಸ್ : ಜು.1 ರಿಂದ ವಾರದಲ್ಲಿ 3 ದಿನ ರಜೆ, ಪಿಎಫ್‌ನಲ್ಲಿ ಬದಲಾವಣೆ!

ಜನರಲ್ ಮ್ಯಾನೇಜರ್‌ಗಳ 12 ಖಾಲಿ ಹುದ್ದೆಗಳ ಭರ್ತಿಗೆ ಸದ್ಯದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಈ ನೇಮಕಾತಿ ವೇಳೆ ರೈಲ್ವೆ ಅಧಿಕಾರಿಗಳನ್ನು ‘ಎಮೋಷನಲ್‌ ಕೋಷಂಟ್‌’(ಭಾವನಾತ್ಮಕ ಬುದ್ಧಿಮತ್ತೆ) ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆನ್‌ಲೈನ್‌ ಮೂಲಕ ಈ ಪರೀಕ್ಷೆ ನಡೆಯಲಿದೆ ಎಂದು ತಿಳಿದುಬಂದಿದೆ.

ಅಂಕಗಳ ಆಧಾರದಲ್ಲಿ ಕೆಲಸ

ಮುಖ್ಯಸ್ಥ, ಸದಸ್ಯ ಅಥವಾ ಪ್ರಧಾನ ವ್ಯವಸ್ಥಾಪಕ(ಜಿಎಂ) ಸೇರಿದಂತೆ 36 ಪ್ರಮುಖ ಹುದ್ದೆಗಳ ನೇಮಕಾತಿಗೆ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳನ್ನು ಆಧರಿಸಿ, ಅಧಿಕಾರಿಗಳಿಗೆ ಕಾರ್ಯಾಚರಣಾ ವಿಭಾಗದಲ್ಲಿ ನೇಮಕ ಮಾಡಬೇಕೇ, ಆಡಳಿತಾತ್ಮಕ ಕೆಲಸ ನೀಡಬೇಕೇ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಮುಂದಿನ ದಿನಗಳಲ್ಲಿ ಡಿಆರ್‌ಎಂಗಳ ನೇಮಕದಲ್ಲೂ ಇದೇ ನಿಯಮವನ್ನು ಜಾರಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮಾರ್ಗಸೂಚಿಗಳ ಪ್ರಕಾರEQ ಪರೀಕ್ಷೆಯನ್ನು 5 ವಿಭಿನ್ನ ಮಾಪಕಗಳಲ್ಲಿ ಅಧಿಕಾರಿಯ ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡಲು ಬಳಸಲಾಗುತ್ತದೆ. ಈ ಪೈಕಿ ಸ್ವಯಂ-ಗ್ರಹಿಕೆ (ಒಬ್ಬರ ಸಾಮರ್ಥ್ಯ, ದೌರ್ಬಲ್ಯಗಳು, ಮಹತ್ವಾಕಾಂಕ್ಷೆಗಳು, ಇತ್ಯಾದಿಗಳ ಅರಿವು), ಸ್ವಯಂ ಅಭಿವ್ಯಕ್ತಿ (ಆಕ್ರಮಣಶೀಲತೆ, ಸ್ವತಂತ್ರ ಚಿಂತನೆ, ಇತ್ಯಾದಿ.), ಪರಸ್ಪರ ಕೌಶಲ್ಯಗಳು, ನಿರ್ಧಾರ ಮಾಡುವಿಕೆ ಮತ್ತು ಒತ್ತಡ ನಿರ್ವಹಣೆ ಮಾಪಕಗಳಲ್ಲಿ ಅಧಿಕಾರಿಯ ವ್ಯಕ್ತಿತ್ವವನ್ನು ಅಳೆಯಲಾಗುತ್ತದೆ.

ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ, ವೇತನದಲ್ಲಿ 40 ಸಾವಿರ ರೂ.ಗಳವರೆಗೆ ಹೆಚ್ಚಳ!

ಅಧಿಕೃತ ಅಂಕಿಅಂಶಗಳ ಪ್ರಕಾರ, ಭಾರತೀಯ ರೈಲ್ವೆಯಲ್ಲಿ 1.2 ಮಿಲಿಯನ್ ಜನರು ಉದ್ಯೋಗದಲ್ಲಿದ್ದಾರೆ. ಆದರೆ ಈಗಿನಂತೆ ಅದರ 36 ಉನ್ನತ ವ್ಯವಸ್ಥಾಪಕರು ಮಾತ್ರ EQ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News