RBI Currency Update: ಇನ್ಮುಂದೆ ನೋಟುಗಳ ಮೇಲೆ ಮಹಾತ್ಮಾ ಗಾಂಧಿ ಛಾಯಾಚಿತ್ರ ಇರುವುದಿಲ್ಲವೇ? ಆರ್ಬಿಐ ಹೇಳಿದ್ದೇನು?

RBI Currency Update:  ಭಾರತೀಯ ನೋಟುಗಳಲ್ಲಿ ಈ ಮಹತ್ವದ ಬದಲಾವಣೆಯಾಗಲಿದೆಯಾ? ಏನಿದರ ಹಿಂದಿನ ನಿಜಾಂಶ? ಭಾರತೀಯ ರಿಸರ್ವ್ ಬ್ಯಾಂಕ್ ಈ ಕುರಿತು ನೀಡಿರುವ ಸ್ಪಷ್ಟೀಕರಣವಾದರೂ ಏನು? ತಿಳಿದುಕೊಳ್ಳೋಣ ಬನ್ನಿ  

Written by - Nitin Tabib | Last Updated : Jun 6, 2022, 07:02 PM IST
  • ಭಾರತೀಯ ನೋಟುಗಳಲ್ಲಿ ಈ ಮಹತ್ವದ ಬದಲಾವಣೆಯಾಗಲಿದೆಯಾ?
  • ಏನಿದರ ಹಿಂದಿನ ನಿಜಾಂಶ?
  • ಭಾರತೀಯ ರಿಸರ್ವ್ ಬ್ಯಾಂಕ್ ಈ ಕುರಿತು ನೀಡಿರುವ ಸ್ಪಷ್ಟೀಕರಣವಾದರೂ ಏನು?
RBI Currency Update: ಇನ್ಮುಂದೆ ನೋಟುಗಳ ಮೇಲೆ ಮಹಾತ್ಮಾ ಗಾಂಧಿ ಛಾಯಾಚಿತ್ರ ಇರುವುದಿಲ್ಲವೇ? ಆರ್ಬಿಐ ಹೇಳಿದ್ದೇನು? title=
Indian Currency Update

RBI Currency Update:  ಭಾರತೀಯ ಕರೆನ್ಸಿ ಮೇಲೆ ಮುದ್ರಿಸಲಾಗಿರುವ ಚಿತ್ರವನ್ನು ಬದಲಾಯಿಸಲಾಗುತ್ತಿದೆ ಎಂಬ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಗ್ಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ನೋಟುಗಳ ಮೇಲಿರುವ ಮಹಾತ್ಮಾ ಗಾಂಧಿಯವರ ಛಾಯಾಚಿತ್ರ ಇನ್ಮುಂದೆ ಕಾಣಿಸುವುದಿಲ್ಲ ಎಂಬ ಸುದ್ದಿ ಇದೀಗ ವೈರಲ್ ಆಗುತ್ತಿದೆ. ಆದೆ, ಈ ಸುದ್ದಿಯಲ್ಲಿ ಎಷ್ಟು ನಿಜಾಂಶವಿದೆ ಎಂಬುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಬ್ಯಾಂಕ್ ಹೇಳಿಕೆಯೊಂದನ್ನು ನೀಡಿದೆ. 

ಇದನ್ನೂ ಓದಿ-Scheme For Higher Return: ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ, ತಿಂಗಳಿಗೆ 50,000 ನಿಯಮಿತ ಆದಾಯ ಪಡೆಯಬಹುದು

ವಾಸ್ತವದಲ್ಲಿ ಆರ್ಬಿಐ ನೋಟುಗಳ ಮೇಲಿರುವ ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ಬದಲಾಯಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳಿ ವರದಿಯನ್ನು ತಳ್ಳಿಹಾಕಿದೆ. ಇದಕ್ಕೂ ಮೊದಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ಬದಲಾಯಿಸಬಹುದು ಎಂದು ಕೆಲ ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು ಎಂದು ಆರ್ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಕುರಿತು ವೈರಲ್ ಆಗಿರುವ ಪೋಸ್ಟ್ ನಲ್ಲಿ ಕೇಂದ್ರೀಯ ಬ್ಯಾಂಕ್ ಈಗಿರುವ ನೋಟು ಮತ್ತು ಅದರ ಮೇಲಿರುವ ಭಾವಚಿತ್ರದ ಜಾಗದಲ್ಲಿ ಬೇರೆಯವರ ಚಿತ್ರ ಬಳಸುವ ಪ್ರಸ್ತಾವನೆಯನ್ನು ಪರಿಗಣಿಸುತ್ತದೆ ಎಂದು ಹಲಲಾಗಿತ್ತು. ಆದರೆ, ರಿಸರ್ವ್ ಬ್ಯಾಂಕ್ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಷ್ಟೇ ಅಲ್ಲ ಅಂತಹ ಯಾವುದೇ ಕ್ರಮವನ್ನು ಬ್ಯಾಂಕ್ ಕೈಗೊಳ್ಳುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೆ ವೇತನದಲ್ಲಿ ಸಿಗಲಿದೆ ಹೆಚ್ಚುವರಿ 30,000 ರೂ.ಗಳ ಲಾಭ! ಈ ಷರತ್ತು ಪೂರೈಸಬೇಕು

ರವಿಂದ್ರನಾಥ್ ಟ್ಯಾಗೋರ್ ಮತ್ತು ಎಪಿಜೆ ಅಬ್ದುಲ್ ಕಲಾಮ್ ಸೇರಿದಂತೆ ಇತರೆ ಪಮುಖ ಭಾರತೀಯರ ಭಾವಚಿತ್ರಗಳನ್ನು ಕೆಲ ಮುಖಬೆಲೆಯ ನೋಟುಗಳ ಮೇಲೆ ಮುದ್ರಿಸುವ ಪ್ರಸ್ತಾವನೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಮತ್ತು ಆರ್ಬಿಐ ಪರಿಗಣಿಸುತ್ತಿವೆ ಎಂದು ಇತ್ತೀಚಿಗೆ ಕೆಲ ಸುದ್ದಿಗಳಲ್ಲಿ ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಆಗ್ಗಾಗ ಇಂತಹ ಪೋಸ್ಟ್ ಗಳು ಹರಿದಾಡುತ್ತಲೇ ಇರುತ್ತವೆ. ಆದರೆ, ಆರ್ಬಿಐ ಇದೀಗ ಅಂತಹ ವರದಿಗಳು ಮತ್ತು ಪೋಸ್ಟ್ ಗಳನ್ನು ತಳ್ಳಿಹಾಕಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News