ಈ ಯೋಜನೆಯಲ್ಲಿ 417 ರೂ. ಹೂಡಿದರೆ ಸಾಕು , ಪೋಸ್ಟ್ ಆಫೀಸ್ ನೀಡುತ್ತಿದೆ ಕೋಟ್ಯಾಧಿಪತಿಯಾಗುವ ಅವಕಾಶ..!

ನೀವು ಈ ಯೋಜನೆಯಿಂದ ಮಿಲಿಯನೇರ್ ಆಗಲು ಬಯಸಿದರೆ,  15 ವರ್ಷಗಳ ನಂತರ 5-5 ವರ್ಷದಂತೆ ಎರಡು ಬಾರಿ ಈ ಯೋಜನೆಯ ಮೇಲಿನ ಹೂಡಿಕೆಯನ್ನು ವಿಸ್ತರಿಸಬಹುದು.

Written by - Ranjitha R K | Last Updated : Sep 15, 2021, 06:30 PM IST
  • ಪ್ರತಿದಿನ ಈ ಖಾತೆಯಲ್ಲಿ 417 ರೂ.ಗಳನ್ನು ಹೂಡಿಕೆ ಮಾಡಬೇಕು
  • ಈ ಖಾತೆಯ ಮುಕ್ತಾಯ ಅವಧಿಯು 15 ವರ್ಷಗಳು.
  • 5-5 ವರ್ಷಗಳವರೆಗೆ ಎರಡು ಬಾರಿ ವಿಸ್ತರಿಸಬಹುದು.
ಈ ಯೋಜನೆಯಲ್ಲಿ  417 ರೂ. ಹೂಡಿದರೆ ಸಾಕು , ಪೋಸ್ಟ್ ಆಫೀಸ್ ನೀಡುತ್ತಿದೆ ಕೋಟ್ಯಾಧಿಪತಿಯಾಗುವ ಅವಕಾಶ..! title=
ಪ್ರತಿದಿನ ಈ ಖಾತೆಯಲ್ಲಿ 417 ರೂ.ಗಳನ್ನು ಹೂಡಿಕೆ ಮಾಡಬೇಕು (file photo)

ನವದೆಹಲಿ : ಅಂಚೆ ಇಲಾಖೆಯ ಸಾರ್ವಜನಿಕ ಭವಿಷ್ಯ ನಿಧಿ ( Post office ppf) ಕೋಟ್ಯಾಧಿಪತಿಯಾಗುವ ಅವಕಾಶವನ್ನು ನೀಡುತ್ತದೆ. ಪ್ರತಿದಿನ ಈ ಖಾತೆಯಲ್ಲಿ 417 ರೂ.ಗಳನ್ನು ಹೂಡಿಕೆ ಮಾಡಬೇಕು. ಈ ಖಾತೆಯ ಮುಕ್ತಾಯ ಅವಧಿಯು 15 ವರ್ಷಗಳು. ಆದರೆ ನೀವು ಅದನ್ನು 5-5 ವರ್ಷಗಳವರೆಗೆ ಎರಡು ಬಾರಿ ವಿಸ್ತರಿಸಬಹುದು. ಇದರೊಂದಿಗೆ, ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿ ಕೂಡಾ ಸಿಗಲಿದೆ.   ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಯೋಜನೆಯಲ್ಲಿ ವಾರ್ಷಿಕವಾಗಿ 7.1 ಶೇಕಡಾ ಬಡ್ಡಿಯನ್ನು ಪಡೆಯಬಹುದು. 

ಪೋಸ್ಟ್ ಆಫೀಸ್ PPF ಖಾತೆ : 
ಇದರಲ್ಲಿ 15 ವರ್ಷಗಳವರೆಗೆ, ಅಂದರೆ ಮುಕ್ತಾಯವಾಗುವವರೆಗೆ ಮತ್ತು ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂ. ಅಂದರೆ ತಿಂಗಳಿಗೆ 12500 ರೂ. ದಿನಕ್ಕೆ 417 ರೂ.ಗಳನ್ನು ಠೇವಣಿ ಮಾಡಿದರೆ, ಒಟ್ಟು  22.50 ಲಕ್ಷ ರೂ. ಹೂಡಿಕೆ ಮಾಡಿದಂತೆ ಆಗುತ್ತದೆ. ಈ ಯೋಜನೆಯ ಮುಕ್ತಾಯದ ಸಮಯದಲ್ಲಿ, 7.1%ವಾರ್ಷಿಕ ಬಡ್ಡಿಯೊಂದಿಗೆ (Interest) ಕಂಪೌಂಡಿಂಗ್  ಲಾಭ ಕೂಡಾ ಸಿಗಲಿದೆ.  ಈ ಯೋಜನೆಯ ಮುಕ್ತಾಯದ ಸಮಯದಲ್ಲಿ, 18.18 ಲಕ್ಷ ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯಬಹುದು. ಇದರರ್ಥ ಒಟ್ಟು  40.68 ಲಕ್ಷ ರೂಪಾಯಿಗಳು  ಸಿಗಲಿವೆ. 

ಇದನ್ನೂ ಓದಿ : ನಿಮ್ಮ ಕಾರು ಅಥವಾ ಬೈಕ್ 2019 ಕ್ಕಿಂತ ಮೊದಲು ಖರೀದಿಸಿದ್ದಾ ? ಹಾಗಿದ್ದರೆ ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮುಗಿಸಿ, ದಂಡ ತಪ್ಪಿಸಿಕೊಳ್ಳಿ

ಕೋಟ್ಯಾಧಿಪತಿಯಾಗುವುದು ಹೇಗೆ?
ನೀವು ಈ ಯೋಜನೆಯಿಂದ ಮಿಲಿಯನೇರ್ ಆಗಲು ಬಯಸಿದರೆ,  15 ವರ್ಷಗಳ ನಂತರ 5-5 ವರ್ಷದಂತೆ ಎರಡು ಬಾರಿ ಈ ಯೋಜನೆಯ (Post office scheme) ಮೇಲಿನ ಹೂಡಿಕೆಯನ್ನು ವಿಸ್ತರಿಸಬಹುದು. ವಾರ್ಷಿಕವಾಗಿ 1.5 ಲಕ್ಷ ಹೂಡಿಕೆ ಮಾಡುವ ಮೂಲಕ, ಒಟ್ಟು ಹೂಡಿಕೆ 37.50 ಲಕ್ಷ ರೂ ಆಗಿರುತ್ತದೆ. ಮುಕ್ತಾಯದ ನಂತರ, 7.1 ಶೇಕಡಾ ಬಡ್ಡಿದರದೊಂದಿಗೆ 65.58 ಲಕ್ಷ   ಪಡೆಯಬಹುದು. ಅಂದರೆ, 25 ವರ್ಷಗಳ ನಂತರ ಕೈ ಸೇರುವ ಒಟ್ಟು ನಿಧಿ 1.03 ಕೋಟಿ ರೂ. ಆಗಿರುತ್ತದೆ.

ಯಾರು ಪಿಪಿಎಫ್ ಖಾತೆಯನ್ನು ತೆರೆಯಬಹುದು ?
-ವೇತನದಾರರು, ಸ್ವಯಂ ಉದ್ಯೋಗಿಗಳು, ಪಿಂಚಣಿದಾರರು (Pensioner) ಸೇರಿದಂತೆ ಯಾವುದೇ ನಿವಾಸಿಗಳು ಅಂಚೆ ಕಚೇರಿಯ ಪಿಪಿಎಫ್‌ನಲ್ಲಿ ಖಾತೆ ತೆರೆಯಬಹುದು.
-ಒಬ್ಬ ವ್ಯಕ್ತಿ ಮಾತ್ರ ಈ ಖಾತೆಯನ್ನು ತೆರೆಯಬಹುದು. ಇದರಲ್ಲಿ ಜಂಟಿ ಖಾತೆಯನ್ನು (Joint account) ತೆರೆಯಲು ಸಾಧ್ಯವಿಲ್ಲ.
-ಅಪ್ರಾಪ್ತ ಮಗುವಿನ ಪರವಾಗಿ ಪೋಷಕರು ಅಂಚೆ ಕಚೇರಿಯಲ್ಲಿ ಪಿಪಿಎಫ್ (PPF) ಖಾತೆಯನ್ನು ತೆರೆಯಬಹುದು.
-ಅನಿವಾಸಿ ಭಾರತೀಯರು ಅದರಲ್ಲಿ ಖಾತೆ ತೆರೆಯಲು ಸಾಧ್ಯವಿಲ್ಲ. ಪಿಪಿಎಫ್ ಖಾತೆಯ ಮುಕ್ತಾಯಕ್ಕೆ ಮುನ್ನವೇ ಭಾರತೀಯರು ಅನಿವಾಸಿ ಭಾರತೀಯರಾಗಿದ್ದರೆ, ಅವರು ಮೆಚ್ಯೂರಿಟಿ ತನಕ ಖಾತೆಯನ್ನು ನಿರ್ವಹಿಸಬಹುದು. 

ಇದನ್ನೂ ಓದಿ : ಅಕ್ಟೋಬರ್ 1 ರಿಂದ ಪ್ರಯೋಜನಕ್ಕಿಲ್ಲ ಹಳೆಯ ಚೆಕ್ ಬುಕ್ , ಈ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದರೆ ತಕ್ಷಣ ಬ್ಯಾಂಕ್ ಅನ್ನು ಸಂಪರ್ಕಿಸಿ

ಅಂಚೆ ಕಚೇರಿಯ ಪಿಪಿಎಫ್ ಖಾತೆಯ ಅಗತ್ಯ ದಾಖಲೆಗಳು :
ಗುರುತಿನ ಪುರಾವೆ - ವೋಟರ್ ಐಡಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಆಧಾರ್ ಕಾರ್ಡ್ (Aadhaar Card)
ವಿಳಾಸ ಪುರಾವೆ - ವೋಟರ್ ಐಡಿ (Voter Id), ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಆಧಾರ್ ಕಾರ್ಡ್
ಪಾನ್ ಕಾರ್ಡ್
ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ
ದಾಖಲಾತಿ ಫಾರ್ಮ್  -ಫಾರ್ಮ್ ಇ

ಅಂಚೆ ಕಚೇರಿ PPF ಖಾತೆಯ ವೈಶಿಷ್ಟ್ಯಗಳು :
1. ಒಂದು ಹಣಕಾಸು ವರ್ಷದಲ್ಲಿ ಪಿಪಿಎಫ್ ಖಾತೆಯಲ್ಲಿ (PPF account) ಗರಿಷ್ಠ ಠೇವಣಿ 1.5 ಲಕ್ಷ ರೂ. ಹೂಡಿಕೆ ಮಾಡಬಹುದು 
2. ಪೋಸ್ಟ್ ಆಫೀಸ್ PPF ನಲ್ಲಿನ ಠೇವಣಿಗಳ ಸಂಖ್ಯೆಯು ವರ್ಷಕ್ಕೆ 12 ಕ್ಕೆ ಸೀಮಿತವಾಗಿದೆ.
3. ಪಿಪಿಎಫ್ ಒಂದು ಇಇಇ ಹೂಡಿಕೆಯಾಗಿದೆ ಅಂದರೆ ಹೂಡಿಕೆ ಮಾಡಿದ ಪ್ರಮುಖ ಮೊತ್ತ, ಬಡ್ಡಿ ಗಳಿಕೆ ಮತ್ತು ಮುಕ್ತಾಯದ ಮೊತ್ತ ಎಲ್ಲವೂ ತೆರಿಗೆ ಮುಕ್ತವಾಗಿರುತ್ತದೆ.
4. ಖಾತೆಯನ್ನು ಸಕ್ರಿಯವಾಗಿಡಲು ಕನಿಷ್ಠ ವಾರ್ಷಿಕ ಹೂಡಿಕೆ 500 ರೂ ಆಗಿರುತ್ತದೆ.
5. ಪೋಸ್ಟ್ ಆಫೀಸ್ ಪಿಪಿಎಫ್ ಖಾತೆಯ ಬಡ್ಡಿಯನ್ನು ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ ಮತ್ತು ಪ್ರತಿ ವರ್ಷ ಮಾರ್ಚ್ 31 ರಂದು ಪಾವತಿಸಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News