ನಿಮ್ಮ ಬಳಿ 2 ರೂಪಾಯಿಯ ಈ ನಾಣ್ಯ ಇದ್ದರೆ ಕುಳಿತಲ್ಲೇ ಗಳಿಸಬಹುದು 5 ಲಕ್ಷ ರೂಪಾಯಿ

ವಸ್ತುಗಳು ಹಳೆಯದಾದಂತೆ ಆಂಟಿಕ್ ಪೀಸ್‌ ವರ್ಗಕ್ಕೆ  ಸೇರುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂತಹ ಪುರಾತನ ವಸ್ತುಗಳಿಗೆ ಸಾಕಷ್ಟು ಬೇಡಿಕೆಯಿದೆ.

Written by - Ranjitha R K | Last Updated : Jan 26, 2022, 04:36 PM IST
  • ಅನೇಕ ಜನರು ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಲು ಇಷ್ಟಪಡುತ್ತಾರೆ
  • ಹಳೆ ವಸ್ತುಗಳನ್ನು ಖರೀದಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ
  • 2 ರೂಪಾಯಿಯ ನಾಣ್ಯದ ಬದಲಿಗೆ ಗಳಿಸಬಹುದು ಲಕ್ಷ ಲಕ್ಷ ರೂಪಾಯಿ
ನಿಮ್ಮ ಬಳಿ 2 ರೂಪಾಯಿಯ ಈ ನಾಣ್ಯ ಇದ್ದರೆ ಕುಳಿತಲ್ಲೇ ಗಳಿಸಬಹುದು  5 ಲಕ್ಷ ರೂಪಾಯಿ  title=
2 ರೂಪಾಯಿಯ ನಾಣ್ಯದ ಬದಲಿಗೆ ಗಳಿಸಬಹುದು ಲಕ್ಷ ಲಕ್ಷ ರೂಪಾಯಿ (file photo)

ನವದೆಹಲಿ : ಹಣ ಗಳಿಸುವುದು ಅಷ್ಟು ಸುಲಭದ ಮಾತ್ರವಲ್ಲ. ಒಂದೊಂದು ಪೈಸೆ ಸಂಪಾದಿಸಬೇಕಾದರೂ ಬೆವರು ಸುರಿಸಬೇಕಾಗುತ್ತದೆ. ಆದರೆ, ಏನೂ ಶ್ರಮವಿಲ್ಲದೆ, ಲಕ್ಷ ಲಕ್ಷ ಗಳಿಕೆಯ ಮಾರ್ಗವೊಂದಿದೆ. ಇದರಲ್ಲಿ ಮನೆಯಲ್ಲಿಯೇ ಕುಳಿತುಕೊಂಡೇ ಹಣ ಗಳಿಸುವುದು ಸಾಧ್ಯವಾಗುತ್ತದೆ.   

ಹಳೆಯ ವಸ್ತುಗಳಿಗೂ ಇರುತ್ತದೆ ಸಾಕಷ್ಟು ಬೇಡಿಕೆ : 
ವಸ್ತುಗಳು ಹಳೆಯದಾದಂತೆ ಆಂಟಿಕ್ ಪೀಸ್‌ ವರ್ಗಕ್ಕೆ  ಸೇರುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂತಹ ಪುರಾತನ ವಸ್ತುಗಳಿಗೆ ಸಾಕಷ್ಟು ಬೇಡಿಕೆಯಿದೆ. ಈ ಪುರಾತನ ವಸ್ತುಗಳ ಬದಲಿಗೆದೊಡ್ಡ ಮೊತ್ತದ ಹಣವನ್ನು ಗಳಿಸಬಹುದು.  ಇನ್ನು ಹಳೆಯ ನಾಣ್ಯಗಳು (Old Coin sale) ಅಥವಾ ನೋಟುಗಳನ್ನು ಸಂಗ್ರಹಿಸುವ ಅಭ್ಯಾಸವಿದ್ದರೆ, ನೀವು ಕೂಡಾ ಮಿಲಿಯನೇರ್ ಆಗಬಹುದು. 

ಇದನ್ನೂ ಓದಿ : Aadhaar Update:ಕೇವಲ ಒಂದು ಲಿಂಕ್‌ನಿಂದ ಆಧಾರ್ ಕಾರ್ಡ್‌ನಲ್ಲಿ DOB ಬದಲಾಯಿಸಿ

ನಿಮ್ಮನ್ನು ಲಕ್ಷಾಧೀಶರನ್ನಾಗಿ ಮಾಡಬಹುದು ಈ ನಾಣ್ಯ :
ನಿಮ್ಮ ಪಿಗ್ಗಿ ಬ್ಯಾಂಕ್ ಅಥವಾ ಪರ್ಸ್‌ನಲ್ಲಿ 1994 ರ ಸರಣಿಯ 2 ರೂಪಾಯಿಗಳ (2 rupee coin sale) ನಾಣ್ಯವಿದ್ದರೆ, ಈ ನಾಣ್ಯದ ಬದಲಿಗೆ ತಕ್ಷಣವೇ 5 ಲಕ್ಷ ರೂಪಾಯಿಗಳನ್ನು ಗಳಿಸುವುದು ಸಾಧ್ಯವಾಗುತ್ತದೆ. ಯಾಕೆಂದರೆ ಈ ನಾಣ್ಯಗಳಿಗೆ ಬಹಳ ಬೇಡಿಕೆಯಿದೆ. ಈ ನಾಣ್ಯ ಹಿಂಭಾಗದಲ್ಲಿ ವಿಶ್ವ ಆಹಾರ ದಿನದ ಸಂದರ್ಭದಲ್ಲಿ ಮಾಡಿದ ವಿನ್ಯಾಸವನ್ನು ಹೊಂದಿದೆ. ಕ್ವಿಕರ್ ವೆಬ್‌ಸೈಟ್‌ನಲ್ಲಿ (Quikr) ಈ ಅಪರೂಪದ ನಾಣ್ಯಗಳ ಬೆಲೆಯನ್ನು  5 ಲಕ್ಷ ರೂ. ಎಂದು ನಿಗದಿ ಮಾಡಲಾಗಿದೆ. 

ಈ ನಾಣ್ಯಗಳಿಗೂ ಬೇಡಿಕೆ ಇದೆ :
ಬ್ರಿಟಿಷರ ಕಾಲದಲ್ಲಿ ವಿಕ್ಟೋರಿಯಾ ರಾಣಿಯ ಒಂದು ರೂಪಾಯಿ ಬೆಳ್ಳಿ ನಾಣ್ಯದ (Silver coin) ಮೌಲ್ಯ ಎರಡು ಲಕ್ಷ ರೂಪಾಯಿಯಷ್ಟಿದೆ. ಅದೇ ರೀತಿ 1918ರಲ್ಲಿ ಒಂದು ರೂಪಾಯಿಯ ಬ್ರಿಟಿಷ್ ನಾಣ್ಯದ ಮೌಲ್ಯವನ್ನು 9 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ.  ಈ ನಾಣ್ಯಗಳನ್ನು ಇ-ಕಾಮರ್ಸ್ ಸೈಟ್ Quikr ನಲ್ಲಿ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಈ ನಾಣ್ಯಗಳಿಗೆ ಸಾಕಷ್ಟು ಬೇಡಿಕೆ ಇದೆ. ಆದರೆ ಈ ನಾಣ್ಯವನ್ನು ಎಷ್ಟು ಬೆಲೆಗೆ ಮಾರಾಟ (old coin sale) ಮಾಡಲಾಗುತ್ತದೆ ಮತ್ತು ಎಷ್ಟು ಬೆಲೆಗೆ ಖರೀದಿಸಲಾಗುತ್ತದೆ ಎನ್ನುವುದು ಮಾರಾಟಗಾರ ಮತ್ತು ಖರೀದಿದಾರರ ಮೇಲೆ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ : SBI Alert: ಮಾರ್ಚ್ 31ರೊಳಗೆ ಈ ಕೆಲಸ ಮಾಡದಿದ್ದಲ್ಲಿ block ಆಗಲಿದೆ ನಿಮ್ಮ ಅಕೌಂಟ್

ಈ ನಾಣ್ಯವನ್ನು ಈ ರೀತಿ ಮಾರಾಟ ಮಾಡಲಾಗುತ್ತದೆ (OLX) :
-ನಿಮ್ಮ ಬಳಿ ಇಂಥಹ 2 ರೂಪಾಯಿ ನಾಣ್ಯವಿದ್ದರೆ, ಅದನ್ನು ಆನ್‌ಲೈನ್‌ ಮೂಲಕ OLX ನಲ್ಲಿ ಮಾರಾಟ ಮಾಡಬಹುದು.
-ಈ ವೆಬ್‌ಸೈಟ್‌ನಲ್ಲಿ ಈ ಅಪರೂಪದ ನಾಣ್ಯಕ್ಕೆ ಖರೀದಿದಾರರು ಭಾರಿ ಮೊತ್ತವನ್ನು ಪಾವತಿಸುತ್ತಿದ್ದಾರೆ.
-ನಾಣ್ಯಗಳನ್ನು ಮಾರಾಟ ಮಾಡಲು ನೀವು ಮೊದಲು Olx ನಲ್ಲಿ ಮಾರಾಟಗಾರರಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳಿ. 
-ಇದರ ನಂತರ, ನಾಣ್ಯದ ಎದರು ಬದಿಯ ಫೋಟೋ ತೆಗೆದು ಅಪ್ಲೋಡ್ ಮಾಡಿ. 
- ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಿ.
-ವೆಬ್‌ಸೈಟ್‌ನಲ್ಲಿ ನೀವು ಒದಗಿಸಿದ ಮಾಹಿತಿಯನ್ನು ಪರಿಶೀಲಿಸಿ. 
ಈ ನಾಣ್ಯವನ್ನು ಖರೀದಿಸಲು ಬಯಸುವವರು ನಿಮ್ಮನ್ನು ಸಂಪರ್ಕಿಸುತ್ತಾರೆ.

ಈ ರೀತಿಯೂ ನಾಣ್ಯವನ್ನು ಮಾರಾಟ ಮಾಡಬಹುದು  (Quikr) :
-ನಿಮ್ಮಲ್ಲಿ 2 ರೂಪಾಯಿಯ ನಾಣ್ಯವಿದ್ದರೆ, ಅದನ್ನು ಆನ್‌ಲೈನ್‌ ಮೂಲಕ ಜಾಹೀರಾತು ವೇದಿಕೆ Quikr ನಲ್ಲಿ ಮಾರಾಟ ಮಾಡಬಹುದು.
-ಈ ವೆಬ್‌ಸೈಟ್‌ನಲ್ಲಿ ಈ ಅಪರೂಪದ ನಾಣ್ಯಕ್ಕೆ ಖರೀದಿದಾರರು ಭಾರಿ ಮೊತ್ತವನ್ನು ಪಾವತಿಸುತ್ತಿದ್ದಾರೆ.
-2 ರೂಪಾಯಿ ನಾಣ್ಯವನ್ನು ಮಾರಾಟ ಮಾಡಬೇಕಾದರೆ ಮೊದಲು ಕ್ವಿಕರ್‌ನಲ್ಲಿ ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು.
-ಇದರ ನಂತರ ನಾಣ್ಯದ ಫೋಟೋವನ್ನು ಅಪ್‌ಲೋಡ್ ಮಾಡಬೇಕು.
- ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಬೇಕು.
ನೀವು ಒದಗಿಸಿದ ಮಾಹಿತಿಯನ್ನು ವೆಬ್‌ಸೈಟ್ ಪರಿಶೀಲಿಸುತ್ತದೆ.

ಇದನ್ನೂ ಓದಿ : Komaki Venice: ಭಾರತದಲ್ಲಿ ಬಿಡುಗಡೆ ಆಗಿದೆ ಫುಲ್ ಚಾರ್ಜ್‌ನಲ್ಲಿ 120 ಕಿಮೀವರೆಗೆ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್

ಇಷ್ಟಾದ ಮೇಲೆ ನಾಣ್ಯ ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. ಈ ರೀತಿಯಲ್ಲಿ ನೀವು ನಿಮ್ಮಲ್ಲಿರುವ ನಾಣ್ಯವನ್ನು ಮಾರಾಟ ಮಾಡಬಹುದು. ನೀವು ಎಷ್ಟು ಹಣವನ್ನು ಮೇಲೆ ಅವಲಂಬಿತವಾಗಿರುತ್ತದೆ. ಕೆಲವೊಮ್ಮೆ ಅಪರೂಪದ ನಾಣ್ಯಗಳಿಗೆ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ರೂಪಾಯಿ ಸಿಗುವ ಸಾಧ್ಯತೆಯೂ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News